• Home
  • »
  • News
  • »
  • uttara-kannada
  • »
  • Positive Story: 1,500 ರೂಪಾಯಿಯಲ್ಲಿ ಕಮಾಲ್ ಮಾಡಿದ ಉತ್ತರ ಕನ್ನಡದ ಯುವಕ

Positive Story: 1,500 ರೂಪಾಯಿಯಲ್ಲಿ ಕಮಾಲ್ ಮಾಡಿದ ಉತ್ತರ ಕನ್ನಡದ ಯುವಕ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕಾರ್ತಿಕ್ ತಯಾರಿಸಿರೋ ಎಲೆಕ್ಟ್ರೋ ಸ್ಟಾಟಿಕ್ ಪ್ರೆಸಿಪಿಟೇಟರ್ ಎಂಬ ಗಾಳಿ ಶುದ್ಧಗೊಳಿಸೋ ಯಂತ್ರಕ್ಕೆ ಮಾರ್ಕೆಟ್​ನಲ್ಲಿರೋ ಕಂಪನಿಗಳು ಲಕ್ಷಾಂತರ ರೂಪಾಯಿ ಇನ್ವೆಸ್ಟ್ ಮಾಡುತ್ತವೆ!

  • Share this:

    ಮೂರರಿಂದ ನಾಲ್ಕು ವೈರ್ ತುಂಡುಗಳು, ಸಣ್ಣದಾದ ಡಯೋಡ್, ಬೈಕ್ ಇಗ್ನಿಶನ್ ಮೋಟಾರ್, ಉದ್ದನೆಯ ಕೊಳವೆ. ಇಷ್ಟಿದ್ದರೆ ಸಾಕು ನಾವು ಉಸಿರಾಡೋ ಗಾಳಿ ಕ್ಲೀನ್ ಕ್ಲೀನ್! ಅರೆ, ಹೀಗೂ ಉಂಟೇ? ಅಂತಾ ನೀವೆಲ್ಲ ಕೇಳ್ಬಹುದು. ಆದ್ರೆ ಇಂಥಾ ಅಚ್ಚರಿಯೊಂದನ್ನ ಪದವಿ ವಿದ್ಯಾರ್ಥಿಯೊಬ್ರು (Student) ಸಾಧಿಸಿ ತೋರಿಸಿದ್ದಾರೆ. ಹೌದು, ಈ ಚಿಕ್ಕದಾದ ಈ ಮಷಿನ್​ಗೆ ಗಾಳಿಯನ್ನು ಶುದ್ದೀಕರಿಸೋ (Air Purifier) ಸಾಮರ್ಥ್ಯವಿದೆ. ಇಂತಹ ಮಾಡೆಲ್ ಅನ್ನು ತಯಾರಿಸಿದ್ದು, ಉತ್ತರ ಕನ್ನಡದ ಜಿಲ್ಲೆಯ (Uttara Kannada) ಹೊನ್ನಾವರ (Honnavar) ಸ್ನಾತಕ ಸಂಶೋಧನಾ ಕೇಂದ್ರದ ವಿದ್ಯಾರ್ಥಿ ಕಾರ್ತಿಕ್ ಬಾಗಿಲುವೈದ್ಯ.


    ಅಲ್ಲೇ ಇರುವ ಎಸ್​ಡಿಎಂ ಕಾಲೇಜಿನಲ್ಲಿ ಬಿ.ಎಸ್​ಸಿ ಮುಗಿಸಿರೋ ಕಾರ್ತಿಕ್ ಮೂಲತಃ ಕೃಷಿ ಕುಟುಂಬದಿಂದವರು. ಇದೀಗ ಕಾರ್ತಿಕ್ ಸಂಶೋಧಿಸಿದ ಗಾಳಿ ಶುದ್ದೀಕರಣ ಯಂತ್ರವು ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಸೈನ್ಸ್ ಎಕ್ಸ್ ಪೋದಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದೆ.


    ಇದನ್ನೂ ಓದಿ: PVC Pipe Gun: ಮಂಗನನ್ನು ಓಡಿಸೋಕೆ ಪೈಪ್ ಗನ್! ಕೃಷಿಕರೇ, ವಿಡಿಯೋ ನೋಡಿ


    ಖರ್ಚು ಕೇವಲ 1,500 ರೂ. ಮಾತ್ರ
    ಕಾರ್ತಿಕ್ ತಯಾರಿಸಿರೋ ಎಲೆಕ್ಟ್ರೋ ಸ್ಟಾಟಿಕ್ ಪ್ರೆಸಿಪಿಟೇಟರ್ ಎಂಬ ಗಾಳಿ ಶುದ್ಧಗೊಳಿಸೋ ಯಂತ್ರಕ್ಕೆ ಮಾರ್ಕೆಟ್​ನಲ್ಲಿರೋ ಕಂಪನಿಗಳು ಲಕ್ಷಾಂತರ ರೂಪಾಯಿ ಇನ್ವೆಸ್ಟ್ ಮಾಡುತ್ತಂತೆ. ಆದ್ರೆ ಇದಕ್ಕೆಲ್ಲಾ ಕಾರ್ತಿಕ್ ಅವರು ಖರ್ಚು ಮಾಡಿದ್ದು ಕೇವಲ 1,500 ರೂಪಾಯಿ ಮಾತ್ರ!


    ಇದನ್ನೂ ಓದಿ: Uttara Kannada: ಕಡಿಮೆ ಖರ್ಚು, ಹೆಚ್ಚು ಲಾಭ! ಕೃಷಿಕರೇ ಈ ಪಂಪ್ ಬಳಸಿ ನೋಡಿ


    ಎಲ್ಲೆಡೆ ಬಳಸಲು ಅಭಿವೃದ್ಧಿಪಡಿಸುವ ಇಚ್ಛೆ
    ಕಾರ್ತಿಕ್ ಈ ಯಂತ್ರವನ್ನ ಸಣ್ಣ ಗಾತ್ರದಲ್ಲಿ ಮನೆಗೂ, ಬೃಹತ್ ಗಾತ್ರದಲ್ಲಿ ಫ್ಯಾಕ್ಟರಿಗಳಿಗೂ ಅಳವಡಿಸುವ ಯೋಜನೆ ಹೊಂದಿದ್ದಾರೆ. ಕಾರ್ತಿಕ್ ಅವರ ಈ ಕನಸು ನನಸಾಗಲಿ ಅನ್ನೋ ಶುಭ ಹಾರೈಕೆ ನಮ್ಮದು.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: