ಇದು ಕಾಂತಾರ ಶೂಟಿಂಗ್ ಸ್ಪಾಟೂ ಅಲ್ಲ, ಕಾಂತಾರ ಸಿನೆಮಾ (Kantara Film) ಪೋಸ್ಟರೂ ಅಲ್ಲ. ಕಾಂತಾರವನ್ನೇ ಹೋಲುವ ಜೋಪಡಿ ಮಾದರಿಯ ಹೊಟೇಲ್. ಹೌದು, ಕಾಂತಾರ ಸೃಷ್ಟಿಸಿದ ಹವಾದಲ್ಲೇ ಇಲ್ಲೊಂದು ಹೋಟೆಲ್ (Kantara Hotel) ಲುಕ್ಕೇ ಬದಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿರೋ ಕಾಂತಾರ ಹೊಟೇಲ್ ಸಖತ್ ಸೆನ್ಸೇಶನ್ ಕ್ರಿಯೇಟ್ ಮಾಡ್ತಿದೆ. ಈ ಹಿಂದೆ "ಹೋಟೆಲ್ ಗ್ರೀನ್ ಲ್ಯಾಂಡ್" ಹೆಸರಿನ ಈ ಹೋಟೆಲ್ ಕೊರೊನಾ (Covid-19) ಸಂಕಷ್ಟದಿಂದ ಒಂದು ವರ್ಷಗಳ ಕಾಲ ಮುಚ್ಚಿಹೋಗಿತ್ತು. ಆದ್ರೆ ಕಾಂತಾರ ಫಿಲ್ಮ್ (Kantara Movie) ಬಂತು ನೋಡಿ, ಕಾಂತಾರ ಹೋಟೆಲ್ ಹೆಸರಲ್ಲಿ ಮತ್ತೆ ಆರಂಭವಾಯ್ತು.
ಕಾಂತಾರ ಸಿನಿಮಾದಂತೇ ಹಿಂದೆಂದಿಗಿಂತಲೂ ಹೆಚ್ಚು ವ್ಯಾಪಾರವನ್ನೂ ಆಗೋಕೆ ಶುರುವಾಯ್ತು.
ಯಾವೆಲ್ಲ ಆಹಾರ ಸಿಗುತ್ತೆ ಗೊತ್ತಾ?
ವೆಜ್ ಹಾಗೂ ನಾನ್ ವೆಜ್ ಎರಡೂ ಬಗೆಯ ಆಹಾರ ಕಾಂತಾರ ಹೋಟೆಲ್ನಲ್ಲಿ ಸಿಗುತ್ತೆ. ಗುಡಿಸಲೇ ಇಲ್ಲಿ ಹೋಟೆಲ್ ಆಗಿರೋದಕ್ಕೆ ಕಾಂತಾರ ಸಿನಿಮಾ ಸೆಟ್ನಲ್ಲಿ ಇದ್ದ ಫೀಲ್ ನೀಡುತ್ತೆ.
ಮುಚ್ಚಿಹೋಗಿದ್ದ ಹೋಟೆಲ್ಗೆ ಮರುಜೀವ
ಒಟ್ಟಾರೆ ಮುಚ್ಚೇ ಹೋಗಿದ್ದ ಹೋಟೆಲ್ ಒಂದು ಕಾಂತಾರ ಕ್ರೇಝ್ನಲ್ಲಿ ಶುರುವಾಗಿ ಲಾಭ ಮಾಡ್ತಿರೋದು ಉತ್ತರ ಕನ್ನಡಿಗರ ಗಮನ ಸೆಳೆಯುತ್ತಿರೋದಂತೂ ಸತ್ಯ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ