Uttara Kannada: ಸಲಾಂ ಸಾಧಕಿ! ಇವರು ನೂರಕ್ಕೂ ಹೆಚ್ಚು ಪೋಸ್ಟ್ ಮಾರ್ಟಂ ಮಾಡಿರುವ ಗಟ್ಟಿಗಿತ್ತಿ ವೈದ್ಯೆ!

ಧೀರ ವೈದ್ಯೆ

ಧೀರ ವೈದ್ಯೆ

ಈಗಾಗಲೇ ನೂರಕ್ಕೂ ಹೆಚ್ಚು ಪೋಸ್ಟ್ ಮಾರ್ಟಂ ಮಾಡಿರುವ ಇವರು, ಪೋಕ್ಸೋ ಕೇಸ್​ನ ಸಂತ್ರಸ್ತೆಯರ ವೈದ್ಯಕೀಯ ಪರೀಕ್ಷೆ ನಡೆಸಿ ಹೆಣ್ಮಕ್ಕಳಿಗೆ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

  • News18 Kannada
  • 5-MIN READ
  • Last Updated :
  • Uttara Kannada, India
  • Share this:

    ಉತ್ತರ ಕನ್ನಡ: ಅಪರಾಧ ನಡೆದಾಗ ಫಾರೆನ್ಸಿಕ್ ವಿಭಾಗದ ಕೆಲಸ ಮಹತ್ವದ್ದು. ಅಂತಹ ಜವಾಬ್ದಾರಿಯುತ ಕೆಲಸ ಮಾಡೋರಿಗೆ ಗಂಡೆದೆ ಬೇಕು. ಪೋಸ್ಟ್ ಮಾರ್ಟಂನಂತಹ ಮೃತದೇಹವನ್ನ ಕತ್ತರಿಸೋ ಕೆಲಸವಂತೂ ಗಟ್ಟಿ ಗುಂಡಿಗೆಯವರ ಕೈ ಕಾಲನ್ನೂ ನಡುಗಿಸುತ್ತೆ! ಆದ್ರೆ ಇಲ್ಲೋರ್ವ ಮಹಿಳಾ ವೈದ್ಯೆ ಅಂತಹ ನೂರಾರು ಪೋಸ್ಟ್ ಮಾರ್ಟಂ, ಪೋಕ್ಸೋ ಕೇಸ್ (POSCO) ಸಂತ್ರಸ್ತೆಯರ ಪರ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯ ಒದಗಿಸುವಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದಾರೆ. ಅಂತಹ ಮಹಿಳಾ ವೈದ್ಯೆಯನ್ನ (Lady Doctor) ವಿಶ್ವ ಮಹಿಳಾ ದಿನಾಚರಣೆ (International Women's Day 2023) ಅಂಗವಾಗಿ ನಾವ್ ನಿಮ್ಗೆ ಪರಿಚಯಿಸುತ್ತಿದ್ದೀವಿ ನೋಡಿ.




    ನೂರಕ್ಕೂ ಅಧಿಕ ಪೋಸ್ಟ್ ಮಾರ್ಟಂ!
    ಯೆಸ್, ಇವರೇ ಉತ್ತರ ಕನ್ನಡದ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನ್ಯಾಯ ವೈದ್ಯಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕಿ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ಮಹಾಲಕ್ಷ್ಮೀ ಕಾರ್ಲವಾಡ. ಬಸವಣ್ಣಪ್ಪ, ಸಂಗಮ್ಮ ಕಾರ್ಲವಾಡ ದಂಪತಿಯ ಪುತ್ರಿಯಾಗಿರುವ ಡಾ. ಮಹಾಲಕ್ಷ್ಮೀ ಒಂದರ್ಥದಲ್ಲಿ ದೇವಿ ಸ್ವರೂಪಿಣಿ ಇದ್ದಂತೆ! ಈಗಾಗಲೇ ನೂರಕ್ಕೂ ಹೆಚ್ಚು ಪೋಸ್ಟ್ ಮಾರ್ಟಂ ಮಾಡಿರುವ ಇವರು, ಪೋಕ್ಸೋ ಕೇಸ್​ನ ಸಂತ್ರಸ್ತೆಯರ ವೈದ್ಯಕೀಯ ಪರೀಕ್ಷೆ ನಡೆಸಿ ಹೆಣ್ಮಕ್ಕಳಿಗೆ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.




    ಸಾಮಾಜಿಕ ನ್ಯಾಯದ ತುಡಿತ
    ಡಾ. ಮಹಾಲಕ್ಷ್ಮೀ ಕಾರ್ಲವಾಡ ಅವರು 2020ರಲ್ಲಿ ಕಾರವಾರದ ಕ್ರಿಮ್ಸ್​ನಲ್ಲಿ ಪೋಸ್ಟ್ ಮಾರ್ಟಂ ಹಾಗೂ ಫಾರೆನ್ಸಿಕ್ ಡಿಪಾರ್ಟ್ ಮೆಂಟ್​ನ ಸದಸ್ಯರಾಗಿದ್ದರು. ಅಲ್ಲಿಂದ ಇಲ್ಲಿಯವರೆಗೆ ಇವರು ಹಗಲು ರಾತ್ರಿಯೆನ್ನದೇ 100ಕ್ಕೂ ಹೆಚ್ಚು ಪೋಸ್ಟ್ ಮಾರ್ಟಂ ಮಾಡಿದ್ದಾರೆ. ಇದು ಅವರ ಧೈರ್ಯಕ್ಕೆ ಕನ್ನಡಿಯಾದರೆ, ಸುಮಾರು 50ರಷ್ಟು ಪೋಕ್ಸೋ ಪ್ರಕರಣಗಳ ಸಂತ್ರಸ್ತೆಯರಿಗೆ ನ್ಯಾಯ ಒದಗಿಸುವ ಮೂಲಕ ನ್ಯಾಯಪರತೆ ಮೆರೆದಿದ್ದಾರೆ.




    ಪೋಕ್ಸೋ ಸಂತ್ರಸ್ತೆಯರಿಗೆ ನ್ಯಾಯ
    ಪೋಕ್ಸೋಗೆ ಸಂಬಂಧಿಸಿದ 20 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕೋರ್ಟ್ ಸಮನ್ಸ್ ಪಡೆದಿದ್ದ ಡಾ. ಮಹಾಲಕ್ಷ್ಮೀ ಕಾರ್ಲವಾಡ ಅವರು ಖುದ್ದು ತಾವೇ ಕೋರ್ಟ್​ಗೆ ಹಾಜರಾಗಿ ಸಾಕ್ಷ್ಯ ನುಡಿದಿದ್ದಾರೆ. ಅಂತಹ ಪ್ರಕರಣಗಳಲ್ಲಿ ಸುಮಾರು 10-12 ಕೇಸ್​ಗಳಲ್ಲಿ ಸಂತ್ರಸ್ತೆಯರಿಗೆ ನ್ಯಾಯ ಸಿಗುವಂತೆ ಈ ಮಹಿಳಾ ವೈದ್ಯೆ ಮಾಡಿ ತೋರಿಸಿದ್ದಾರೆ.


    ಇದನ್ನೂ ಓದಿ: Uttara Kannada: ಜಿಲೇಬಿ ಮಾರಿ ಶಾಲೆ ಕಟ್ಟಿದ ಸಾಹಸಿ! ಶಿಕ್ಷಣ ಕ್ರಾಂತಿ ಮಾಡಿದ ಅಡುಗೆ ಭಟ್ಟರು!




    ನ್ಯಾಯಶಾಸ್ತ್ರದ ಕುರಿತು ಜಾಗೃತಿ
    ತನ್ನ ತಾಯಿಯನ್ನೆ ಎಲ್ಲಾ ಕೆಲಸಕ್ಕೂ ಸ್ಪೂರ್ತಿಯಾಗಿಸಿಕೊಂಡಿರುವ ಡಾ.ಮಹಾಲಕ್ಷ್ಮೀ ಅವರು, ನ್ಯಾಯ ಪಾಲನೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲ್ವಂತೆ. ಜೊತೆಗೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಪನ್ಯಾಸದ ಮೂಲಕವೂ ನ್ಯಾಯ ವೈದ್ಯಶಾಸ್ತ್ರದ ಕುರಿತು ಅರಿವು ಮೂಡಿಸುತ್ತಾ ಬಂದಿದ್ದಾರೆ.






    ಇದನ್ನೂ ಓದಿ: Uttara Kannada: ಮರ ಹತ್ತೋದೇನು, ಬಾವಿ ಇಳಿಯೋದೇನು! ಶಿರಸಿಯ ಈ ಲೇಡಿ ಮುಂದೆ ಸೂಪರ್​ಮ್ಯಾನ್​ ಸಹ ಏನಲ್ಲ!


    ಸಮಾಜಕ್ಕೆ ತನ್ನಿಂದ ಏನಾದರೂ ಕೊಡುಗೆ ನೀಡಬೇಕೆನ್ನುವ ಹಂಬಲ ಹೊಂದಿರುವ ಡಾ. ಮಹಾಲಕ್ಷ್ಮೀ ಕಾರ್ಲವಾಡ ಅವರ ಈ ನಿಸ್ವಾರ್ಥ ಸೇವೆಗೆ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಹ್ಯಾಟ್ಸಾಪ್ ಹೇಳುತ್ತಿದ್ದೇವೆ.


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: