• Home
  • »
  • News
  • »
  • uttara-kannada
  • »
  • Uttara Kannada: ಅಂಕೋಲಾ ಪಂಚೆ, ರುಮಾಲಿಗೆ ಹೊರ ರಾಜ್ಯಗಳಲ್ಲೂ ಡಿಮ್ಯಾಂಡ್!

Uttara Kannada: ಅಂಕೋಲಾ ಪಂಚೆ, ರುಮಾಲಿಗೆ ಹೊರ ರಾಜ್ಯಗಳಲ್ಲೂ ಡಿಮ್ಯಾಂಡ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮೊದಲು ಹತ್ತಿಯ ನೂಲನ್ನು ದಾರವಾಗಿಸಿ ಅದನ್ನು ಯಂತ್ರದಲ್ಲಿ ಹೆಣೆದು ಉಜಾಲದಲ್ಲಿ ನೆನೆಸಿ ಬಿಳಿ ಬಣ್ಣಕ್ಕೆ ತರಲಾಗುತ್ತೆ. ನಾನಾ ರೀತಿಯ ಬಣ್ಣವನ್ನೂ ನಡುವೆ ಸೇರಿಸಲಾಗುತ್ತೆ. ಆಗಲೇ ತಯಾರಾಗುತ್ತೆ ನೋಡಿ ಅದ್ಭುತ ಪಂಚೆ, ರುಮಾಲು!

  • Share this:

    ಕಾರವಾರ: ಮಣ್ಣಿನ ಗೋಡೆಯ ಮನೆ, ಒಳಗಡೆ ಹಳೆಯ ಗಾಂಧಿಯ ಚರಕ, ನೂಲುದಾರದ ಪಂಚೆ, ರುಮಾಲು. ಸ್ವದೇಶಿ ಚಳುವಳಿಯ ಸಂಕೇತವಿದು, ಸಾಂಪ್ರದಾಯಿಕ ಕಲೆಯಿದು. ಆದರೆ ನೇಪಥ್ಯಕ್ಕೆ ಸರಿಯುತ್ತಿರೋ ಈ ನೇಕಾರಿಕೆ ಕಂಡು ಬರುತ್ತಿರೋದಾದ್ರೂ ಎಲ್ಲಿ ಅಂತೀರಾ? ಅದೆಲ್ಲಿ ಅನ್ನೋದನ್ನ ನಾವ್ ಹೇಳ್ತೀವಿ ನೋಡಿ. ಉತ್ತರ ಕನ್ನಡದ (Uttara Kannada News) ಅಂಕೋಲಾ ಸ್ವಾತಂತ್ರ್ಯ ಹೋರಾಟಗಾರರ ತವರುಮನೆ. ಅಂಕೋಲಾದ (Ankola) ಕಾಕರಮಠದಲ್ಲಿ 100 ವರ್ಷ ಹಳೆಯದಾದ ಹಾಗೂ ಉತ್ತರ ಕನ್ನಡದ ಏಕೈಕ ಸಾಂಪ್ರದಾಯಿಕ ನೇಕಾರಿಕಾ ಕೇಂದ್ರ ( Traditional Weaving In Ankola) ಗಮನಸೆಳೆಯುತ್ತಿದೆ.


    ಆಧುನಿಕ ಸಿದ್ಧ ಉಡುಪುಗಳ ನಡುವೆಯೇ ಇಲ್ಲಿ ತಯಾರಾಗೋ ಪಂಚೆ, ರುಮಾಲುಗಳಿಗೆ ಭರ್ಜರಿ ಬೇಡಿಕೆಯಿದೆ.


    ಇದನ್ನೂ ಓದಿ: Uttara Kannada: ತಾಯಿಯನ್ನು ಸದಾ ಜೀವಂತವಿಟ್ಟ ಮಗ, ಅವ್ವನ ನೆನಪು ಎಂಬ ಮಮತೆಯ ಮ್ಯೂಸಿಯಂ




    ಮಹಾರಾಷ್ಟ್ರಕ್ಕೂ, ಗೋವಾಗಳಲ್ಲೂ ಬಹು ಬೇಡಿಕೆ!
    ಇಲ್ಲಿ ತಯಾರಾಗೋ ಪಂಚೆ, ರುಮಾಲುಗಳು ಮಹಾರಾಷ್ಟ್ರ, ಗೋವಾ ಹಾಗೂ ನೆರೆಯ ಜಿಲ್ಲೆಗಳಿಗೂ ರವಾನೆಯಾಗುತ್ತೆ. ಆದರೆ, ಹಿಂದೆಲ್ಲ ನೇಕಾರಿಕೆ ವೃತ್ತಿಯಲ್ಲಿ ನೂರಾರು ಜನರು ತೊಡಗಿಸಿಕೊಂಡಿದ್ದರೆ ಈಗ ಅಂಕೋಲಾದ ನೇಕಾರಿಕೆ ಕೇಂದ್ರದಲ್ಲಿ ಕೇವಲ ಮೂವರು ಕೆಲಸ ಮಾಡ್ತಿದ್ದಾರೆ. ಅಷ್ಟೇ ಅಲ್ಲ, ಮೊದಲಿನಂತೆ ಸ್ಥಳೀಯ ಹಾಲಕ್ಕಿ ಸಮುದಾಯ ಉಡುವ ಬಟ್ಟೆಗಳನ್ನು ಬಿಟ್ಟು ಈಗ ಪಂಚೆ, ರುಮಾಲುಗಳಷ್ಟೇ ಇಲ್ಲಿ ತಯಾರಾಗುತ್ತಿವೆ.


    ಹೇಗೆ ತಯಾರಿಸ್ತಾರೆ ಗೊತ್ತಾ?
    ಮೊದಲು ಹತ್ತಿಯ ನೂಲನ್ನು ದಾರವಾಗಿಸಿ ಅದನ್ನು ಯಂತ್ರದಲ್ಲಿ ಹೆಣೆದು ಉಜಾಲದಲ್ಲಿ ನೆನೆಸಿ ಬಿಳಿ ಬಣ್ಣಕ್ಕೆ ತರಲಾಗುತ್ತೆ. ನಾನಾ ರೀತಿಯ ಬಣ್ಣವನ್ನೂ ನಡುವೆ ಸೇರಿಸಲಾಗುತ್ತೆ. ಆಗಲೇ ತಯಾರಾಗುತ್ತೆ ನೋಡಿ ಅದ್ಭುತ ಪಂಚೆ, ರುಮಾಲುಗಳು.


    ಇದನ್ನೂ ಓದಿ: Gumate Pang: ಗಣಪತಿ ದೇವರ ಇಷ್ಟದ ವಾದ್ಯ ಗುಮಟೆ ಪಾಂಗ್! ಇದು ಲೋಕಲ್ ಬ್ಯಾಂಡ್ ಸೆಟ್!


    ಗಾಂಧಿ ಕನಸಿನ ಚರಕ, ಸ್ವದೇಶಿ ಚಳವಳಿಯ ಸಂಕೇತವಾದ ಈ ಸಾಂಪ್ರದಾಯಿಕ ನೇಕಾರಿಕೆ ಮುಂದಿನ ಪೀಳಿಗೆಯೂ ಕಾಣುವಂತಾಗಲಿ ಅನ್ನೋದು ಇಲ್ಲಿನ ಸಾಂಪ್ರದಾಯಿಕ ನೇಕಾರರ ಒತ್ತಾಸೆಯಾಗಿದೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: