ಉತ್ತರ ಕನ್ನಡ: ಯಜ್ಞ ಯಾಗಾದಿಗಳ ತಾಣ. ಸಕಲ ದೇವರ ಆವಾಸಸ್ಥಾನ. ದುಷ್ಟ ಪೀಡೆಗಳ ವಿಮೋಚನೆಯ ಜಾಗ ಇದುವೇ ಉತ್ತರ ಕನ್ನಡದ ಇಡಗುಂದಿ ಕ್ಷೇತ್ರ. ಅರೆ, ಇಡಗುಂಜಿ ಕ್ಷೇತ್ರ (Idagundi Temple) ಏನಪ್ಪ ಹೀಗಾಗಿದೆಯಾ ಅಂತಾ ಕನ್ಫೂಶನ್ ಆದ್ರಾ? ಹಾಗೇನಿಲ್ಲ, ಇದು ಇಡಗುಂಜಿ ಅಲ್ಲ ಇಡಗುಂದಿ ಕ್ಷೇತ್ರ. ಉತ್ತರ ಕನ್ನಡ ಶಕ್ತಿಶಾಲಿ ಕ್ಷೇತ್ರಗಳಲ್ಲಿ (Uttara Kannada Temples) ಈ ಇಡಗುಂದಿಯೂ ಒಂದು.
ಯೆಸ್, ಹಿಂದೆ ಇಳಾಗುಂಜೀ-ಇಡಗುಂಜಿ ಆಗಿ ಈಗ ಕೊನೆಗೆ ಇಡಗುಂದಿ ಆಗಿರುವ ಉತ್ತರ ಕನ್ನಡದ ಶ್ರೀರಾಮ ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟ ಕ್ಷೇತ್ರವಿದು. ಯಲ್ಲಾಪುರದಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಈ ಕ್ಷೇತ್ರದಲ್ಲಿ ಸದಾ ಯಜ್ಞ ಯಾಗಾದಿಗಳು ನಡೆಯುತ್ತಲಿರುತ್ತೆ. ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಉಲ್ಲೇಖದ ಪ್ರಕಾರ ರಾಮನು ಸೀತೆಯೊಂದಿಗೆ ರಾಮಲಿಂಗೇಶ್ವರ ದೇವಸ್ಥಾನ ಸ್ಥಾಪಿಸಿದ್ದಾನೆ.
ಸುಂದರ-ಮನೋಹರ ಕ್ಷೇತ್ರ
ಇನ್ನು ಇಡಗುಂದಿ ಕ್ಷೇತ್ರದಲ್ಲಿ ಗರ್ಭಗ್ರಹ,ತೀರ್ಥಮಂಟಪ, ಹಜಾರ, ಸುಕನಾಸಿ, ಬಲಿಕಲ್ಲು, ಕ್ಷೇತ್ರಪಾಲ, ಗಣದೈವ ಸೇರಿದಂತೆ ಎಲ್ಲವೂ ಮನೋಹರವಾಗಿ ಕೂಡಿರುವ ಪುಣ್ಯ ಕ್ಷೇತ್ರ ಈ ಇಡಗುಂದಿಯ ರಾಮಲಿಂಗೇಶ್ವರ ಕ್ಷೇತ್ರವಾಗಿದೆ.
ಕೇರಳ ಶೈಲಿಯ ದೇಗುಲ
ಇಲ್ಲಿನ ವಿಶೇಷತೆ ಅಂದ್ರೆ, ಇಲ್ಲಿ ನಿರ್ಮಾಣಗಳು ಕೇರಳ ಮಾದರಿಯನ್ನ ಹೊಂದಿದೆ. ಆರಂಭದಲ್ಲಿ 12 ಅಡಿ ಎತ್ತರದ ನಂದಿಕಂಬ ನಮ್ಮನ್ನ ಸ್ವಾಗತಿಸಿದರೆ, ಒಳಗಡೆ ವಿಶಾಲ ಮೂರು ಅಡಿಯ ಬಸವನ ಮುಂದೆ ನೆಲದಿಂದ ಎರಡು ಅಡಿ ಎತ್ತರದ ಸದಾ ಅಲಂಕೃತವಾದ ಲಿಂಗ ದರ್ಶನವಾಗುತ್ತೆ.
ಇದನ್ನೂ ಓದಿ: Yakshagana: ಯಕ್ಷಗಾನ ಪುರುಷರಿಗಷ್ಟೇ ಅಲ್ಲ, ಮಹಿಳೆಯರ 'ಚಂಡೆ ಚಾತುರ್ಯ' ನೋಡಿ!
ಪಕ್ಕಕ್ಕೆ ಇರುವ ಗರ್ಭಗೃಹದಲ್ಲಿ ಪಾರ್ವತಿ, ಗಣೇಶ, ಸ್ಕಂದರಿದ್ದಾರೆ. ಇನ್ನು ಹೊರಗಡೆ ದಿನವೂ ಯಲ್ಲಾಪುರದಲ್ಲಿ ಎಲ್ಲೂ ಕಾಣದಷ್ಟು ಬಲಿ ಕಲ್ಲುಗಳನ್ನ ಇಲ್ಲಿ ಕಾಣಬಹುದಾಗಿದೆ. ಜೊತೆಗೆ ಶಿವಗಣದ ಪ್ರತೀಕ ಭೂತನಾಥನಾಗಿಯೂ ಇರುವ ಪಶುಪತಿ ಸನ್ನಿಧಾನ ಇದಾಗಿದ್ದರಿಂದ ಇಲ್ಲಿ ಎಲ್ಲಾ ರೀತಿಯ ಪೀಡೆಗಳಿಗೆ ವಿಮೋಚನೆಯಿದೆ ಎಂದು ನಂಬಲಾಗಿದೆ.
ಜಟಿಗನ ಹುತ್ತ
ಇನ್ನೂ ಪುರಾತನ ಯಜ್ಞ ಮಂಟಪ, ಸೂರ್ಯತೀರ್ಥ ಹೊರಗಡೆ ರಾಮ ಲಕ್ಷ್ಮಣ ಸೀತಾ ತೀರ್ಥಗಳಿವೆ. ದೇವಸ್ಥಾನದ ಮುಂದೆ ರಾಜರಾಣಿಯನ್ಪು ಹೋಲುವ ಒಂದು ಶಿಲ್ಪ ರಚನೆಯಿದೆ. ಹಾಗೆಯೇ ಹೊರಗಡೆಯೂ ನಂದಿಯಿದೆ. ದೇವಸ್ಥಾನದ ಪಕ್ಕದಲ್ಲಿ ಆರು ಅಡಿ ಎತ್ತರದ ಸುಮಾರು ಹತ್ತಿಪ್ಪತ್ತು ಮೀಟರ್ ಉದ್ದದ ಜಟಿಗನ ಹುತ್ತವಿದೆ. ಪ್ರತೀ ಸಂಕ್ರಮಣ, ಶಿವರಾತ್ರಿ, ರಾಮನವಮಿ, ಕಾರ್ತಿಕ ಮಾಸ ಪವಿತ್ರ ದಿನಗಳಾಗಿದ್ದು, ಆ ದಿನಗಳಂದ ಧಾರ್ಮಿಕ ಕಾರ್ಯಕ್ರಮಗಳಿರುತ್ತವೆ.
ರಾಮಲಿಂಗೇಶ್ವರನ ದರ್ಶನಕ್ಕೆ ಹೀಗೆ ಬನ್ನಿ (ಚಿತ್ರಕೃಪೆ:ಗೂಗಲ್ ಮ್ಯಾಪ್ಸ್)
ಇದನ್ನೂ ಓದಿ: Vibhuti In River: ಈ ನದಿಯಲ್ಲಿ ಸಿಗುತ್ತಂತೆ ನೈಸರ್ಗಿಕ ವಿಭೂತಿ!
ಒಟ್ಟಾರೆಯಾಗಿ ಯಲ್ಲಾಪುರದಿಂದ ಇಡಗುಂದಿಗೆ ಇಳಿದರೆ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಈ ದೇಗುಲವಿದ್ದು ಇಷ್ಟಾರ್ಥ ಕರುಣಿಸುವ ಕ್ಷೇತ್ರವಾಗಿ ಪ್ರಸಿದ್ಧವಾಗಿದೆ. ನೀವೊಮ್ಮೆ ಯಲ್ಲಾಪುರಕ್ಕೆ ಬರುವವರಾಗಿದ್ದರೆ ಖಂಡಿತಾ ಈ ದೇಗುಲಕ್ಕೆ ಭೇಟಿ ಕೊಡಿ ಇದು ನೆಮ್ಮದಿಯ ತಾಣ, ಜೊತೆಗೆ ಧರ್ಮದ ಬೀಡು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ