• Home
 • »
 • News
 • »
 • uttara-kannada
 • »
 • ಪಾಕಿಸ್ತಾನದ ವಿರುದ್ಧ ಹೋರಾಡಿ ಭಾರತವನ್ನು ಗೆಲ್ಲಿಸಿದ INS ಚಾಪೆಲ್ ಹೀಗಿದೆ ನೋಡಿ

ಪಾಕಿಸ್ತಾನದ ವಿರುದ್ಧ ಹೋರಾಡಿ ಭಾರತವನ್ನು ಗೆಲ್ಲಿಸಿದ INS ಚಾಪೆಲ್ ಹೀಗಿದೆ ನೋಡಿ

X
ಯುದ್ಧನೌಕೆಯ ಒಳಹೊಕ್ಕು ಬನ್ನಿ

"ಯುದ್ಧನೌಕೆಯ ಒಳಹೊಕ್ಕು ಬನ್ನಿ"

ಭಾರತೀಯ ನೌಕಾಪಡೆಯಲ್ಲಿ ಸುದೀರ್ಘ 29 ವರ್ಷಗಳ ಸೇವೆ ಸಲ್ಲಿಸಿದ ಐಎನ್ಎಸ್ ಚಾಪಲ್, 2006ರಲ್ಲಿ ವಸ್ತು ಸಂಗ್ರಹಾಲಯವಾಗಿ ರೂಪುಗೊಂಡಿದೆ. ವಿಶೇಷ ಅಂದ್ರೆ ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲತೀರದಲ್ಲಿ ಸ್ಥಾಪನೆಗೊಂಡಿದೆ.

 • News18 Kannada
 • Last Updated :
 • Uttara Kannada, India
 • Share this:

  ಕಣ್ಣು ಹಾಯಿಸಿದಷ್ಟೂ ದೂರ ಕಡಲು! ಅಷ್ಟೇ ವಿಶಾಲ ಸಮುದ್ರತೀರ. ಅಲ್ಲೇ ಅಚಲವಾಗಿ ನಿಂತಿರುವ ಮಾಜಿ ಯೋಧ! ಅಂಜದೇ ಅಳುಕದೇ ಶತ್ರುಗಳನ್ನು ಮುನ್ನುಗ್ಗಿ ಸದೆಬಡಿಯುವ ದೃಢ ವಿಶ್ವಾಸ. ಇದು ಯಾವುದೋ ವ್ಯಕ್ತಿಯೋರ್ವರ ಕಥೆಯಲ್ಲ, 1971ರ ಇಂಡೋ- ಪಾಕ್ ಯುದ್ಧದಲ್ಲಿ ಹೋರಾಡಿದ್ದ ಭಾರತೀಯ ನೌಕೆಯೊಂದರ ಸಾಹಸಗಾಥೆ! 1971ರ ಇಂಡೋ- ಪಾಕ್ ಯುದ್ಧದಲ್ಲಿ (Indo-Pak War) ಗೆದ್ದ ಸ್ಮರಣಾರ್ಥವಾಗಿ ಡಿಸೆಂಬರ್ 4ರಂದು ಈ ನೌಕಾ ದಿನವನ್ನಾಗಿ ಆಚರಿಸುತ್ತೆ. ಆ ಯುದ್ಧದಲ್ಲಿ ಪಾಲ್ಗೊಂಡಿದ್ದ ಭಾರತೀಯ ನೌಕೆ ಐಎನ್ಎಸ್ ಚಾಪೆಲ್ (INS Chapal Warship Museum) ಕರ್ನಾಟಕದ ಕಾಶ್ಮೀರ ಕಾರವಾರದಲ್ಲಿದ್ದು (Karwar)  ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ.


  ಭಾರತೀಯ ನೌಕಾಪಡೆಯಲ್ಲಿ ಸುದೀರ್ಘ 29 ವರ್ಷಗಳ ಸೇವೆ ಸಲ್ಲಿಸಿದ ಐಎನ್ಎಸ್ ಚಾಪಲ್, 2006ರಲ್ಲಿ ವಸ್ತು ಸಂಗ್ರಹಾಲಯವಾಗಿ ರೂಪುಗೊಂಡಿದೆ. ವಿಶೇಷ ಅಂದ್ರೆ ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲತೀರದಲ್ಲಿ ಸ್ಥಾಪನೆಗೊಂಡಿದೆ. ಪನ್ವೇಲ್- ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಮ್ಯೂಸಿಯಂ ಸ್ಥಾಪಿಸಲಾಗಿದೆ.


  ಇಷ್ಟೆಲ್ಲ ಸಾಮರ್ಥ್ಯ ಹೊಂದಿದೆ ಈ ಯುದ್ಧನೌಕೆ
  ಚಾಪೆಲ್ ನೌಕೆಯ ಇತಿಹಾಸ ನೋಡೋದಾದ್ರೆ, ಕ್ಷಿಪಣಿ ಉಡಾವಣೆ ವ್ಯವಸ್ಥೆ ಹೊಂದಿರೋ ಈ ಯುದ್ಧನೌಕೆ 1976ರ ನವೆಂಬರ್ 4ರಂದು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿತ್ತು. 245 ಟನ್ ತೂಕ, 38.6 ಮೀಟರ್ ಉದ್ದ ಹಾಗೂ 7.6 ಮೀ. ಅಗಲ ಇರುವ ನೌಕೆ, ಗರಿಷ್ಠ ಗಂಟೆಗೆ 37 ನಾಟಿಕಲ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿತ್ತು. ನಾಲ್ಕು ಹಡಗು ವಿರೋಧಿ ಕ್ಷಿಪಣಿ ಲಾಂಚರ್​ಗಳು ಇದರಲ್ಲಿತ್ತು.


  1971ರ ಇಂಡೋ- ಪಾಕ್ ಯುದ್ಧದಲ್ಲಿ ಪ್ರಮುಖ ಪಾತ್ರ
  1971ರ ಇಂಡೋ- ಪಾಕ್ ಯುದ್ಧದ ಸಮಯದಲ್ಲಿ ಕರಾಚಿ ಬಂದರಿನ ಮೇಲೆ ಬಾಂಬ್ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇದೇ ಚಾಪೆಲ್ ನೌಕೆ. ಅರಬ್ಬಿ ಸಮುದ್ರದಲ್ಲಿ ನೌಕಾ ದಿಗ್ಬಂಧನ ಮಾಡೋಕೂ ಸಹಾಯ ಮಾಡಿತ್ತು. ಹೀಗೆ ಪಾಕಿಸ್ತಾನದ ವಾಣಿಜ್ಯ ರಾಜಧಾನಿಯನ್ನು ದುರ್ಬಲಗೊಳಿಸಿ, ಭಾರತದ ಅಂತಿಮ ವಿಜಯದಲ್ಲಿ ನೆರವಾಗಿತ್ತು ಐಎನ್ಎಸ್ ಚಾಪೆಲ್.


  ಇದನ್ನೂ ಓದಿ: Kashmiri Apple: 50 ರೂಪಾಯಿಗೆ ಕಾಶ್ಮೀರದ ಸೇಬು! ಮಾಜಿ ಯೋಧರ ಆ್ಯಪಲ್ ಸೇವೆ


  ಪ್ರತಿದಿನ ನೂರಾರು ಪ್ರವಾಸಿಗರು ಈ ಮ್ಯೂಸಿಯಂ ವೀಕ್ಷಣೆಗೆಂದೇ ಕಾರವಾರಕ್ಕೆ ಭೇಟಿ ನೀಡ್ತಾರೆ. ಇಲ್ಲಿನ ಕ್ಯೂರೇಟರ್ ವಿಜಯ್ ಬರುವ ಪ್ರವಾಸಿಗರಿಗೆಲ್ಲ ಚಾಪೆಲ್​ನ ಇತಿಹಾಸವನ್ನು ವಿವರಿಸ್ತಾರೆ. ಅವರ ವಿವರಣೆ ಜೊತೆಗೆ ಚಾಪಲ್ ಯುದ್ಧನೌಕೆಯ ಒಳಭಾಗದಲ್ಲಿ ನೌಕಾ ಸಿಬ್ಬಂದಿ ಬಳಸುವ ಬ್ಯಾರಕ್​ಗಳು, ಇಂಜಿನ್ ಕೊಠಡಿಗಳು, ಬಾಹ್ಯ ಬಂದೂಕುಗಳನ್ನು ಕಣ್ತುಂಬಿಕೊಳ್ಳಬಹುದು.


  15 ನಿಮಿಷದ ಸಾಕ್ಷ್ಯಚಿತ್ರವನ್ನೂ ವೀಕ್ಷಸಬಹುದು
  ಅಷ್ಟೇ ಅಲ್ಲದೇ, ಭಾರತ ಸಮುದ್ರ ತೀರಗಳನ್ನು ರಕ್ಷಿಸುವಲ್ಲಿ ಭಾರತೀಯ ನೌಕಾಪಡೆಯ ಪಾತ್ರವನ್ನು ವಿವರಿಸುವ 15 ನಿಮಿಷದ ವಿಡಿಯೋ ಸಾಕ್ಷ್ಯಚಿತ್ರವನ್ನೂ ನೀವಿಲ್ಲಿ ವೀಕ್ಷಿಸಬಹುದು. ಅಂದ್​ಹಾಗೆ ಈ ಮ್ಯೂಸಿಯಂ ಪ್ರವೇಶ ದರ ಕೇವಲ 15 ರೂಪಾಯಿ ಮಾತ್ರ.


  ಇದನ್ನೂ ಓದಿ: ಕಡಲ ಮೇಲೆ ತೇಲುವ ನಗರ! 12 ಫುಟ್​ಬಾಲ್ ಸ್ಟೇಡಿಯಂನಷ್ಟು ದೊಡ್ಡದು INS Vikramaditya


  ಈ ಚಾಪೆಲ್​ನಲ್ಲಿ ಕಾರ್ಯನಿರ್ವಹಿಸಿದ್ದ ಇಬ್ಬರು ಸಿಬ್ಬಂದಿಗೆ ಪರಮ ವೀರಚಕ್ರ ಮತ್ತು 8 ವೀರ ಚಕ್ರಗಳು ಅರಸಿ ಬಂದಿದ್ವು. ನೀವೇನಾದ್ರೂ ಕಾರವಾರಕ್ಕೆ ಭೇಟಿ ನೀಡೋದಾದ್ರೆ ತಪ್ಪದೆ ಇಲ್ಲಿಗೊಮ್ಮೆ ಭೇಟಿ ನೀಡಿ, ನೌಕೆಯನ್ನ ಕಣ್ತುಂಬಿಕೊಳ್ಳಬಹುದಾಗಿದೆ.


  ವರದಿ: ದೇವರಾಜ್ ನಾಯ್ಕ್, ಕಾರವಾರ

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು