Uttara Kannada: ಮೀನು ತಾನಾಗೇ ಬಂದು ಬೀಳುವಂತೆ ಬಲೆ ಹೆಣೆಯುವುದು ಹೀಗೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ದೊಡ್ಡ ಬಲೆಗಳು 15 ದಿನ ಅವಧಿಯಲ್ಲಿ ತಯಾರಾದರೆ, ಚಿಕ್ಕ ಬಲೆ ವಾರದೊಳಗಾಗಿ ತಯಾರಾಗುತ್ತವೆ. ಇವರು ತಯಾರಿಸುವ ಬಲೆಗಳು ಮಹಾರಾಷ್ಟ್ರ, ಗೋವಾ, ಕೇರಳ ರಾಜ್ಯಗಳನ್ನು ತಲುಪುತ್ತವೆ.

  • News18 Kannada
  • 2-MIN READ
  • Last Updated :
  • Uttara Kannada, India
  • Share this:

ಉತ್ತರ ಕನ್ನಡ: ಬಲೆಗಳನ್ನ ಹರವಿಕೊಂಡು ಪೋಣಿಸುತ್ತಿರೋ ಮೀನುಗಾರರು (Fishermen), ಫ್ಲೈ ಓವರ್‌ ಕೆಳಗೆ ರೆಡಿಯಾಗ್ತಿವೆ ಮೀನಿನ ಬಲೆ. ಹಾಗಿದ್ರೆ ಕಾರವಾರದ (Karwar News) ನ್ಯಾಷನಲ್ ಹೈವೇ ಪಕ್ಕದಲ್ಲಿ ಪೋಣಿಸೋ ಈ ಬಲೆಗೆ (Fish Net Making Process) ಅದೆಷ್ಟು ಡಿಮ್ಯಾಂಡ್‌ ಇದೆ ಗೊತ್ತಾ? ಮೀನುಗಾರಿಕೆಗೆ ಬೇಕಾಗಿ ಈ ಬಲೆ ತಯಾರಿ ನಡೆಯೋದು ಹೇಗೆ ಗೊತ್ತಾ? 




ಕೊನೆಯ ಸೀಸನ್‌
ಹೀಗೆ ಬಲೆ ಹೆಣೆಯುವ ದೃಶ್ಯ ಕಂಡು ಬರುವುದು ಉತ್ತರ ಕನ್ನಡದ ಕಾರವಾರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ. ಹೀಗೆ ಹರವಿಕೊಂಡ ಬಲೆಗಳನ್ನು ಪೋಣಿಸುತ್ತಾ, ಅದಕ್ಕೆ ಸ್ಪಾಂಜಿನ ಬಾಲ್​ಗಳನ್ನು ಜೋಡಿಸುತ್ತಾ ಕಡಲ ಮಕ್ಕಳು ಸಿದ್ಧರಾಗಿದ್ದಾರೆ. ಮೀನುಗಾರಿಕೆಗೆ ಬಲೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಈ ಬಲೆ ಕಟ್ಟುವುದು ಕೂಡಾ. ಹಾಗಾಗಿ ಕಾರವಾರದಲ್ಲಿ ಮೀನಿನ ಕೊನೆಯ ಸೀಸನ್‌ ವೇಳೆ ಕಟ್ಟುವ ಈ ಬಲೆಗೆ ಹೊರ ರಾಜ್ಯದಿಂದಲೂ ಡಿಮ್ಯಾಂಡ್‌ ಇದೆ.

ಟೆಂಡರ್‌ ಪ್ರಕಾರ ಬಲೆ ತಯಾರಿ
ಆಗಸ್ಟ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ವಿವಿಧ ಹಂತದಲ್ಲಿ ಮೀನುಗಾರಿಕೆ ನಡೆಯುತ್ತದೆ . ಅಂತಹ ಮೀನುಗಾರಿಕೆಯನ್ನು ವಿವಿಧ ಭಾಗಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ವಿಭಾಗ ಮಾಡಲಾಗಿದೆ. ಈಗ ಪಶ್ಚಿಮ ಕರಾವಳಿಗೆ ಕೊನೆಯ ಮೀನಿನ ಕೊಯ್ಲು. ಹೀಗಾಗಿ ಕಾರವಾರದಲ್ಲಿ ಟೆಂಡರ್ ಪ್ರಕಾರ ಬಲೆಗಳನ್ನು ಈ ಹೆದ್ದಾರಿಯ ಫ್ಲೈ ಓವರ್‌ ಕೆಳಗೆ ಹೆಣೆದು ಕೊಡಲಾಗುತ್ತಿದೆ. ಇದೇ ವೃತ್ತಿಯಲ್ಲಿ ಕಳೆದ ಎರಡು ಮೂರು ದಶಕಗಳಿಂದ ತೊಡಗಿಸಿಕೊಂಡವರಿದ್ದಾರೆ. 

Malpe fisherman nets 22 kg ghol fish mrq


ಇದನ್ನೂ ಓದಿ: Brinjal Bajji: ಮೆಣಸಿನಕಾಯಿಗಿಂತ ಹೆಚ್ಚು ಟೇಸ್ಟಿ ಈ ಬದನೆಕಾಯಿ ಬಜ್ಜಿ, ತಿಂದು ತೇಗಿದರೂ ಆಸೆ ತೀರಲ್ಲ!

ನೆರೆಯ ರಾಜ್ಯಗಳಿಗೂ ರವಾನೆ
ಬಲೆ ಹೆಣೆಯಲು ಬೇಕಾದ ಕಚ್ಚಾವಸ್ತುಗಳನ್ನ ಇವರು ಉಡುಪಿ, ಮಹಾರಾಷ್ಟ್ರ, ಗೋವಾದಿಂದ ತರಿಸಿಕೊಳ್ಳುತ್ತಾರೆ. ಅವುಗಳನ್ನು ಗುತ್ತಿಗೆ ಆಧಾರದ ಮೇಲೆ ಅಳತೆ ಮಾಡಿ ಹೆಣೆದು ಬಲೆ ತಯಾರಿಸುತ್ತಾರೆ. ದೊಡ್ಡ ಬಲೆಗಳು 15 ದಿನ ಅವಧಿಯಲ್ಲಿ ತಯಾರಾದರೆ, ಚಿಕ್ಕ ಬಲೆ ವಾರದೊಳಗಾಗಿ ತಯಾರಾಗುತ್ತವೆ. ಇವರು ತಯಾರಿಸುವ ಬಲೆಗಳು ಮಹಾರಾಷ್ಟ್ರ, ಗೋವಾ, ಕೇರಳ ರಾಜ್ಯಗಳನ್ನು ತಲುಪುತ್ತವೆ. ಅಲ್ಲಿನ ಕರಾವಳಿಯ ಮೀನುಗಾರರಿಗೆ ಇಲ್ಲಿಂದ ರಫ್ತಾಗೋ ಬಲೆಗಳೇ ಹೆಚ್ಚುವ ಗಟ್ಟಿತನ ನೀಡುತ್ತವೆ.



ಇದನ್ನೂ ಓದಿ: Uttara Kannada: ಇವರಿಗೆ ಆಕಾಶವೇ ಬಂಡವಾಳ, ಕಗ್ಗಾಡ ಹಳ್ಳಿಯಲ್ಲಿದೆ 40 ಲಕ್ಷದ ಆಸ್ಟ್ರೋ ಫಾರ್ಮ್!


ಒಟ್ಟಿನಲ್ಲಿ ಬಲೆ ಹೆಣೆಯುವುದು ಕೂಡಾ ಒಂದು ಕಲೆ. ಹತ್ತಾರು ಕೆಲಸಗಾರರಿಗೆ ಉದ್ಯೋಗವನ್ನೂ ನೀಡುತ್ತವೆ. ಒಟ್ಟಿನಲ್ಲಿ ಕಡಲ ಮಕ್ಕಳ ಹೊಟ್ಟೆ ತುಂಬಿಸೋ ಬದುಕಿನ ಕಲೆ ಕೂಡಾ ಈ ಬಲೆಯಲ್ಲಿ ಅಡಗಿದೆ ಅಂದ್ರೆ ತಪ್ಪಾಗದು.


ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

First published: