ಉತ್ತರ ಕನ್ನಡ: ದಟ್ಟ ಕಾಡಲ್ಲಿ ನಡಿಗೆ, ಮುಗಿಲೆತ್ತರಕ್ಕೆ ಬೆಳೆದ ಮರಗಳು, ಅಲ್ಲಲ್ಲಿ ಇಣುಕಿ ನೋಡೋ ಮಂಗಟ್ಟೆ, ಇದೇ ಹಕ್ಕಿ ಇಷ್ಟೊಂದು ಜನರನ್ನು ಈ ಕಾಡಿಗೆ ಕರೆತಂದದ್ದು! ಹೌದು, ದಕ್ಷಿಣ ಭಾರತದಲ್ಲಿ ಕೇವಲ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kannada News) ಮಾತ್ರ ಕಂಡುಬರುವ ಹಾರ್ನ್ಬಿಲ್ಗೆಂದೇ (Hornbill Festival In Dandeli) ನಡೆದ ಪರಿಸರ ಹಬ್ಬದ ಸಂಭ್ರಮವಿದು.
ಮಾನವನ ವಾಸಸ್ಥಳಗಳಿಂದ ದೂರವಿದ್ದು, ಸುರಕ್ಷಿತ ಕಾಡಿನೊಳಗೆ ವಾಸಿಸುವ ಹಾರ್ನ್ಬಿಲ್ಗಳು ಕಾಣಸಿಗುವುದು ಅಪರೂಪ. ಕನ್ನಡದಲ್ಲಿ ಮಂಗಟ್ಟೆ ಎಂದು ಕರೆಯುವ ಹಾರ್ನ್ಬಿಲ್ಗಳಲ್ಲಿ ಏಳು ಪ್ರಕಾರಗಳಿದ್ದು, ಪಶ್ಚಿಮ ಘಟ್ಟದ ಕಾಡುಗಳಲ್ಲಿ ನಾಲ್ಕು ಪ್ರಕಾರದ ಮಂಗಟ್ಟೆಗಳು ಕಾಣಸಿಗುತ್ತವೆ.
ಹಾರ್ನ್ಬಿಲ್ ಪ್ರವಾಸೋದ್ಯಮ!
ಇವುಗಳಲ್ಲಿ ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ ಅಥವಾ ಗ್ರೇಟ್ ಪೈಡ್ ಹಾರ್ನ್ಬಿಲ್ಗಳು ಬಹಳ ನಾಚಿಕೆ ಸ್ವಭಾವದ್ದು ಜೊತೆಗೆ ಗಾತ್ರದಲ್ಲಿಯೂ ಬಹಳ ದೊಡ್ಡದಾಗಿರುತ್ತವೆ. ಇವು ದಕ್ಷಿಣ ಭಾರತದಲ್ಲೇ ಉತ್ತರ ಕನ್ನಡದ ಕಾಳಿ ನದಿ ಪ್ರದೇಶಗಳಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತಿದ್ದು, ಇವುಗಳನ್ನ ನೋಡೋಕೆ ಬರೋ ಪ್ರವಾಸಿಗರ ಸಂಖ್ಯೆ ಕಡಿಮೆಯೇನಿಲ್ಲ!
ಇದನ್ನೂ ಓದಿ: Uttara Kannada: ಆಟದ ಗೊಂಬೆಯೇ ಟೀಚರ್! ಮಕ್ಕಳಿಗೆ ಪಾಠ ಹೇಳಿಕೊಡುತ್ತೆ ಈ ರೋಬೋಟ್!
ಹಾರ್ನ್ಬಿಲ್ ಕುರಿತು ಜಾಗೃತಿ ಮೂಡಿಸುವ ಉದ್ದೇಶ
ಈ ಹಕ್ಕಿಯ ಕುರಿತು ಮಾಹಿತಿ ನೀಡುವ, ಇವುಗಳ ವಿಶಿಷ್ಟತೆಯನ್ನ ಸಾರುವ ದೃಷ್ಟಿಯಿಂದ ಪ್ರತಿವರ್ಷ ದಾಂಡೇಲಿಯಲ್ಲಿ ಹಾರ್ನ್ಬಿಲ್ ಉತ್ಸವ ಆಯೋಜಿಸಲಾಗಿತ್ತು. ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಪಕ್ಷಿಪ್ರಿಯರು, ಹವ್ಯಾಸಿ ಛಾಯಾಗ್ರಾಹಕರು ಪಾಲ್ಗೊಂಡು ದಾಂಡೇಲಿಯ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸುವ ಮೂಲಕ ಹಾರ್ನ್ಬಿಲ್ ಕುರಿತು ಜಾಗೃತಿ ಮೂಡಿಸಿದರು.
ಇದನ್ನೂ ಓದಿ: Uttara Kannada: ಪತ್ತೆಯಾಯ್ತು ಅಪರೂಪದ ರಣಗಂಬ! ಹೆಚ್ಚಿದ ಕುತೂಹಲ
ಇನ್ನು ಹಾರ್ನ್ಬಿಲ್ ಹಕ್ಕಿ ಹಬ್ಬದಲ್ಲಿ ದೇಶ ವಿದೇಶದಿಂದ ಪಕ್ಷಿ ಪ್ರಿಯರು ಪಾಲ್ಗೊಂಡಿದ್ದರು. ಪ್ರತಿದಿನ ಪಕ್ಷಿ ವೀಕ್ಷಣೆ, ಹಾರ್ನ್ಬಿಲ್ ಕುರಿತು ಚರ್ಚೆಗಳು, ವಿಚಾರಗೋಷ್ಟಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹಾರ್ನ್ಬಿಲ್ ಪಕ್ಷಿಯ ಆಕರ್ಷಕ ಛಾಯಾಚಿತ್ರಗಳ ಪ್ರದರ್ಶನ ಗಮನಸೆಳೆಯಿತು.
ವರದಿ: ದೇವರಾಜ್ ನಾಯ್ಕ್, ಕಾರವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ