ಉತ್ತರ ಕನ್ನಡ: ಬನಿಯನ್, ಪಂಚೆ ಹಾಕೊಂಡು ಗರಿ ಗರಿ ಜಿಲೇಬಿ ಮಾಡ್ತಿರೋ ಈ ಹಿರಿಯರನ್ನ ನೋಡ್ತಿದ್ರೆ ಇದ್ಯಾರೋ ಕಾಮನ್ ಅಡುಗೆ ಭಟ್ಟರು ಅಂದ್ಕೋತೀವಿ ಅಲ್ವ? ಆದ್ರೆ ಈ ಸಿಹಿ ವ್ಯಾಪಾರಿ ಊರಿಗೆ ಉಪಕಾರಿನೂ (Positive Story) ಹೌದು. ಕೇವಲ, ಜಿಲೇಬಿ ಮೂಲಕ ಮಾತ್ರವಲ್ಲ, ಇವರು ಶಿಕ್ಷಣದ ಕ್ರಾಂತಿ (Education) ನಡೆಸುವ ಮೂಲಕನೂ ಊರಿಗೆ ಸಿಹಿ ಹಂಚಿದ್ದಾರೆ. ಇದು ಅಂತಿಂತ ಸಿಹಿಯಲ್ಲ, ಊರನ್ನೇ ಬೆಳಗುವ, ಇನ್ನೊಬ್ಬರ ಬದುಕಿಗೆ ಬೆಳಕಾಗುವ ಸಿಹಿ.
ತಲೆತಲಾಂತರದಿಂದ ಮಿಠಾಯಿ ಬ್ಯುಸಿನೆಸ್!
ಯೆಸ್, ಇವರು ಕುಮಟಾದ ಕಾರ್ ಸ್ಟ್ರೀಟ್ ನಿವಾಸಿ, ಜಿಲ್ಲೆಯ ಪ್ರಸಿದ್ಧ ವ್ಯಾಪಾರಿ ಹನುಮಂತ ನಾಯ್ಕ್ ಅವರ ಮಗ ವಾಸುದೇವ್ ಹನುಮಂತ ನಾಯ್ಕ್ ಬೆಣ್ಣೆ. ಇವರು ತಮ್ಮ ಹಿರಿಯರು ತಲೆತಲಾಂತರದಿಂದ ನಡೆಸಿಕೊಂಡು ಬಂದ ‘‘ಬೆಣ್ಣೆ ಮಿಠಾಯಿ‘‘ ಅಂಗಡಿಯನ್ನ ಮುಂದುವರೆಸಿಕೊಂಡು ಬಂದಿದ್ದಾರೆ. ಅಷ್ಟಕ್ಕೇ ಸೀಮಿತವಾಗದೇ ಊರ ಮಂದಿಯ ಶಿಕ್ಷಣಕ್ಕೂ ನೆರವಾಗಿದ್ದಾರೆ.
ಶಾಲೆ, ಕಾಲೇಜಿನ ರೂವಾರಿ
ಇವರು ಕೇವಲ ಜಿಲೇಬಿ ಮಿಠಾಯಿ ಮಾರಾಟ ಮಾಡಿ ಹಣ ಗಳಿಸಿ ಉದ್ಯಮ ಇಂಪ್ರೂವ್ ಮಾಡಿಕೊಳ್ಳೋದಕ್ಕೆ ಮಾತ್ರ ಸೀಮಿತರಾದವರಲ್ಲ. ಬದಲಿಗೆ, ಕುಮಟಾದಲ್ಲಿ ನೆಲ್ಲಿಕೆರಿಯ ಬೆಣ್ಣೆ ಸರ್ಕಾರಿ ಕಾಲೇಜೊಂದನ್ನ ಕಟ್ಟಿಸಿದ್ರೆ, ಕಾರವಾರದಲ್ಲಿ ರಮಾಬಾಯಿ ಹನುಮಂತ ಬೆಣ್ಣೆ ಇಂಗ್ಲೀಷ್ ಮೀಡಿಯಮ್ ಹೆಸರಿನ ಹೈಸ್ಕೂಲ್ ಕಟ್ಟಿಸಿದ್ದಾರೆ.
ಇದನ್ನೂ ಓದಿ: Uttara Kannada: ಮರ ಹತ್ತೋದೇನು, ಬಾವಿ ಇಳಿಯೋದೇನು! ಶಿರಸಿಯ ಈ ಲೇಡಿ ಮುಂದೆ ಸೂಪರ್ಮ್ಯಾನ್ ಸಹ ಏನಲ್ಲ!
ಪರೋಪಕಾರಿ ಜೀವನ
ಹೀಗೆ ಬಿ.ಕಾಂ ಪದವೀಧರನಾಗಿರುವ ವಾಸುದೇವ್ ನಾಯ್ಕ್ ಅವರು ಊರಿಗೆಲ್ಲ ಶಿಕ್ಷಣ ಸಂಸ್ಥೆ ಮೂಲಕ ಸಿಹಿ ಹಂಚಿದ್ದಾರೆ. ಪರೋಪಕಾರಿಯಾಗಿ ಜೀವನ ನಡೆಸುತ್ತಾ, ಸಮಾಜಕ್ಕಾಗಿ ಬದುಕುತ್ತಿದ್ದಾರೆ. ಈ ಎರಡೂ ವಿದ್ಯಾಸಂಸ್ಥೆಗಳು ಅದೆಷ್ಟೋ ಮಕ್ಕಳ ಬದುಕಿಗೆ ಭವಿಷ್ಯ ಕಟ್ಟಿಕೊಟ್ಟಿದೆ.
ಇದನ್ನೂ ಓದಿ: Uttara Kannada: 4 ಮಂದಿ, 15 ಕೆಜಿ ಬಾಡೂಟ, ಇಲ್ಲಿ ಉಂಡೋನೆ ಮಹಾಶೂರ!
ಒಟ್ಟಿನಲ್ಲಿ ವಾಸುದೇವ್ ನಾಯ್ಕ್ ಅವರು ಕೇವಲ ಸಿಹಿ ಉದ್ಯಮದಲ್ಲಿ ಹಣ, ಹೆಸರು ಗಳಿಸಿಕೊಳ್ಳದೇ, ಊರು ಪರವೂರ ಮಕ್ಕಳ ಶಿಕ್ಷಣಕ್ಕೆ ಬೇಕಾದ ವಿದ್ಯಾಮಂದಿರ ಕಟ್ಟುವ ಮೂಲಕ ಜನಮಾನಸದಲ್ಲಿ ‘‘ಸಿಹಿ ವ್ಯಾಪಾರಿ ಪರೋಪಕಾರಿ‘‘ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ