Kadaknath: ರುಚಿಯ ಜೊತೆ ಪೌಷ್ಠಿಕಾಂಶಕ್ಕೂ ಬೆಸ್ಟ್ ಈ ಕಪ್ಪು ಕೋಳಿ, ರೇಟ್ ಮಾತ್ರ ಕೆಜಿಗೆ 800 ರೂಪಾಯಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ಕೋಳಿಗೆ ಉಷ್ಟ್ರಪಕ್ಷಿಯಂತೆ ಉದ್ದ ಕುತ್ತಿಗೆ ಕಣ್ಣು, ಗರಿಯಿದೆ.  ಅಷ್ಟೇ ಯಾಕೆ, ಇದ್ರ ಮಾಂಸ ಕಪ್ಪಗಿರುತ್ತೆ. ಮಧ್ಯಪ್ರದೇಶದಲ್ಲಿ ಈ ಕೋಳಿ ಬಲು ಪವಿತ್ರ ಕೋಳಿ ಅಂತಾನೂ ಹೆಸರುವಾಸಿಯಾಗಿದೆ.

  • News18 Kannada
  • 4-MIN READ
  • Last Updated :
  • Mundgod, India
  • Share this:

ಉತ್ತರ ಕನ್ನಡ: ನಾಟಿಕೋಳಿ, ಗಿರಿರಾಜ್ ಕೋಳಿ ಹೆಸರು ಕೇಳಿರ್ತಿರಾ, ಈ ಕರಿ ಕಪ್ಪು ಕೋಳಿಯ ಹೆಸರನ್ನೊಮ್ಮೆ ಕೇಳ್ಬಿಡಿ. ಯೆಸ್. ಇದ್ರ ಹೆಸರು ಕಡಕ್​ನಾಥ್ ಕೋಳಿ ಅಂತ! ಅರೆ! ಇದ್ಯಾವ ದೇವ್ರ ಹೆಸರು ಇಟ್ಬಿಟ್ರಾ? ಅಂತಾ ಕೇಳ್ಬೇಡ್ರೀ. ಇದೊಂಥರಾ ಅಪರೂಪದಲ್ಲೇ ಅಪರೂಪದ ಕೋಳಿ. ಅದ್ರಲ್ಲೂ ಕರ್ನಾಟಕದಲ್ಲಿ ಇದನ್ನ ಸಾಕುವವರ ಸಂಖ್ಯೆ ಕಡಿಮೆಯೇ. ಹಾಗಿದ್ರೆ ಈ ಕಡಕ್​ನಾಥ್ ಕೋಳಿ (Kadaknath Chicken Speciality) ವಿಶೇಷತೆ ಏನು ಅಂತೀರ? ಈ ಸ್ಟೋರಿ ನೋಡಿ.


ಪವಿತ್ರ ಕೋಳಿ ಅಂತಾನೇ ಫೇಮಸ್!
ಇದು ಮೂಲತಃ ಮಧ್ಯಪ್ರದೇಶದ ಬುಡಕಟ್ಟುಗಳಲ್ಲಿ ಸಾಕಲ್ಪಡುವ ಕೋಳಿ. ಕಡಕ್​ನಾಥ್ ಅಥವಾ ಕಾಳಿಮಸಿ ಎಂದು ಕರೆಯಲ್ಪಡುವ ಈ ಕೋಳಿಗೆ ಉಷ್ಟ್ರಪಕ್ಷಿಯಂತೆ ಉದ್ದ ಕುತ್ತಿಗೆ ಕಣ್ಣು, ಗರಿಯಿದೆ.  ಅಷ್ಟೇ ಯಾಕೆ, ಇದ್ರ ಮಾಂಸ ಕಪ್ಪಗಿರುತ್ತೆ. ಮಧ್ಯಪ್ರದೇಶದಲ್ಲಿ ಈ ಕೋಳಿ ಬಲು ಪವಿತ್ರ ಕೋಳಿ ಅಂತಾನೂ ಹೆಸರುವಾಸಿಯಾಗಿದೆ.




ಕಡಕ್‌ನಾಥ್‌ ಕೋಳಿ ಹೇಗೆ ಸಾಕ್ತಾರೆ ಗೊತ್ತಾ?
ಕರ್ನಾಟಕದ ಮಂಡ್ಯ ಭಾಗದಲ್ಲಿ ಈ ಕೋಳಿಗಳನ್ನು ಹೆಚ್ಚಾಗಿ ಸಾಕಲಾಗುತ್ತದೆ. ಇತ್ತೀಚಿಗೆ ಪ್ರಾಯೋಗಿಕವಾಗಿ ಇದರ ಬಗ್ಗೆ ಆಸಕ್ತಿಯಿಂದ ಫಕ್ಕಿರೇಶ್ ಚಲವಾದಿ ಎಂಬ ಉತ್ತರ ಕನ್ನಡದ ಮುಂಡಗೋಡ್ ತಾಲೂಕಿನ ಹುನಗುಂದದಲ್ಲಿ ಈ ಕೋಳಿಗಳನ್ನು ಸಾಕುತ್ತಿದ್ದಾರೆ.  ಈಗಾಗಲೇ 15ರಷ್ಟು ಕಡಕ್​ನಾಥ್ ಕೋಳಿಗಳಿದ್ದು ಸಾಮಾನ್ಯ ಕೋಳಿಗಳಂತೆಯೇ ಈ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುತ್ತಿವೆ.




ಇದನ್ನೂ ಓದಿ: Uttara Kannada: ನಾಡಿಗೆ ಬಂದ ಕಾಡುಪಾಪ ಮರಳಿ ಕಾಡಿಗೆ, ಏನಿದರ ವಿಶೇಷತೆ?


ಅಬ್ಬಬ್ಬ.. ರೇಟು ನೋಡಿ!
ಅಂದಹಾಗೆ ಈ ಕಡಕ್ ನಾಥ್ ಕೋಳಿಯ ಒಂದು ಕೆಜಿ ಮಾಂಸಕ್ಕೆ ಸುಮಾರು 600 ರಿಂದ 800 ರೂಪಾಯಿ ಇರುತ್ತದೆ. ಇದ್ರ ಒಂದು ಮೊಟ್ಟೆಗೆ 40 ರಿಂದ 50 ರೂಪಾಯಿ. ಅಬ್ಬಬ್ಬ! ಅದ್ಯಾಕೆ ಅಷ್ಟು ರೇಟ್ ಅಂತೀರಾ? ಚಿಕನ್ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನಾಂಶದ ಜೊತೆಗೆ ಈ ಕೋಳಿ ಮಾಂಸದಲ್ಲಿ ಶೇಕಡಾ 25ರಷ್ಟು ಪ್ರೋಟಿನ್ ಇವೆ. ಅಲ್ಲದೇ ಈ ಕೋಳಿ 7 ತಿಂಗಳಿಗೆಲ್ಲಾ 2 ಕೆಜಿ ಅಷ್ಟು ಭಾರವಾಗಿ ಬೆಳೆದಿರುತ್ತದೆ. ವರ್ಷಕ್ಕೆ 320 ಮೊಟ್ಟೆಗಳನ್ನು ಕೊಡುತ್ತದೆ ಎನ್ನುತ್ತಾರೆ ಇದನ್ನು ಸಾಕುವವರು.




ಇದನ್ನೂ ಓದಿ: Sharavati Hanging Bridge: ನದಿಯ ಮೇಲಿನ ತೂಗುಯ್ಯಾಲೆ, ಇಲ್ಲಿ ನಿಂತ್ರೆ ಗಾಳಿಯಲ್ಲೇ ತೇಲಿದಂತಾಗುತ್ತೆ!

top videos


    ಮೂರು ಪಟ್ಟು ಲಾಭ
    ಕಬ್ಬಿಣಾಂಶದ ಆಗರವಾಗಿರುವ ಕೋಈ ಕೋಳಿ, ಒಂದರ್ಥದಲ್ಲಿ ಕೋಳಿಫಾರಂನ ಕಪ್ಪು ಬಂಗಾರನೇ ಸರಿ. ಆದರೆ ಅಳಿವಿನಂಚಿನ ದೇಸಿ ಸಂಪತ್ತಿದು. ಕಡಕ್ ನಾಥ ಕೋಳಿ ಮಧ್ಯಪ್ರದೇಶದಿಂದ ಹೊರಗೆ ಜೀವಿಸೋದೆ ಕಷ್ಟ. ಹೀಗಾಗಿ ಇಲ್ಲಿನ ವಾತಾವರಣಕ್ಕೆ ಅದನ್ನ ಒಗ್ಗಿಸಲೇ ತುಂಬಾನೇ ಸಮಯ ಬೇಕಾಗುತ್ತೆ. ಆದ್ರೆ ಒಂಚೂರು ಜಾಸ್ತಿ ಖರ್ಚು ಬಂದರೂ ಅದರ ಮೂರು ಪಟ್ಟು ಲಾಭ ಈ ಕೋಳಿ ವ್ಯಾಪಾರಕ್ಕಿದೆ.

    First published: