• Home
  • »
  • News
  • »
  • uttara-kannada
  • »
  • Yakshagana: ಯಕ್ಷಗಾನವೇ ಈ ಕುಟುಂಬದ ಉಸಿರು! ಯಕ್ಷಗಾನದ ಅಆಇಈ ಕಲಿಯೋಕೆ ಇಲ್ಲಿ ಬನ್ನಿ

Yakshagana: ಯಕ್ಷಗಾನವೇ ಈ ಕುಟುಂಬದ ಉಸಿರು! ಯಕ್ಷಗಾನದ ಅಆಇಈ ಕಲಿಯೋಕೆ ಇಲ್ಲಿ ಬನ್ನಿ

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ಅಪರೂಪದ ಗುರುಕುಲಕ್ಕೆ 37 ವರ್ಷ ಸಂದಿದ್ದು, 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನ ಧಾರೆಯೆರೆದಿದೆ.

  • Share this:

    ಕಾರವಾರ: ಥಕಧಿಮಿತ ಅಂತಾ ಹೆಜ್ಜೆ ಹಾಕ್ತಿರೋ ಮಕ್ಕಳು. ದಿಗಿಣ ಹೇಳಿ ಕೊಡುತ್ತಿರೋ ಗುರುಗಳು, ಮಕ್ಕಳಿಗೆ ಯಕ್ಷಗಾನದ (Yakshagana Tecahing) ಅಆಇಈ ಕಲಿಸುತ್ತಿರುವ ಇವರೇ ನಾಡಿನ ಪ್ರಸಿದ್ಧ ಯಕ್ಷಗಾನ ಗುರು ಕೆರೆಮನೆ ಶಿವಾನಂದ ಹೆಗಡೆಯವರು (Keremane Shivananda Hegde). ಯಕ್ಷಲೋಕದ ಕುರಿತು ಇವ್ರು ತೋರಿದ ಬದ್ಧತೆ ಇಂದಿಗೂ ಅದೆಷ್ಟೋ ಮಕ್ಕಳು ರಂಗದ ಮೇಲೆ ಹೆಜ್ಜೆ ಹಾಕೋಕೆ ಕಾರಣ. ಇವರಿಂದಲೇ ತಲೆಮಾರಿನಿಂದ ತಲೆಮಾರಿಗೆ ಯಕ್ಷಹೆಜ್ಜೆಗಳನ್ನು (Yakshagana Classes)  ದಾಟಿಸೋಕೆ ಸಾಧ್ಯವಾಗಿದೆ.


    ಉತ್ತರ ಕನ್ನಡದ ಕೆರೆಮನೆ ಹೆಗಡೆ ಕುಟುಂಬ ಯಕ್ಷಗಾನವನ್ನೇ ಉಸಿರಾಗಿಸಿಕೊಂಡ ಮನೆತನ. ಸುಮಾರು 87 ವರ್ಷಗಳಿಂದ ಯಕ್ಷಗಾನದ ಕೀರ್ತಿ ಪತಾಕೆಯನ್ನು ಹಾರಿಸುತ್ತಾ ಬಂದಿರುವ ಈ ಮನೆತನದ ಗುರುಕುಲವನ್ನು ಈಗ ಕೆರೆಮನೆ ಶಿವಾನಂದ ಹೆಗಡೆಯವರು ನಿರ್ವಹಿಸುತ್ತಿದ್ದಾರೆ.


    500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯಕ್ಷಗಾನದ  ಧಾರೆ
    ಈ ಅಪರೂಪದ ಗುರುಕುಲಕ್ಕೆ 37 ವರ್ಷ ಸಂದಿದ್ದು, 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನ ಧಾರೆಯೆರೆದಿದೆ. ವಾರಾಂತ್ಯ, ದಿನನಿತ್ಯ, ಸಂಚಾರಿ ಈ ರೀತಿ ಬೇರೆ ಬೇರೆ ರೀತಿಯ ಕ್ಲಾಸ್​ಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿಕೊಡಲಾಗ್ತಿದೆ.


    ಇದನ್ನೂ ಓದಿ: Freedom Fighter: 117 ವರ್ಷದ ಈ ಸ್ವಾತಂತ್ರ್ಯ ಹೋರಾಟಗಾರ ಕೇವಲ‌ ಗಡ್ಡೆಗೆಣಸು ತಿಂದು ಬದುಕುತ್ತಿದ್ದಾರೆ!


    ಯಕ್ಷಗಾನ ಕಲಿಬೇಕು ಅಂತಂದ್ರೆ ಥಟ್ ಅಂತ ನೆನಪಾಗೋದೇ ಈ ಯಕ್ಷ ಗೋಕುಲ ಎಂಬಷ್ಟರ ಮಟ್ಟಿಗೆ ಹೆಸರುವಾಸಿ ಕೆರೆಮನೆ ಶಿವಾನಂದ ಹೆಗಡೆಯವರ ಯಕ್ಷಶಾಲೆ.


    ಊಟ ವಸತಿ ಉಚಿತವಾಗಿ ಕೊಟ್ಟು ಪಾಠ ಕಲಿಸುವ ಗುರುಕುಲ
    ಹೊನ್ನಾವರದ ಗುಣವಂತೆಯಲ್ಲಿರೋ ಪೆಟ್ರೋಲ್ ಬಂಕ್ ಪಕ್ಕದ ರಸ್ತೆಯಿಂದ ಹಾದುಹೋದರೆ ಕೆರೆಮನೆ ಶಂಭು ಹೆಗಡೆಯವರ ಪುತ್ಥಳಿ ನಿಮ್ಮನ್ನು ಗುರುಕುಲಕ್ಕೆ ಸ್ವಾಗತಿಸುತ್ತೆ. ಊಟ-ವಸತಿ ಉಚಿತವಾಗಿ ನೀಡಿ ಗುರುಕುಲದ ಮೂಲಕ ಯಕ್ಷಗಾನ ಕಲೆಯನ್ನು ಪ್ರಚುರಪಡಿಸುವ ಕೆಲಸವನ್ನು ಕೆರೆಮನೆ ಶಿವಾನಂದ ಹೆಗಡೆಯವರು ಮಾಡ್ತಿದ್ದಾರೆ.


    ಇದನ್ನೂ ಓದಿ: Balloon Festival: ಇಲ್ಲಿ ಬಲೂನ್ ಹಾರಿಸಿದರೆ ಸಮಸ್ಯೆಗಳೆಲ್ಲ ಮಾಯ!


    ಯಕ್ಷಗಾನ ಕಲಿಯಲು ಮುಕ್ತ ಸ್ವಾಗತ
    ಯಕ್ಷಗಾನ ಕಲಿಯುವ ಆಸಕ್ತಿ ಇದ್ದವರಿಗೆ ತುಂಬು ಹೃದಯದ ಸ್ವಾಗತ ಇಲ್ಲಿ ಸಿಗುತ್ತೆ. ನೀವಿಲ್ಲಿ ಯಕ್ಷಗಾನ ಕಲಿಯಬಹುದು, ಆಡಿ ತೋರಿಸಬಹುದು. ದೊಡ್ಡ ಕಲಾವಿದರಾಗಿ ತೆರೆ ಮೇಲೂ ಮಿಂಚಬಹುದು. ಯಕ್ಷಲೋಕಕ್ಕೆ ಕಲಾವಿದರನ್ನು ಪೂರೈಸೋ ಸೃಜನಶೀಲ ಗುರುಕುಲಕ್ಕೆ ಒಮ್ಮೆ ನೀವೂ ಭೇಟಿ ನೀಡ್ತೀರಲ್ಲ


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: