Uttara Kannada: ಸೇನೆ, ಪೋಲಿಸ್ ಸೇವೆ ಸೇರಲು ಸಿಗುತ್ತೆ ತರಬೇತಿ! ಈಗಲೇ ಹೀಗೆ ಅರ್ಜಿ ಸಲ್ಲಿಸಿ

ಭಾರತೀಯ ಸೇನೆ, ಪೊಲೀಸ್ ಸೇವೆಗಳಿಗೆ ಸೇರಬೇಕು ಎಂಬ ಆಸೆ ನಿಮಗಿದೆಯೇ? ಹಾಗಾದರೆ ನಿಮ್ಮ ಕನಸು ನನಸು ಮಾಡಲು ತರಬೇತಿ ನಿಡಲಾಗುತ್ತೆ! ಈ ವಿಶೇಷ ತರಬೇತಿಯ ಎಲ್ಲ ವಿವರ ಇಲ್ಲದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕಾರವಾರ: ಎಷ್ಟೋ ಯುವಕ/ಯುವತಿಯರ ಕನಸು ಸೇನೆ ಮತ್ತು ಪೋಲಿಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವುದು, ಆದರೆ ಪೂರ್ವ ತಯಾರಿ ಇಲ್ಲದೇ ಹಾಗೂ ಮಾಹಿತಿಯ ಕೊರತೆಯಿಂದ ಅಥವಾ ಅಗತ್ಯ ಸೌಲಭ್ಯಗಳ ಕೊರತೆಯಿಂದ ಎಷ್ಟೋ ಕನಸುಗಳು ಮೊಟಕುಗೊಳ್ಳುತ್ತವೆ, ಅಂತಹ ಯುವಕ-ಯುವತಿಯರ ಪಾಲಿಗೆ ಆಶಾಕಿರಣವಾಗಿ ಉತ್ತರ ಕನ್ನಡ ಜಿಲ್ಲಾಡಳಿತ (Uttara Kannada) ತರಬೇತಿ ಶಿಬಿರವನ್ನು ಏರ್ಪಡಿಸಿದೆ. ಹೌದು, ಹಿಂದುಳಿದ ಹಾಗೂ ಪರಿಶಿಷ್ಠ ಜಾತಿ/ಪಂಗಡದ ಯುವಕ-ಯುವತಿಯರಿಗೆ ಈ ಸದಾವಕಾಶ ಲಭಿಸುತ್ತಿದ್ಥು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸರ್ಕಾರ ತರಬೇತಿ (Karnataka Government) ಕೊಡಲು ನಿರ್ಧರಿಸಿದೆ.  ಜಾಲತಾಣದ ಕೊಂಡಿಯನ್ನು ಉಪಯೋಗಿಸಿ ಅರ್ಜಿಯ ನಮೂನೆಯನ್ನು ಪಡೆದುಕೊಂಡು ನಮೂನೆಯಲ್ಲಿ ತಿಳಿಸಿದ ಪ್ರಮಾಣಪತ್ರಗಳನ್ನು ಲಗತ್ತಿಸಿ ಆಯಾ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಗೆ ಕಳಿಸತಕ್ಕದ್ದು.



























    ತರಬೇತಿಯ ಹೆಸರುಭಾರತೀಯ ಸೇನೆ, ಪೊಲೀಸ್ ಸೇವೆ
    ಜಿಲ್ಲೆಗಳುಉತ್ತರ ಕನ್ನಡ, ಉಡುಪಿ ಮತ್ತ ದಕ್ಷಿಣ ಕನ್ನಡ
    ಸಂಪರ್ಕ ಮಾಹಿತಿಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ಇಲಾಖೆಗಳು
    ಅರ್ಹತೆ10 ನೇ ತರಗತಿ, ಆದಾಯ ಮಿತಿ 2.50 ಲಕ್ಷ ಮೀರಿರಬಾರದು
    ತರಬೇತಿಯ ಅವಧಿ4 ತಿಂಗಳು
    ಉತ್ತರ ಕನ್ನಡದವರು ಹೇಗೆ ಅರ್ಜಿ ಸಲ್ಲಿಸುವುದು?

    ಸಮಾಜ ಕಲ್ಯಾಣ ಇಲಾಖೆಯ ವೆಬ್​ಸೈಟ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


    ಹಿಂದುಳಿದ ವರ್ಗಗಳ ಇಲಾಖೆ

    ಜಿಲ್ಲಾ ಅಧಿಕಾರಿಗಳು
    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
    ಕೊಠಡಿ ಸಂಖ್ಯೆ-1,ಡಿ‌.ಸಿ ಕಛೇರಿ ಸಂಕೀರ್ಣ
    ಕಾರವಾರ, ಉತ್ತರಕನ್ನಡ ಜಿಲ್ಲೆ 581301
    ದೂರವಾಣಿ ಸಂಖ್ಯೆ: 08302-226589

    ಹೆಚ್ಚಿನ ಮಾಹಿತಿಗಾಗಿ ಉಡುಪಿ ಜಿಲ್ಲೆಯವರು ಸಂಪರ್ಕಿಸಬೇಕಾದ ವಿಳಾಸ ಹೀಗಿದೆ
    ಸಮಾಜ ಕಲ್ಯಾಣ ಇಲಾಖೆ
    ಅನಿತಾ ವಿ ಮಡ್ಲೂರ್
    ಉಪ ನಿರ್ದೇಶಕರು
    ಸಮಾಜ ಕಲ್ಯಾಣ ಇಲಾಖೆ
    ಉಡುಪಿ ಜಿಲ್ಲೆ

    ಮೊಬೈಲ್ ಸಂಖ್ಯೆ : +91 9480843046
    ಕಛೇರಿ ದೂರವಾಣಿ: 0820 2574892
    ಇ-ಮೇಲ್: ddswudp@gmail.com

    ಹಿಂದುಳಿದ ವರ್ಗಗಳ ಇಲಾಖೆಯ ವೆಬ್​ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲಿ ಕ್ಲಿಕ್ ಮಾಡಿ

    ಕಛೇರಿಗಳಿಗೆ ನೋಂದಾಯಿತ ಅಂಚೆಯ ಮೂಲಕ ರವಾನಿಸಬಹುದಾಗಿದೆ.

    ಅರ್ಹತೆಗಳು
    ಅಭ್ಯರ್ಥಿಯು ಕನಿಷ್ಟ ಪಕ್ಷ 10 ನೇ ತರಗತಿಯಲ್ಲಿ ಉತ್ತೀರ್ಣನಾಗಿರಬೇಕು.
    ಆದಾಯ ಮಿತಿ 2.50 ಲಕ್ಷ ಮೀರಿರಬಾರದು.

    ಇದನ್ನೂ ಓದಿ: Vijayapura: ಸೈನಿಕನ ಸೈಕಲ್ ಯಾತ್ರೆ! ಬೆಂಗಳೂರು ಟು ಕಾರ್ಗಿಲ್ ಪಯಣ ಹೀಗಿತ್ತು ನೋಡಿ

    ತರಬೇತಿಯ ಕುರಿತು
    1. ತರಬೇತಿಯು ವಸತಿ ಸಮೇತ ತರಬೇತಿಯಾಗಿದೆ.
    2. ಆಯ್ಕೆಯಾದವರು ನಡುವೆ ತರಬೇತಿಯನ್ನು ಬಿಡುವಂತಿಲ್ಲ.
    3. ಸದರಿ ತರಬೇತಿಯು ನಾಲ್ಕು ತಿಂಗಳ ತರಬೇತಿಯಾಗಿದೆ.
    4. ಅಭ್ಯರ್ಥಿಯು ನಡುವೆ ಕ್ರಮಿಸಿದ್ದಲ್ಲಿ ಅದರ ವೆಚ್ಚವನ್ನು ಪಾಲಕರಿಂದ ಭರಿ‌ಸಿಕೊಳ್ಳಬೇಕು.
    5. ಬಯೋಮೆಟ್ರಿಕ್ ಪದ್ಧತಿಯ ಹಾಜರಾತಿ ಇದ್ದಿದ್ದರಿಂದ ದೈನಂದಿನ ಹಾಜರಾತಿ ಕಡ್ಡಾಯವಾಗಿದೆ.
    6. ಟ್ರ್ಯಾಕ್ ಸೂಟ್ ಹಾಗೂ ಇತರ ಸಮವಸ್ತ್ರವನ್ನು ಉಚಿತವಾಗಿ ಕೊಡಲಾಗುವುದು.
    7. ಅಭ್ಯರ್ಥಿಗಳಿಗೆ ಊಟವನ್ನು ಉಚಿತವಾಗಿ ನೀಡಲಾಗುವುದು.
    8. ತರಬೇತಿಯ ನಂತರ ಪ್ರಮಾಣಪತ್ರ ವಿತರಿಸಲಾಗುವುದು.

    ಇದನ್ನೂ ಓದಿ: Belagavi: ಆಸ್ಪತ್ರೆ ಎಂದರೆ ಮಕ್ಕಳು ಖುಷ್! ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಏನಿದು ಜಾದೂ?

    ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 30-7-2022 ಆಗಿದ್ದು ನಮೂನೆಯಲ್ಲಿ ಕೊಡಲಾದ ದಾಖಲಾತಿಗಳನ್ನು ಪೂರ್ಣವಾಗಿ ಒದಗಿಸದಿದ್ದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದಿಲ್ಲವೆಂದು ಜಿಲ್ಲಾಡಳಿತ ತಿಳಿಸಿದೆ.

    ವರದಿ: ಎ.ಬಿ.ನಿಖಿಲ್
    Published by:guruganesh bhat
    First published: