ಉತ್ತರ ಕನ್ನಡ: ನೆಲದಲ್ಲಿ ಸಾಲಾಗಿ ಕೂತಿರೋ ಮಕ್ಕಳಿಗೆ ಮಹಿಳೆಯಿಂದ ಕನ್ನಡ ಪಾಠ. ಯಾವುದೇ ಪ್ರತಿಫಲ ಬಯಸದೇ ಟ್ಯೂಶನ್ ನೀಡೋ ಶಿಕ್ಷಕಿ ಇವರು. ಗೌಳಿ ಸಮುದಾಯದಲ್ಲೇ (Gowli Community) ಮೊದಲ ಸ್ನಾತಕೋತ್ತರ ಪದವೀಧರೆಯ ಸಾಧನೆ ನಿಜಕ್ಕೂ ಗ್ರೇಟ್. ಹಾಗಿದ್ರೆ ಯಾರಿವರು ಮಹಿಳೆ? ಇವರ ಸಾಧನೆ ಏನು? ಎಲ್ಲವನ್ನೂ ತಿಳಿಸ್ತೀವಿ ನೋಡಿ.
ಯೆಸ್, ಇವರು ಶಿವಮೊಗ್ಗ ಮೂಲದ ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದ ಸುವರ್ಣಾ ಪಾಟೀಲ್. ಸದ್ಯ ಉತ್ತರ ಕನ್ನಡದ ಮುಂಡುಗೋಡಿನ ಕಲ್ಕಿಕರದ ತನ್ನ ಪತಿ ಮನೆಯಲ್ಲಿ ನೆಲೆಸಿದ್ದಾರೆ. ಹೇಳಿ ಕೇಳಿ ಗೌಳಿ ಸಮುದಾಯದಲ್ಲಿ ಹುಟ್ಟಿದ ಸುವರ್ಣಾ ಪಾಟೀಲ್ ಅವ್ರಿಗೆ ಪಿಯುಸಿ ಶಿಕ್ಷಣ ಮುಗಿಯುತ್ತಲೇ ಮದುವೆಯ ಬಂಧನಕ್ಕೆ ಒಳಗಾದರು. ಆದ್ರೆ ಸುವರ್ಣಾ ಅವರಲ್ಲಿದ್ದ ಓದುವ ಛಲ ಮಾತ್ರ ಕುಂದಲಿಲ್ಲ.
ಗಂಡ ಸೇನೆಯಲ್ಲಿದ್ರು!
ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ತನ್ನ ಪತಿಯ ಅನುಮತಿ ಪಡೆದು ದೂರಶಿಕ್ಷಣದ ಮೂಲಕ ಬಿಎ ಪದವಿ ಪಡೆದರು. ಜೊತೆಗೆ ಡಿಎಡ್ ಮುಗಿಸಿದ ಸುವರ್ಣಾ ಪಾಟೀಲ್ ಅವ್ರ ಆಸಕ್ತಿ ಕಡಿಮೆಯಾಗಲಿಲ್ಲ.
ರಾತ್ರಿ 2ರವರೆಗೂ ಓದು!
ಇಷ್ಟಾಗುತ್ತಲೇ ಎರಡು ಪುಟ್ಟ ಮಕ್ಕಳು ಆದರೂ ಧಾರವಾಡಕ್ಕೆ ಬಂದು ಎಂಎ ಹಿಂದಿ ವಿಭಾಗಕ್ಕೆ ಸೇರಿಕೊಂಡರು. ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಕಳಿಸಿ ತಾವು ಕಾಲೇಜಿಗೆ ಹಾಜರಾಗುತ್ತಿದ್ದರು. ರಾತ್ರಿಯಿಡೀ 2 ಗಂಟೆ ತನಕ ಓದುತ್ತಿದ್ದರು. ಈ ರೀತಿ ಪಟ್ಟ ಶ್ರಮ ಕೊನೆಗೂ ಫಲ ನೀಡಿತು. ಹೀಗೆ ಗೌಳಿ ಸಮುದಾಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನ ಪಡೆದುಕೊಂಡ ಮೊದಲ ಮಹಿಳೆಯಾಗಿ ಇವರು ಹೊರಹೊಮ್ಮಿದರು.
ಇದನ್ನೂ ಓದಿ: Uttara Kannada: ಸಲಾಂ ಸಾಧಕಿ! ಇವರು ನೂರಕ್ಕೂ ಹೆಚ್ಚು ಪೋಸ್ಟ್ ಮಾರ್ಟಂ ಮಾಡಿರುವ ಗಟ್ಟಿಗಿತ್ತಿ ವೈದ್ಯೆ!
ಊರಿನ ಮಕ್ಕಳಿಗೆ ಉಚಿತ ಪಾಠ! ಕನ್ನಡ ಕಲಿಕೆ!
ಅಷ್ಟಕ್ಕೇ ಮುಗಿಯದ ಸುವರ್ಣಾ ಪಾಟೀಲ್ ಕನಸು ಇದೀಗ ಅವರನ್ನ ಬಿಎಡ್ ಕಲಿಸಲು ಪ್ರೇರೇಪಿಸಿದೆ. ಈಗಲೂ ಕಲಿಯುತ್ತಿರುವ ಸುವರ್ಣಾ ಅವರು, ಗೋಲ್ಡ್ ಮೆಡಲಿಸ್ಟ್ ಆದರೂ ಇಂದಿಗೂ ವಿದ್ಯಾರ್ಥಿಯಾಗಿಯೇ ಇದ್ದಾರೆ. ಜೊತೆಗೆ ತಮ್ಮ ಊರಿನ ಮಕ್ಕಳಿಗೆ ಉಚಿತವಾಗಿ ಟ್ಯೂಶನ್ ತೆಗೆದುಕೊಳ್ಳುತ್ತಾರೆ. ಅಲ್ಲದೇ ಕನ್ನಡ ಬಾರದ ಎಷ್ಟೋ ಗೌಳಿ ಮಕ್ಕಳಿಗೆ ಕನ್ನಡ ಕಲಿಸಿದ್ದಾರೆ.
ಇದನ್ನೂ ಓದಿ: Sainik School: ಸೈನಿಕ ಶಾಲೆಗೆ ಪ್ರವೇಶ ಪಡೆದ 25 ಹೆಣ್ಮಕ್ಕಳು, ಕಡು ಕಷ್ಟದ ತರಬೇತಿ ಇವರಿಗೆ ನೀರು ಕುಡಿದಷ್ಟೇ ಸಲೀಸು!
ಹೀಗೆ ಸುವರ್ಣಾ ಪಾಟೀಲ್ ಅವರು ಶಿಕ್ಷಣದಿಂದ ದೂರವೇ ಉಳಿದಿದ್ದ ಗೌಳಿ ಸಮುದಾಯದಿಂದ ಬಂದರೂ ಉತ್ತಮ ಶಿಕ್ಷಣ ಪಡೆದು ಮಾದರಿಯಾಗಿದ್ದಾರೆ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ