Leaf Helmet: ನೇರಳೆ ಮರದ ಎಲೆಯಿಂದ ಹೆಲ್ಮೆಟ್! ಇದರಿಂದ ತಲೆ ಆಗುತ್ತೆ ಕೂಲ್‌

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಹೆಲ್ಮೆಟ್‌ ಅನ್ನೂ ಪರಿಸರ ಪ್ರೇಮಿ ಆಗಿಸಬಹುದು ಅನ್ನೋದನ್ನ ಬೌದ್ಧ ಭಿಕ್ಕುವೊಬ್ಬರು ತೋರಿಸಿಕೊಟ್ಟಿದ್ದಾರೆ.

  • News18 Kannada
  • 5-MIN READ
  • Last Updated :
  • Uttara Kannada, India
  • Share this:

ಉತ್ತರ ಕನ್ನಡ: ಅರೆ, ಇದ್ಯಾವ್ ನಮೂನೆ ಹೆಲ್ಮೆಟ್ ಮಾರಾಯ್ರೆ? ಒಳ್ಳೆ ಫ್ಯಾಶನ್ ಶೋ ಕಿರೀಟದಂತಿದೆ! ಕಾಡು ಮನುಷ್ಯರ ಉಡುಪಿನಂತಿದೆ. ನಿಜ, ಹೀಗಂತ ಇವ್ರನ್ನ ನೋಡಿದವ್ರೆಲ್ಲ ಅಂದ್ಕೊಳ್ಬಹುದು. ಅಷ್ಟಕ್ಕೂ ದ್ವಿಚಕ್ರ ವಾಹನದಲ್ಲಿ ಓಡಾಡಬೇಕಾದ್ರೆ ಹೆಲ್ಮೆಟ್ (Helmet) ಕಡ್ಡಾಯ ಅನ್ನೋದೇನೋ ಗೊತ್ತಿದೆ. ಆದ್ರೆ ಇದು ಯಾವ್ ರೀತಿ ಹೆಲ್ಮೆಟ್ ಅಂತಾ (Leaf Helmet) ನಾವ್ ಹೇಳ್ತೀವಿ ನೋಡಿ.




ಈ ಎಲೆಗಳ ಟೋಪಿಯನ್ನ ಧರಿಸಿರೋ ಇವರು ಉತ್ತರ ಕನ್ನಡ ಜಿಲ್ಲೆಯ ಬೌದ್ಧ ಭಿಕ್ಕು ತೆಂಜಿನ್ ತೌಕ್ತೆ. ಮುಂಡಗೋಡದ ಟಿಬೆಟಿಯನ್ ಕಾಲೋನಿಯ ನಿವಾಸಿಯಾಗಿರುವ ತೌಕ್ತೆ ಮುಂಡಗೋಡ-ಕಲಘಟಗಿ ಮಾರ್ಗದಲ್ಲಿ ಕಿರಾಣಿ ಅಂಗಡಿ ಹೊಂದಿದ್ದಾರೆ.  ಬಹುತೇಕ ಈ ಎಲೆ ಹೆಲ್ಮೆಟ್ ಧರಿಸಿಕೊಂಡೇ ಟೂ ವೀಲ್ಹರ್ ಓಡಿಸ್ತಾರೆ.




ಜನರು ಪಿಳಿ ಪಿಳಿ ಕಣ್ಣುಗಳಿಂದ ನೋಡ್ತಾರೆ!
ಈ ಎಲೆ ಹೆಲ್ಮೆಟ್​ಗೆ ಐಎಸ್ಐ ಮಾರ್ಕ್ ಇಲ್ದೇ ಹೋದ್ರು, ತಲೆಗಂತೂ ಇದು ಪಕ್ಕಾ ತಂಪು ತಂಪು. ಹೀಗಾಗಿ ತೆಂಜಿನ್ ತೌಕ್ತೆ ಅವರು ತಾನೇ ತಯಾರಿಸಿದ ಎಲೆಗಳ ಟೋಪಿ ಧರಿಸಿಕೊಂಡು ಟೂ ವೀಲರ್ ರೈಡಿಂಗ್​ನ್ನ ಎಂಜಾಯ್ ಮಾಡ್ತಾರೆ. ರಸ್ತೆಯಲ್ಲಿ ತೌಕ್ತೆ ಓಡಾಡಬೇಕಾದ್ರೆ, ಜನ ಪಿಳಿ ಪಿಳಿ ಕಣ್ಣು ಬಿಟ್ಟು ನೋಡ್ತಾರೆ ಬಿಟ್ರೆ, ಮಿಕ್ಕಂತೆ ತೌಕ್ತೆ ಅವ್ರಿಗೆ ಇದು ಕೊಡುವಷ್ಟು ಆರಾಮದಾಯಕ ಯಾವ ಹೆಲ್ಮಟ್ಟೂ ನೀಡದು.


ಇನ್ನೂ ಓದಿ: Yakshagana: ಯಕ್ಷಗಾನ ಪುರುಷರಿಗಷ್ಟೇ ಅಲ್ಲ, ಮಹಿಳೆಯರ 'ಚಂಡೆ ಚಾತುರ್ಯ' ನೋಡಿ!




ಪರಿಸರ ಪ್ರೇಮಿ ಹೆಲ್ಮೆಟ್!
ತೆಂಜಿನ್ ತೌಕ್ತೆ ಅವರು ನೇರಳೆ ಮರದ ಎಲೆ ಕಿತ್ತು ಅದನ್ನು ಹೆಣೆದು ಈ ರೀತಿ ಟೋಪಿ ಮಾಡಿಕೊಳ್ಳುತ್ತಾರೆ. ಒಂದು ದಾರದಿಂದ ಅದನ್ನು ಉದ್ದಕ್ಕೆ ಕಟ್ಟಿಕೊಳ್ಳುತ್ತಾರೆ. 50 ವರ್ಷದ ತೆಂಜೀನ್ ಅವ್ರು ಪರಿಸರ ಪ್ರೇಮಿಗಳು ಕೂಡಾ.




ಜೊತೆಗೆ ಈ ಬಿರು ಬೇಸಿಗೆಯಲ್ಲಿ ತನ್ನ ತಲೆ ತಂಪಾಗಿ ಇರಬೇಕೆನ್ನುವ ಕಾರಣಕ್ಕಾಗಿ ಇಂತಹ ಇಕೋ ಫ್ರೆಂಡ್ಲಿ ಟೋಪಿ ಧರಿಸುತ್ತಾರೆ. ಇದ್ರಿಂದ ಪರಿಸರಕ್ಕೂ ಧಕ್ಕೆ ಇಲ್ಲ, ಕೂದಲುದುರುವ ಸಮಸ್ಯೆಯೂ ಇಲ್ಲ ಎನ್ನುತ್ತಾರೆ ತೌಕ್ತೆ ಅವರು.


ಇದನ್ನೂ ಓದಿ: Vibhuti In River: ಈ ನದಿಯಲ್ಲಿ ಸಿಗುತ್ತಂತೆ ನೈಸರ್ಗಿಕ ವಿಭೂತಿ!



top videos


    ಬೇಸಿಗೆ ಬಿಸಿಗೆ ಮುಕ್ತಿ
    ತನ್ನದೇ ತೋಟ ಹೊಂದಿರುವ ತೌಕ್ತೆ ಅವರು, ಯಾವತ್ತೂ ಕೂಡ ಹಸಿರನ್ನು ಪ್ರೀತಿಸುತ್ತಾ ಗಿಡ ನೆಡುತ್ತಾ ಬದುಕುತ್ತಿದ್ದಾರೆ. ಅದಕ್ಕೆ ಇವರ ಅಂಗಡಿ ಸುತ್ತ ಇವರು ಬೆಳೆದ ಗಿಡಮರಗಳೇ ಸಾಕ್ಷಿ. ಈಸಿ ಟು ಮೇಕ್ ಹ್ಯಾಟ್ ಗಳನ್ನು ತಯಾರಿಸಿ ಸವಾರಿ ಹೊರಡುವ ಇವರು ಸದ್ಯದ ಮಟ್ಟಿಗೆ ಮುಂಡಗೋಡ ದ "ಸಮ್ಮರ್ ಸೆನ್ಸೇಷನ್" ಆಗಿರುವುದು ವಿಶೇಷ.

    First published: