• Home
  • »
  • News
  • »
  • uttara-kannada
  • »
  • Jodukere Hanuman: ಜೋಡುಕೆರೆಯ ಮಾರುತಿಯ ಜೋಪಾನ ಮಾಡುತ್ತಿರುವ ತಾಯಂದಿರು‌!

Jodukere Hanuman: ಜೋಡುಕೆರೆಯ ಮಾರುತಿಯ ಜೋಪಾನ ಮಾಡುತ್ತಿರುವ ತಾಯಂದಿರು‌!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಹನ್ಮಪ್ಪನ ಗುಡ್ಯಾಗ ಕುಂತೇವಂದ್ರ ಅವಂಗ ಚೂರ್ ಸೇವಾ ಮಾಡ್ಭೇಕಲ್ವಾ ಮತ್ತ ಅಂತಾ ಮಾಡು ಆಡೋ ಮೂಲಕ ಈ ಭಕ್ತೆಯರು ತಮ್ಮ ದೊಡ್ಡತನ ಮೆರೆಯುತ್ತಾರೆ.

  • News18 Kannada
  • 4-MIN READ
  • Last Updated :
  • Yellapur, India
  • Share this:

    ಯಲ್ಲಾಪುರ: ಪೊರಕೆ ಹಿಡಿದು ಕಸ ಗುಡಿಸುತ್ತಿರೋ ಮಹಿಳೆಯರು. ಯಾವುದೇ ಫಲಾಪೇಕ್ಷೆ ಬಯಸದೇ ಮಾಡುವರು ಮಾಡ್ತಾರೆ ಕ್ಲೀನ್. ಇವ್ರ ಈ ಸೇವೆಗೂ, ಆ ಪುಟ್ಟ ದೇಗುಲಕ್ಕೂ (Lord Hanuman Temple) ಇದೆ ಅವಿನಾಭಾವ ಸಂಬಂಧ. ಹಾಗಿದ್ರೆ ಏನದು ಅಂತಹ ಒಡನಾಟ ಅಂತೀರಾ? ಹೇಳ್ತೀವಿ ನೋಡಿ. 


    ನೀವೇನಾದ್ರೂ ಶನಿವಾರ ಈ ದೇಗುಲದತ್ತ ಹೋದ್ರೆ ಇದೇ ಮಹಿಳೆಯರು ಸ್ವಚ್ಛತೆ ಮಾಡೋದು ಕಾಣ್ಸೇ ಕಾಣ್ಸುತ್ತೆ! ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಜೋಡುಕೆರೆ ವೀರಮಾರುತಿ ದೇವಸ್ಥಾನವೇ ಈ ಮಹಿಳೆಯರು ಕ್ಲೀನ್ ಮಾಡೋ ತಾಣ.


    ಇದನ್ನೂ ಓದಿ: Uttara Kannada: ಬೌದ್ಧ ಭಿಕ್ಕುಗಳಿಂದ 49 ದಿನ ಶ್ರಾದ್ಧ ಆಚರಣೆ!


    ಎಲ್ಲೂ ಕಸ, ಕಳೆ ಸಿಗೋದೇ ಇಲ್ಲ!
    ಯಲ್ಲಾಪುರದ ಈ ಜೋಡುಕೆರೆ ಮಾರುತಿ ದೇವಸ್ಥಾನದ ಸುತ್ತಮುತ್ತ ನಿಮಗೆ ಎಲ್ಲೂ ನಿರುಪಯುಕ್ತ ಕಳೆ, ಕಸ ಕಂಡುಬರದೇ ಇರೋಕೆ ಈ ಮಹಿಳೆಯರೇ ಕಾರಣ. ಈ ದೇವಸ್ಥಾನ ಜೌಗು ಪ್ರದೇಶಕ್ಕೆ ಸಮೀಪದಲ್ಲಿರೋದ್ರಿಂದ ಸಿಕ್ಕಾಪಟ್ಟೆ ಗಿಡಗಂಟಿ ಬೆಳೆಯುತ್ತೆ. ಇದನ್ನ ಮನಗಂಡು ಯಾರ ಪ್ರೇರಣೆಯಿಲ್ಲದೇ, ಬರೀ ಗುಡಿಯ ಅರ್ಚಕರಾದ ನಾರಾಯಣ ಭಟ್ಟರ ಮನವಿಯ ಮೇಲೆ ಈ ಮಹಿಳೆಯರು ಪ್ರತಿ ಶನಿವಾರ ಶ್ರಮದಾನ ಮಾಡಿ ಹೋಗುತ್ತಾರೆ.




    ಇದನ್ನೂ ಓದಿ: Positive Story: ಹುಟ್ಟುಹಬ್ಬಕ್ಕೆ ಚಾಕೊಲೇಟ್ ಅಲ್ಲ, ಸಸಿ ಗಿಫ್ಟ್! ಶಿರಸಿಯ ಸರ್ಕಾರಿ ಶಾಲೆಯಲ್ಲಿ ಮಾದರಿ ಕಾರ್ಯ


    ಹನ್ಮಪ್ಪನ ಸೇವೆ
    ಹನ್ಮಪ್ಪನ ಗುಡ್ಯಾಗ ಕುಂತೇವಂದ್ರ ಅವಂಗ ಚೂರ್ ಸೇವಾ ಮಾಡ್ಭೇಕಲ್ವಾ ಮತ್ತ ಅಂತಾ ಮಾಡು ಆಡೋ ಮೂಲಕ ಈ ಭಕ್ತೆಯರು ತಮ್ಮ ದೊಡ್ಡತನ ಮೆರೆಯುತ್ತಾರೆ.

    Published by:ಗುರುಗಣೇಶ ಡಬ್ಗುಳಿ
    First published: