• Home
 • »
 • News
 • »
 • uttara-kannada
 • »
 • Kamakshi Temple: ಇವರಿಗೆ ನಿಗಿನಿಗಿ ಉರಿಯೋ ಕೆಂಡವೂ ಹೂವಿನಂತೆ! ವಿಡಿಯೋ ನೋಡಿ

Kamakshi Temple: ಇವರಿಗೆ ನಿಗಿನಿಗಿ ಉರಿಯೋ ಕೆಂಡವೂ ಹೂವಿನಂತೆ! ವಿಡಿಯೋ ನೋಡಿ

X
ಬೆಂಕಿ ಕೆಂಡ ತೆಗೆಯುವ ವಿಡಿಯೋ ನೋಡಿ

"ಬೆಂಕಿ ಕೆಂಡ ತೆಗೆಯುವ ವಿಡಿಯೋ ನೋಡಿ"

ಕಾಮಾಕ್ಷಿ ದೇವಿ ಇಲ್ಲಿ ನೆಲೆಗೊಂಡ ಪ್ರತೀಕವಾಗಿ ವರ್ಧಂತಿ ಹಾಗೂ ದೀಪೋತ್ಸವ ಕಾರ್ಯಕ್ರಮವಿರುತ್ತೆ. ಆ ದಿನ ಪಂಚ ಪ್ರಧಾನರ ಮೇಲೆ ಪ್ರಧಾನ ದೈವವಾದ ಬೇತಾಳ ದೇವರು ಆವಾಹನೆಯಾಗುತ್ತೆ.

 • News18 Kannada
 • 4-MIN READ
 • Last Updated :
 • Uttara Kannada, India
 • Share this:

  ನಿಗಿನಿಗಿ ಕೆಂಡ ಹಾಯೋದನ್ನ ನೋಡಿದ್ದೀವಿ.. ಆದ್ರಿಲ್ಲಿ ಕೆಂಡವನ್ನ ಬರೇ ಕೈಯ್ಯಲ್ಲಿ ಎತ್ತಿ ಹಾಕೋ ಭಕ್ತರನ್ನ ನೋಡಿ. ಏನಿದು, ಸುಡೋ ಬೆಂಕಿಗೆ ಹೆದರದೇ ಕೈ ಇಡ್ತಿದಾರಲ್ಲ ಅಂತೀರಾ? ಕುಮಟಾದ (Kumta) ಶಾಂತೇರಿ ಕಾಮಾಕ್ಷಿ ಹಾಗೂ ಕಾವೂರು ಕಾಮಾಕ್ಷಿ ದೇವಸ್ಥಾನದ (Kamakshi Temple Kumta)  ಭಕ್ತರಿಗೆ ಇದು ಭಕ್ತಿಯ ಪ್ರತೀಕ. ಈ ದೇಗುಲದಲ್ಲಿ ಭಕ್ತರು ಬೆಂಕಿ ಕೆಂಡ ಎಷ್ಟೇ ನಿಗಿನಿಗಿ ಸುಡ್ತಿದ್ರೂ ಕೈ ಹಾಕಿ ಹೂವಿನಂತೆ ಎಸೆಯುತ್ತಾರೆ.


  ಅಂದಹಾಗೆ ಇವರೆಲ್ಲಾ ಸಾರಸ್ವತ ಬ್ರಾಹ್ಮಣ ಕುಟುಂಬದವರು. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮೂರೂರ್ ಕಟ್ಟೆಯಲ್ಲಿಅತ್ಯಂತ ಶ್ರದ್ಧಾ ಭಕ್ತಿಯಿಂದ ಕಾಮಾಕ್ಷಿಯನ್ನು ಪೂಜಿಸುತ್ತಾರೆ.


  560 ವರ್ಷಗಳ ಹಿಂದೆ ಸ್ಥಾಪನೆಯಾದ ದೇಗುಲ
  ಕಾಮಾಕ್ಷಿ ದೇವಿಯು 560 ವರ್ಷಗಳ ಹಿಂದೆ ಸಾರಸ್ವತ ಬ್ರಾಹ್ಮಣರೊಡನೆ ಗೋವಾದಿಂದ ಕುಮಟಾಕ್ಕೆ ಬಂದು ನೆಲೆಸಿದಳು. ಕಾಮಾಕ್ಷಿಯ ಪರಿವಾರದಲ್ಲಿ ಲಕ್ಷ್ಮಿ ನಾರಾಯಣ, ರಾಮನಾಥ, ಬೇತಾಳ ದೇವರಿದೆ.


  ಇದನ್ನೂ ಓದಿ: Manjguni Temple: ಅಕ್ಷರಶಃ ವೈಕುಂಠವಾದ ಕರ್ನಾಟಕದ ತಿರುಪತಿ, 708 ವರ್ಷಗಳ ನಂತರ ಮತ್ತೆ ಭೂದಾನ


  ಮಾರ್ಗಶಿರದ ಕೃಷ್ಣ ಪಂಚಮಿಯ ದಿನ ಕಾಮಾಕ್ಷಿ ದೇವಿ ಇಲ್ಲಿ ನೆಲೆಗೊಂಡ ಪ್ರತೀಕವಾಗಿ ವರ್ಧಂತಿ ಹಾಗೂ ದೀಪೋತ್ಸವ ಕಾರ್ಯಕ್ರಮವಿರುತ್ತೆ. ಆ ದಿನ ಪಂಚ ಪ್ರಧಾನರ ಮೇಲೆ ಪ್ರಧಾನ ದೈವವಾದ ಬೇತಾಳ ದೇವರು ಆವಾಹನೆಯಾಗುತ್ತೆ.


  ಇದನ್ನೂ ಓದಿ: Kshetrapala Temple: ಈ ದೇವರಿಗೆ ಕೈಮುಗಿದು ಗಾಡಿ ಓಡಿಸಿದ್ರೆ ಆ್ಯಕ್ಸಿಡೆಂಟ್ ಆಗಲ್ವಂತೆ!


  ದೇಹಕ್ಕೆ ನೋವಾಗಲ್ವಾ?
  ದೇಹಕ್ಕೆ ನೋವಾಗಬಹುದು ಎಂಬ ಒಂದೇ ಒಂದು ಯೋಚನೆಯೂ ಈ ಸೇವೆ ಮಾಡ್ವಾಗ ಬರಲ್ವಂತೆ. ಒಟ್ಟಾರೆ ಬೇತಾಳ ದೈವವನ್ನು ಆರಾಧಿಸಿ ಕಾಮಾಕ್ಷಿಗೆ ಮಾಡುವ ಕೆಂಡದ ಸೇವೆ ನೋಡುಗರನ್ನು ಸ್ತಂಭೀಭೂತಗೊಳಿಸೋದಂತೂ ಸತ್ಯ.


  ವರದಿ: ಎ.ಬಿ.ನಿಖಿಲ್, ಮುಂಡಗೋಡ್

  Published by:ಗುರುಗಣೇಶ ಡಬ್ಗುಳಿ
  First published: