• Home
 • »
 • News
 • »
 • uttara-kannada
 • »
 • Uttara Kannada: ಈತ ನಮ್ಮೂರ ಯೋಧ! ಊರವರ ಸಂಭ್ರಮ ನೋಡಿ

Uttara Kannada: ಈತ ನಮ್ಮೂರ ಯೋಧ! ಊರವರ ಸಂಭ್ರಮ ನೋಡಿ

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮಕ್ಕಳು, ಕಿರಿಯರು ವೀರಯೋಧನಿಗೆ ಹೂ ಕೊಟ್ಟು, ಕಾಲಿಗೆ ಬಿದ್ದು ನಮಸ್ಕರಿಸಿದ್ರೆ, ಹಿರಿಯರನ್ನ ಕಾಣುತ್ತಲೇ ತಾನೇ ಕಾಲಿಗೆ ಬಿದ್ದು ಅವರ ಆಶೀರ್ವಾದ ಬೇಡುತ್ತಾ ಯೋಧ ಕೀರ್ತಪ್ಪನವರ್ ಸರಳತೆ ಮೆರೆದರು.

 • Share this:

  ವಂದೇ ಮಾತರಂ.. ಬೋಲೋ ಭಾರತ್ ಮಾತಾ ಕೀ ಜೈ.. ಇಂಕ್ವಿಲಾಬ್ ಜಿಂದಾಬಾದ್.. ಎಲ್ಲೆಲ್ಲೂ ಜೈಕಾರ, ಘೋಷಣೆ. ತವರಿಗೆ ಬಂದ ವೀರ ಯೋಧನನ್ನ ಊರ ಮಂದಿ ಸ್ವಾಗತಿಸಿದ ಪರಿಯಿದು. ಭಾರತ ಮಾತೆಯ ಪುತ್ರನೇ ನಿನಗಿದೋ ನಮ್ಮೀ ಸ್ವಾಗತವೆನ್ನುತ್ತಾ ಬರಮಾಡಿಕೊಂಡ ರೀತಿಯಿದು. ಹೀಗೊಂದು ಅದ್ಭುತ ಸ್ವಾಗತ ಕಾರ್ಯಕ್ರಮಕ್ಕೆ ಸಾಕ್ಷಿಯಾದದ್ದು ಉತ್ತರ ಕನ್ನಡದ (Uttara Kannada) ಮುಂಡಗೋಡು. ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಬರೋಬ್ಬರಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ, ತವರಿಗೆ ಆಗಮಿಸಿದ ಮುಂಡಗೋಡದ (Mundgod) ಚಿಗಳ್ಳಿಯ ಶಂಭುಲಿಂಗ ಕೀರ್ತಪ್ಪನವರ್ ಅವರಿಗೆ ಊರಿನಲ್ಲಿ ಹೃದಯಸ್ಪರ್ಶಿ ಸ್ವಾಗತ (Indian Army Setired Soldier Wel Come) ಮಾಡಲಾಯ್ತು. ಊರ ಹಿರಿಯರು, ಕಿರಿಯರೆನ್ನದೇ ವೀರಯೋಧನನ್ನು ಬರಮಾಡಿಕೊಂಡರು. ಶಾಲಾ ಮಕ್ಕಳಂತೂ ಸಾಲಾಗಿ ನಿಂತು ತೆರೆದ ಜೀಪಿನಲ್ಲಿ ಆಗಮಿಸಿದ ಭಾರತೀಯ ಹೆಮ್ಮೆಯ ಪುತ್ರನಿಗೆ ಪುಷ್ಪ ಮಳೆಗರೆದು ಸ್ವಾಗತಿಸಿದ್ರು. ತವರೂರಿನ ಈ ಸ್ವಾಗತ ಕಂಡು ಒಂದು ಕ್ಷಣ ಕೀರ್ತಪ್ಪನವರ್ ಕೂಡಾ ಭಾವುಕರಾದರು.


  ಇದನ್ನೂ ಓದಿ: Dandelappa: ಪರಮಾರ ದಾಂಡೇಲಪ್ಪ ಆದ ಕಥೆ! ಇದು ಕರ್ನಾಟಕ-ಗೋವಾ ಬೆಸೆಯೋ ದೇವರು!


  ಮಕ್ಕಳು, ಕಿರಿಯರು ವೀರಯೋಧನಿಗೆ ಹೂ ಕೊಟ್ಟು, ಕಾಲಿಗೆ ಬಿದ್ದು ನಮಸ್ಕರಿಸಿದ್ರೆ, ಹಿರಿಯರನ್ನ ಕಾಣುತ್ತಲೇ ತಾನೇ ಕಾಲಿಗೆ ಬಿದ್ದು ಅವರ ಆಶೀರ್ವಾದ ಬೇಡುತ್ತಾ ಯೋಧ ಕೀರ್ತಪ್ಪನವರ್ ಸರಳತೆ ಮೆರೆದರು. ರಾಜಸ್ಥಾನದ ಜೋಧ್ಪುರ, ತ್ರಿಪುರಾ, ಪಶ್ಚಿಮ ಬಂಗಾಳ, ಕಾಶ್ಮೀರದಲ್ಲಿ ಮಾಡಿದ ಅವರ ದೇಶಸೇವೆಯನ್ನ ಇಡೀ ಊರಿಗೆ ಊರೇ ಕೊಂಡಾಡಿತು.


  ಇದನ್ನೂ ಓದಿ: ಕನ್ನಡ ತಾಯಿಗೆ ಕೈಮುಗಿಯಲು ಇಲ್ಲಿ ಬನ್ನಿ! ಏಕೈಕ ಕನ್ನಡಮ್ಮನ ದೇಗುಲ ಇದು


  ಒಟ್ಟಿನಲ್ಲಿ ಶಂಭುಲಿಂಗ ಕೀರ್ತಪ್ಪನವರ್ ಅವರ ಎರಡು ದಶಕಗಳ ದೇಶಸೇವೆಗೆ ಇಡೀ ಊರೇ ಎದ್ದು ನಿಂತು ಗೌರವ ಸೂಚಿಸಿತ್ತು. ಈ ಮೂಲಕ ಭಾರತೀಯ ಯೋಧರ ಜೊತೆ ನಾವಿದ್ದೇವೆ ಅನ್ನೋದನ್ನ ಮುಂಡಗೋಡದ ಈ ಪುಟ್ಟ ಗ್ರಾಮ ಸಾರಿ ಹೇಳಿತ್ತು.


  ವರದಿ: ಎ.ಬಿ.ನಿಖಿಲ್, ಮುಂಡಗೋಡು

  Published by:ಗುರುಗಣೇಶ ಡಬ್ಗುಳಿ
  First published: