ಹುಬ್ಬಳ್ಳಿ: ಭಾರತೀಯ ಸೇನೆಗೆ ಶಸ್ತ್ರಾಸ್ತ ಪೂರೈಕೆಯ ಅನುಮೋದನೆ ಪಡೆದ ಹುಬ್ಬಳ್ಳಿ (Jobs In Hubballi) ನೂತನ ಸ್ಟಾರ್ಟ್ ಆಪ್ ಕಂಪೆನಿಯಾದ ಅಸ್ತ್ರದಲ್ಲಿ ಮತ್ತೊಮ್ಮೆ ಉದ್ಯೋಗಾವಕಾಶ ಯುವಕರಿಗೆ ದೊರೆಯುತ್ತಿದೆ. ಈ ಹಿಂದೆ ಮೊದಲ ಹಂತದ ಮಶಿನಿಸ್ಟ್ ಹುದ್ದೆಗಳಿಗೆ ಕರೆಯಲಾಗಿದ್ದ ಹುದ್ದೆಗಳೊಡನೆ ಇನ್ನೂ ಹೆಚ್ಚುವರಿ ಹುದ್ದೆಗಳನ್ನು ಸೇರಿಸಿ ಅಸ್ತ್ರ ಕಂಪೆನಿ (Astra Startup Jobs) ತನ್ಮೂಲಕ ಪ್ರಾದೇಶಿಕ ಮಟ್ಟದಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ಭರಪೂರ ಕೊಡುಗೆ ನೀಡುತ್ತಿದೆ.
ಹಾಗಾದರೆ ಆ ಹುದ್ದೆಗಳ್ಯಾವುವು? ಹುದ್ದೆಯ ಡಿಟೇಲ್ಸ್ ಏನು? ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ.
ಸಂಸ್ಥೆಯ ಹೆಸರು | ಅಸ್ತ್ರ |
ಹುದ್ದೆ/ಕೆಲಸದ ಹೆಸರು | ಸಿಎನ್ಸಿ ಮಶಿನ್ ಪ್ರೋಗ್ರಾಮಿಂಗ್ ಹಾಗೂ ಟೂಲ್ ಡೈ ಮೇಕರ್ ನಿರ್ವಹಣೆ |
ಅರ್ಹತೆ | ಐಟಿಐ |
ಹೆಚ್ಚಿನ ಮಾಹಿತಿಗಾಗಿ | 08370-200317, 7259810138 |
ಕೊನೆಯ ದಿನಾಂಕ | ಕೊನೆಯ ದಿನಾಂಕ ಇಲ್ಲ, ನಿರಂತರ ಪ್ರಕ್ರಿಯೆ |
ವಿಳಾಸ | ಕಾಡನಕೊಪ್ಪ,ಕಲಘಟಗಿ ತಾಲೂಕು, ಧಾರವಾಡ ಜಿಲ್ಲೆ (581204) |
ವಿವಿಧ ವಿಭಾಗಗಳಲ್ಲಿ ಅವಕಾಶ
ಹಾಗೂ ಐಟಿಐನ ಫಿಟ್ಟರ್ ವಿಭಾಗದವರು ಡ್ರಿಲ್ಲಿಂಗ್, ಟ್ಯಾಪಿಂಗ್ ಮತ್ತು ಮಿಲ್ಲಿಂಗ್ ಮಾಡಲು ಬೇಕಾಗಿದ್ದು ನೀವು ಐಟಿಐ ವಿಭಾಗದಲ್ಲಿ ಫಿಟ್ಟರ್ ಆಗಿ ಪರಿಣಿತಿ ಹೊಂದಿದ್ದರೆ ನಿಮಗೂ ಇಲ್ಲಿ ಅವಕಾಶವಿದೆ.
ಐಟಿಐ ಓದಿದವರಿಗೆ ಉತ್ತಮ ಅವಕಾಶ
ಸಿಎನ್ಸಿ ಮಶಿನ್ ಪ್ರೋಗ್ರಾಮಿಂಗ್ ಹಾಗೂ ಟೂಲ್ ಡೈ ಮೇಕರ್ಗಳು ಮಶೀನ್ಗಳ ನಿರ್ವಹಣೆಗೆ ಬೇಕಾಗಿದ್ದಾರೆ.
ಡಿಪ್ಲೊಮಾ ಓದಿದವರಿಗೂ ಇದೆ ಆಫರ್
ಇನ್ನೂ ಡಿಪ್ಲೊಮಾ ವಿಭಾಗದಲ್ಲಿ ವಿದ್ಯಾಭ್ಯಾಸ ಪಡೆದವರಿಗೆ ಕೂಡ ಇಲ್ಲಿ ಅವಕಾಶವಿದೆ. ಅವರು ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಜೊತೆಗೆ ನೀವು ಯಾವುದೇ ಪದವಿ ಪಡೆದಿದ್ದಲ್ಲಿ ನಿಮ್ಮನ್ನು ಆಫೀಸ್ ಹಾಗೂ ಕೈಗಾರಿಕಾ ವಿಭಾಗದಲ್ಲಿ ನೇಮಿಸಿಕೊಳ್ಳಲಾಗುತ್ತದೆ.
ಇದನ್ನೂ ಓದಿ: Rudra Veena: ಭಾರತದ 8 ರುದ್ರವೀಣೆಯ ವಾದಕರಲ್ಲಿ ಉತ್ತರ ಕನ್ನಡದ ಇವರೂ ಒಬ್ಬರು!
ಅರ್ಜಿ ಸಲ್ಲಿಸಲು ನಿಗದಿತ ದಿನಾಂಕವಿಲ್ಲ!
ಇದೆಲ್ಲಾ ಕೂಡ ನೇರ ಮುಖತಃ ಸಂದರ್ಶನದ ಮೂಲಕವೇ ನಡೆಯುವುದರಿಂದ ನೀವು ಅಸ್ತ್ರದ ಕಛೇರಿಗೆ ಭೇಟಿ ನೀಡಿ ನಿಮ್ಮ ರೆಸ್ಯೂಮ್ ಸಲ್ಲಿಸಿ ಆಯ್ಕೆ ಪ್ರಕ್ರಿಯೆಗೆ ಹಾಜರಿರಬೇಕು. ಅರ್ಜಿ ಸಲ್ಲಿಸಲು ಯಾವುದೇ ನಿರ್ದಿಷ್ಟ ನಿಗದಿತ ಕೊನೆಯ ದಿನಾಂಕವಿಲ್ಲ. ಇದೊಂದು ನಿರಂತರ ಪ್ರಕ್ರಿಯೆ ಆಗಿದ್ದು ಈಗ ತಾನೇ ವಿದ್ಯಾಭ್ಯಾಸ ಮುಗಿಸಿಕೊಂಡ ತರುಣರಿಗೂ ಅವಕಾಶವಿದೆ.
ಇದನ್ನೂ ಓದಿ: KSRTC ಡ್ರೈವರ್, ಕಂಡಕ್ಟರ್ರಿಂದ ವಾಪಸ್ ಸಿಕ್ತು ಲಕ್ಷ ಲಕ್ಷ ಬೆಲೆಯ ಬಂಗಾರ!
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಇವೆಲ್ಲಾ ವಿಷಯಗಳ ಇನ್ನೂ ಹೆಚ್ಚಿನ ಮಾಹಿತಿಗಾಗಿ 08370-200317 ಹಾಗೂ 7259810138 ಈ ನಂಬರ್ ಗಳನ್ನು ಸಂಪರ್ಕಿಸಬಹುದು ಹಾಗೂ ಕಾಡನಕೊಪ್ಪ,ಕಲಘಟಗಿ ತಾಲೂಕು, ಧಾರವಾಡ ಜಿಲ್ಲೆ (581204) ಈ ವಿಳಾಸಕ್ಕೆ ಭೇಟಿ ಕೊಟ್ಟು ಸಂದರ್ಶನದಲ್ಲಿ ಭಾಗಿಯಾಗಬಹುದು. ಬರುವಾಗ ನಿಮ್ಮ ಶೈಕ್ಷಣಿಕ ಮಾಹಿತಿ ಹಾಗೂ ಪರಿಚಯ ಪತ್ರ, ಅನುಭವ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್ ಅನ್ನು ಒದಗಿಸಬೇಕಿದೆ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ