Kadubu Recipe: ಸಿಹಿಸಿಹಿಯಾದ ಉತ್ತರ ಕನ್ನಡ ಸ್ಪೆಷಲ್ ಕಡುಬು ಮಾಡಿ! ಇಲ್ಲಿದೆ ನೋಡಿ ರೆಸಿಪಿ

ಕಡುಬು ಅಂದ್ರೆ ಕರಾವಳಿ ಭಾಗದಲ್ಲಿ ಫೇಮಸ್. ಅದ್ರಲ್ಲೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾಡುವ ಕುಚಗಡುಬು ಸಿಹಿಯಾಗಿ ಇನ್ನಷ್ಟು ಟೇಸ್ಟಿ ಆಗಿರುತ್ತದೆ. ಹಾಗಿದ್ರೆ ಆ ಕುಚಗಡುಬು ಮಾಡೋದು ಹೇಗೆ ಅಂತಾ ನಾವ್ ತೋರಿಸಿಕೊಡ್ತೀವಿ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಉತ್ತರ ಕನ್ನಡ: ದೇವ್ರಿಗೆ ಏನಾದ್ರೂ ಬಗೆ ಬಗೆಯ ತಿಂಡಿ ಮಾಡೋದು, ಭಕ್ತಿಯಿಂದ ನೈವೇದ್ಯ ಮಾಡಿ ನಾವು ಸವಿಯೋದು, ಗಣೇಶನಿಗೆ (Ganesh Chaturthi) ಮಾಡೋ ಸ್ಪೆಷಲ್ ಕಡುಬನ್ನು (Kadubu) ನೀವು ಯಾವಾಗ್ ಬೇಕಾದ್ರೂ ಮಾಡಬಹುದು ಅಂತ ಗೊತ್ತಾ? ಇಲ್ಲಿದೆ ನೋಡಿ ಕುಚ್ಚಿದ ಕಡುಬು (Kadubu Recipe) ಮಾಡುವ ರೆಸಿಪಿ. ನಮ್ಮ ಉತ್ತರ ಕನ್ನಡ ಜಿಲ್ಲೆಯ (Uttara Kannada) ಮುಂಡಗೋಡಿನ ಕಮಲಾ ರಾಮದಾಸ ಹಾಗೂ ಅವರ ಸಹೋದರಿ ಸುಶೀಲಾ ಅವ್ರು ನ್ಯೂಸ್ 18 ಡಿಜಿಟಲ್ ವೀಕ್ಷಕರಿಗಾಗಿ ಸಖತ್ ಕಡುಬು ಮಾಡಿದ್ದಾರೆ ನೋಡಿ.

    ಸಿಂಪಲ್ ಸ್ವೀಟ್ ಕಡುಬು
    ಕುಚ್ಚಿದ ಕಡುಬನ್ನ ಮಾಡೋದು ಹೇಗೆಂದ್ರೆ, ಮೊದಲು ಗೋಧಿಹಿಟ್ಟು, ಬೆಲ್ಲ, ಏಲಕ್ಕಿ, ಕಡಲೆಬೇಳೆ, ಅರಶಿಣದ ಎಲೆಯನ್ನು ಸಜ್ಜು ಮಾಡಿಕೊಂಡಿಡಬೇಕು. ಬಳಿಕ ಕಡಲೇಬೇಳೆಯನ್ನು ತೊಳೆದುಕೊಂಡು ನೀರಲ್ಲಿ ಕುದಿಸಿಕೊಳ್ಳಬೇಕು.

    ಇದನ್ನೂ ಓದಿ:  Uttara Kannada: ಅರರೇ! ಕುಮಟಾದ ಈ ಊರಿನ ಗಣಪಂದ್ರೆಲ್ಲ ಒಟ್ಟಿಗೆ ಮುಳುಗ್ತಾರೆ!

    ಅದು ಬೆಂದ ಮೇಲೆ ಪುಡಿ ಮಾಡಿದ ಬೆಲ್ಲ ಮತ್ತು ಏಲಕ್ಕಿಯ ಜೊತೆ ಅದನ್ನು ರುಬ್ಬಿಕೊಂಡು, ಗೋಧಿಹಿಟ್ಟನ್ನು ಕಡುಬಿನ ಆಕಾರಕ್ಕೆ ತರಲು ಲಟ್ಟಿಸಿಕೊಂಡು ಅದಕ್ಕೆ ಹೂರಣ ತುಂಬಬೇಕು. ನಂತರ ಆ ಕಡುಬಿಗೆ ಅರಿಶಿಣದ ಎಲೆಯನ್ನು ಸೇರಿಸಿ ಇಡ್ಲಿ ಪಾತ್ರೆಯಲ್ಲಿ 20 ನಿಮಿಷ ಕುದಿಸಿದರೆ ಕುಚಗಡುಬು ರೆಡಿ.

    ಇದನ್ನೂ ಓದಿ: Sirsi Marikamba Temple Buffalo: ಮಾರಿಕಾಂಬೆಯ ಪಟ್ಟದ ಕೋಣ! ಇದು ಬಾಹುಬಲಿಗಿಂತ ಅಜಾನುಬಾಹು!

    ಗೊತ್ತಾಯ್ತಲ್ವ, ಎಷ್ಟು ಸುಲಭವಾಗಿ ಸಿಹಿ ಕುಚಗಡುಬು ರೆಡಿ ಮಾಡಬಹುದು ಅನ್ನೋದನ್ನ? ತುಂಬಾ ಸಿಂಪಲ್ ಅಲ್ವ, ಸೋ.ನೀವೂ ಮನೆಯಲ್ಲೇ ಕುಚ್ಚಿದ ಕಡುಬು ಮಾಡಿ. ರುಚಿ ರುಚಿಯಾಗಿ ಎಲ್ರೂ ಒಟ್ಟಿಗೆ ಕುಳಿತು ಸವಿಯಿರಿ.
    Published by:guruganesh bhat
    First published: