Jobs In Sirsi: ಶಿರಸಿಯ ಬ್ಯಾಂಕ್​ನಲ್ಲಿ ಬಗೆಬಗೆಯ ಉದ್ಯೋಗಾವಕಾಶ! ₹ 97,100 ವರೆಗೂ ಸಂಬಳ

ರಾಜ್ಯದ ಅತ್ಯುತ್ತಮ ಸಹಕಾರಿ ಬ್ಯಾಂಕ್​ಗಳಲ್ಲಿ ಒಂದು ಎಂದೇ ಉತ್ತರ ಕನ್ನಡ ಭಾಗದಲ್ಲಿ ಪ್ರಸಿದ್ಧವಾಗಿದೆ. ಹಲವು ದಶಕಗಳಿಂದ ಈ ಭಾಗದಲ್ಲಿ ಸ್ವಾಮ್ಯತೆ ಸ್ಥಾಪಿಸಿರುವ ಈ ಬ್ಯಾಂಕ್ ಹಲವು ಸಂತೃಪ್ತ ಗ್ರಾಹಕರನ್ನು ಹೊಂದಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಶಿರಸಿ: ನಿಮಗೆ ಊರಲ್ಲೇ ಇದ್ದು ಕೆಲಸ ಮಾಡಬೇಕು ಎಂಬ ಆಸೆ ಇದೆಯೇ? ಬೆಂಗಳೂರೋ ಅಥವಾ ಬೇರೆ ಊರಿಗೆ ಹೋಗುವುದಕ್ಕಿಂತ ನಿಮ್ಮ ಮನೆಯ ಹತ್ತಿರವೇ ಇದ್ದು ಕೆಲಸ ಮಾಡಲು ಆಸಕ್ತಿ ಇದೆಯೇ? ಉತ್ತರ ಕನ್ನಡದ ಯುವಕ ಯುವತಿಯರಿಗೆ ಒಂದೊಳ್ಳೆ ಅವಕಾಶವೊಂದು ಇಲ್ಲಿದೆ. ಶಿರಸಿ ಅರ್ಬನ್ ಬ್ಯಾಂಕ್ (ಲಿ) (Sirsi Urban Bank) ಹಲವು ಉದ್ಯೋಗಾವಕಾಶಗಳಿವೆ. ಇದರ ಸಂಪೂರ್ಣ ಉಪಯೋಗ ಪಡೆದುಕೊಳ್ಳುವಂತೆ ಬ್ಯಾಂಕಿನ ಪ್ರಕಟಣೆಯು ತಿಳಿಸಿದೆ. ರಾಜ್ಯದ ಅತ್ಯುತ್ತಮ ಸಹಕಾರಿ ಬ್ಯಾಂಕ್​ಗಳಲ್ಲಿ ಒಂದು ಎಂದೇ ಉತ್ತರ ಕನ್ನಡ ಭಾಗದಲ್ಲಿ ಪ್ರಸಿದ್ಧವಾಗಿದೆ. ಹಲವು ದಶಕಗಳಿಂದ ಈ ಭಾಗದಲ್ಲಿ ಸ್ವಾಮ್ಯತೆ ಸ್ಥಾಪಿಸಿರುವ ಈ ಬ್ಯಾಂಕ್ ಹಲವು ಸಂತೃಪ್ತ ಗ್ರಾಹಕರನ್ನು ಹೊಂದಿದೆ.































    ಬ್ಯಾಂಕ್​ನ ಹೆಸರುಶಿರಸಿ ಅರ್ಬನ್ ಬ್ಯಾಂಕ್ (ಲಿ)
    ಯಾವ ಊರಲ್ಲಿ?ಉತ್ತರ ಕನ್ನಡ ಜಿಲ್ಲೆಯ ಶಿರಸಿ
    ಯಾವ ಯಾವ ಹುದ್ದೆಗಳು ಲಭ್ಯವಿವೆ?

    1. ಶಾಖಾ ವ್ಯವಸ್ಥಾಪಕ

    2. ಲೆಕ್ಕಿಗ

    3. ಕಾಯ್ದೆ ಅಧಿಕಾರಿ

    4. ವ್ಯವಸ್ಥಾಪಕ (ಮಾಹಿತಿ ತಂತ್ರಜ್ಞಾನ)
    ಅರ್ಹತೆ ಮತ್ತು ಮಾನದಂಡಗಳೇನು?ಗಣಿತ, ಸಂಖ್ಯಾಶಾಸ್ತ್ರ ಅಥವಾ ಅರ್ಥಶಾಸ್ತ್ರದಲ್ಲಿ ಪದವಿ
    ಅನುಭವ ಎಷ್ಟಿರಬೇಕು?5 ವರ್ಷಗಳ
    ಸಂಬಳ ಎಷ್ಟಿರಲಿದೆ?52,650 ರೂಪಾಯಿಯಿಂದ 97,100 ರೂಪಾಯಿ
    ಹೇಗೆ ಅರ್ಜಿ ಸಲ್ಲಿಸುವುದು?ಶಿರಸಿ ಅರ್ಬನ್ ಬ್ಯಾಂಕ್ (ಲಿ)  ಸಂಪರ್ಕಿಸಿ

    ಯಾವ ಯಾವ ಹುದ್ದೆಗಳು ಲಭ್ಯವಿವೆ?

    1. ಶಾಖಾ ವ್ಯವಸ್ಥಾಪಕ

    2. ಲೆಕ್ಕಿಗ

    3. ಕಾಯ್ದೆ ಅಧಿಕಾರಿ

    4. ವ್ಯವಸ್ಥಾಪಕ (ಮಾಹಿತಿ ತಂತ್ರಜ್ಞಾನ)

    ಒಟ್ಟು ಎಂಟು ಹುದ್ದೆಗಳನ್ನು ಆಯ್ಕೆ ಮಾಡಲು ಸಂಸ್ಥೆ ತೀರ್ಮಾನಿಸಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಆಸಕ್ತ ಯುವಕ ಯುವತಿಯರು ಈ ಉದ್ಯೋಗ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

    ಅರ್ಹತೆ ಮತ್ತು ಮಾನದಂಡಗಳೇನು? ಇಲ್ಲಿದೆ ನೋಡಿ ವಿವರ
    ಶಿರಸಿ ಅರ್ಬನ್ ಬ್ಯಾಂಕ್ (ಲಿ) ಯಲ್ಲಿ ಖಾಲಿ ಇರುವ ಅರ್ಜಿ ಸಲ್ಲಿಸಬಯಸುವ ಯಾವುದೇ ಅಭ್ಯರ್ಥಿಗಳಿಗೆ ಕೆಲವು ಅರ್ಹತೆ ಮತ್ತು ಮಾನದಂಡಗಳನ್ನು ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿರಬೇಕು. ಹಾಗೂ ಬಿ.ಎಸ್​ಸಿಯಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರವನ್ನು ಅಧ್ಯಯನ ಮಾಡಿರಬೇಕು ಹಾಗೂ ಬಿ.ಎ ಮಾಡಿದ್ದರೆ ಗಣಿತ, ಸಂಖ್ಯಾಶಾಸ್ತ್ರ, ಅರ್ಥಶಾಸ್ತ್ರವನ್ನು ಕಡ್ಡಾಯವಾಗಿ ಅಧ್ಯಯನ ಮಾಡಿರಬೇಕು.

    ಇದನ್ನೂ ಓದಿ: Uttara Kannada: ಹುಷಾರು ತಪ್ಪಿದರೆ ದೇವರೇ ಗತಿ! ಇದು ಹೊನ್ನಾವರದ ಮಹಿಮೆ!

    ಬ್ಯಾಂಕಿಂಗ್ ವಿಭಾಗದಲ್ಲಿ 5 ವರ್ಷಗಳ ಅನುಭವ ಹೊಂದಿರಬೇಕು. ಕೆವೈಸಿ /ಎಂಎಮ್ಎಲ್ / ರಿಸ್ಕ್ ಮ್ಯಾನೇಜ್ಮೆಂಟ್ /ಕ್ರೆಡಿಟ್ ಅಪ್ರೇಸಲ್ / ಎಂಇಎಸ್ / ಸ್ಟೆಟ್ಯೂಚರಿ ಕಂಪ್ಲಾಯನ್ಸ್ /ಬಿಸಿನೆಸ್ ಡೆವಲಪ್ಮೆಂಟ್ / ಇನ್ವೆಸ್ಟ್ಮೆಂಟ್ / ಗ್ರಾಹಕ ಸೇವೆ ಹಾಗೂ ಕುಂದು ಕೊರತೆ ನಿರ್ವಹಣೆ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.

    ಇದನ್ನೂ ಓದಿ: Havyaka Food Recipes: ಭಾರೀ ರುಚಿರುಚಿ ಹವ್ಯಕರ ಹಲಸಿನ ಬುಡ್ನಾ ! ಇಲ್ಲಿದೆ ರೆಸಿಪಿ

    ವೇತನ
    52,650 ರೂಪಾಯಿಯಿಂದ 97,100 ರೂಪಾಯಿಯಂತೆ ಆದಾಯ ಸಿಗಲಿದ್ದು ಕರ್ನಾಟಕ ಸರ್ಕಾರದ ನೌಕರರಿಗೆ ಸಿಗುವ ಎಲ್ಲಾ ತುಟ್ಟಿಭತ್ಯೆ ಹಾಗೂ ಇನ್ನಿತರ ಹತ್ಯೆಗಳು ಲಭ್ಯವಾಗಲಿವೆ‌.

    ವರದಿ: ಎ.ಬಿ.ನಿಖಿಲ್, ಮುಂಡಗೋಡ
    Published by:guruganesh bhat
    First published: