• Home
 • »
 • News
 • »
 • uttara-kannada
 • »
 • Inspiration: ಇಡೀ ಊರಿಗೇ ಅಗರಬತ್ತಿ ಪರಿಮಳ ಹರಡುವ ಸಾಧಕ! ಇವರದ್ದು ಸ್ಫೂರ್ತಿ ನೀಡುವ ಜೀವನ

Inspiration: ಇಡೀ ಊರಿಗೇ ಅಗರಬತ್ತಿ ಪರಿಮಳ ಹರಡುವ ಸಾಧಕ! ಇವರದ್ದು ಸ್ಫೂರ್ತಿ ನೀಡುವ ಜೀವನ

X
ಅಗರಬತ್ತಿ ವಿನಾಯಕರ ಸಾಧನೆ ನೋಡಿ

"ಅಗರಬತ್ತಿ ವಿನಾಯಕರ ಸಾಧನೆ ನೋಡಿ"

ಬದುಕಿನಲ್ಲಿ ಸೋಲು ಪಾಠ ಕಲಿಸುತ್ತೆ ಅನ್ನೋ ಮಾತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ವಿನಾಯಕ ಹೆಗಡೆ ಅವರದ್ದು ಕೇವಲ ಸೋಲಲ್ಲ, ಅವರಿಗೆ ಎದುರಾದದ್ದು ಅಕ್ಷರಶಃ ಅಗ್ನಿಪರೀಕ್ಷೆ.

 • News18 Kannada
 • 5-MIN READ
 • Last Updated :
 • Uttara Kannada, India
 • Share this:

  ಕೈಯಲ್ಲಿ ಅಗರಬತ್ತಿ ಪ್ಯಾಕೇಟ್. ಅಂಗಡಿ, ಮನೆಗಳಿಗೆ ತೆರಳಿ ನೀಡೋ ಕಾಯಕಯೋಗಿ. ಕೈ, ಕಾಲು ಊನವಾದರೂ ತ್ರಿಚಕ್ರದ ವಾಹನವೇರಿ ಬದುಕು ಕಟ್ಟಿಕೊಂಡವರು. ಎದುರಾದ ಅಗ್ನಿಪರೀಕ್ಷೆಗಳನ್ನು ಹಿಮ್ಮೆಟ್ಟಿಸಿ ಸಮಸ್ಯೆಗಳಿಗೆ ಸವಾಲು ಹಾಕಿದವರು. ಎಲ್ಲಾ ಇದ್ದೂ ಏನೂ ಇಲ್ಲದವರಂತಿರೋರ ನಡುವೆ ಸವಾಲುಗಳನ್ನೇ ಹಿಮ್ಮೆಟ್ಟಿಸಿ ಬದುಕು ಕಟ್ಟಿಕೊಂಡ ಹೀರೋ ಇವ್ರು!  ಉತ್ತರ ಕನ್ನಡ (Uttara Kannada) ಜಿಲ್ಲೆ ಶಿರಸಿಯಲ್ಲಿ (Sirsi) ವಿನಾಯಕ ಅಗರಬತ್ತಿಯದ್ದೇ ಪರಿಮಳ! ಅಷ್ಟು ಫೇಮಸ್ಸು ಇವ್ರು!


  ಬದುಕಿನಲ್ಲಿ ಸೋಲು ಪಾಠ ಕಲಿಸುತ್ತೆ ಅನ್ನೋ ಮಾತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ವಿನಾಯಕ ಹೆಗಡೆ ಅವರದ್ದು ಕೇವಲ ಸೋಲಲ್ಲ, ಅವರಿಗೆ ಎದುರಾದದ್ದು ಅಕ್ಷರಶಃ ಅಗ್ನಿಪರೀಕ್ಷೆ. ಹತ್ತನೇ ವರ್ಷದಲ್ಲಿ ಪೋಲಿಯೋ ಅಟ್ಯಾಕ್ ಆಗಿ ಶಿಕ್ಷಣ ಮೊಟಕಾಯ್ತು. ತಂದೆಯ ಸಾವು, ತಾಯಿಗೆ ಕ್ಯಾನ್ಸರ್. ಇದ್ದ ಓರ್ವ ಮಗ ವಿನಾಯಕ ಹೆಗಡೆಗೂ ಪೋಲಿಯೋ.


  ಸಾಲು ಸಾಲು ಅಗ್ನಿಪರೀಕ್ಷೆ
  ಇಂತಹ ಸಾಲು ಸಾಲು ಅಗ್ನಿಪರೀಕ್ಷೆಗೆ ಎದೆಯೊಡ್ಡಿ ನಿಂತ ವಿನಾಯಕ ಹೆಗಡೆ ಅವರ ಕೈಹಿಡಿದದ್ದೇ ಅಗರಬತ್ತಿ ವ್ಯಾಪಾರ. ಜೀವನಕ್ಕೆ ಧೈರ್ಯ ತುಂಬಿ ಎದ್ದು ನಿಲ್ಲೋದನ್ನ ಕಲಿಸ್ತು ಈ ಅಗರಬತ್ತಿ.


  ಇದನ್ನೂ ಓದಿ: Solo Cycle Trip: ಟ್ರಿಣ್ ಟ್ರಿಣ್, ದಾರಿಬಿಡಿ! ಇದು ಏಕಾಂಗಿ ಯುವತಿಯ ಸೈಕಲ್ ಯಾತ್ರೆ


  ಇವರ ಕೊಡುವ ಅಗರಬತ್ತಿ ಪರಿಮಳ ಇಲ್ಲದೇ ಪೂಜೆಯೇ ಆಗಲ್ಲ
  ಅಗರಬತ್ತಿ ವಿನಾಯಕ ಅವರು ತಮ್ಮ ಮೂರು ಚಕ್ರದ ಬೈಕ್​ನಲ್ಲಿ ಸವಾರಿ ಆರಂಭಿಸಿದ್ರೆ ಇಡೀ ಶಿರಸಿ ಪೇಟೆನ ಒಂದು ರೌಂಡ್ ಹಾಕ್ತಾರೆ ಅಂತಲೇ ಲೆಕ್ಕ. ಶಿರಸಿಯ ಮನೆಗಳಲ್ಲಿ ವಿನಾಯಕ ಅವ್ರ ಅಗರಬತ್ತಿ ಹೊತ್ತಿಸದೇ ದೇವರ ಪೂಜೆಯ ಆಗಲ್ಲ, ಕೇವಲ ವ್ಯಾಪಾರಕ್ಕೊಂದೇ ಅಲ್ಲದೇ ಭಾವನಾತ್ಮಕವಾಗಿಯೂ ಅಗರಬತ್ತಿ ವಿನಾಯಕನವ್ರು ಶಿರಸಿಯ ಜನಜೀವನದಲ್ಲಿ ಮನೆ ಮಗನಾಗಿ ಹೋಗಿದ್ದಾರೆ.


  ಇದನ್ನೂ ಓದಿ: Robot: 7ನೇ ಕ್ಲಾಸ್ ಬಾಲಕ ರೋಬೋಟ್ ತಯಾರಿಸಿದ! ಇದು ಸೇನೆಗೂ ಸಹಾಯ ಮಾಡುತ್ತೆ!


  ಇವರ ಸ್ವಾವಲಂಬಿ ಜೀವನಕ್ಕೆ ಸೆಲ್ಯೂಟ್
  ಅಂದ್ಹಾಗೆ ವಿನಾಯಕ್ ತಿಂಗಳಿಗೆ ಸಂಪಾದಿಸೋ ಹಣದಲ್ಲಿ ತಮ್ಮ ತಾಯಿಯ ಆಸ್ಪತ್ರೆ ಖರ್ಚಿಗೆ 3 ಸಾವಿರ ರೂಪಾಯಿ ಖರ್ಚಾಗುತ್ತೆ. ಯಾರಲ್ಲೂ ಒಂದೇ ಒಂದು ರೂಪಾಯಿ ಬೇಡ್ಬಾರ್ದು ಅನ್ನೋ ವಿನಾಯಕ್ ಎಲ್ಲ ಇದ್ದೂ ಕೊರಗುವವರ ನಡುವೆ ಮಾದರಿಯಾಗ್ತಾರೆ. ಸ್ವಂತ ದುಡಿದೇ ಜೀವನ ನಡೆಸ್ಬೇಕು ಅಂತ ಗಾಡಿಗೆ ಅಗರಬತ್ತಿ ಪ್ಯಾಕೇಟ್ ಹಾಕ್ಕೊಂಡು ಶಿರಸಿಯ ಬೀದಿಬೀದಿ ತಿರುಗೋ ಇವ್ರ ಸ್ವಾವಲಂಬಿ ಜೀವನಕ್ಕೆ ಒಂದು ಬಿಗ್ ಸೆಲ್ಯೂಟ್ ಹೇಳಲೇಬೇಕು.


  ಅಗರಬತ್ತಿ ವಿನಾಯಕ ಅವರ ಸಂಪರ್ಕ ಸಂಖ್ಯೆ: 94830 68087


  ವರದಿ: ಎ.ಬಿ.ನಿಖಿಲ್, ಮುಂಡಗೋಡ್

  Published by:ಗುರುಗಣೇಶ ಡಬ್ಗುಳಿ
  First published: