• ಹೋಂ
  • »
  • ನ್ಯೂಸ್
  • »
  • ಉತ್ತರ ಕನ್ನಡ
  • »
  • Family Newspaper: ಉತ್ತರ ಕನ್ನಡದ ಈ ಕುಟುಂಬವೇ ಹೊರತರುತ್ತೆ ಫ್ಯಾಮಿಲಿ ನ್ಯೂಸ್ ಪೇಪರ್! ಇದು 'ಮಿರ್ಚಿ ಮಂಡಕ್ಕಿ' ಸ್ಪೆಷಲ್

Family Newspaper: ಉತ್ತರ ಕನ್ನಡದ ಈ ಕುಟುಂಬವೇ ಹೊರತರುತ್ತೆ ಫ್ಯಾಮಿಲಿ ನ್ಯೂಸ್ ಪೇಪರ್! ಇದು 'ಮಿರ್ಚಿ ಮಂಡಕ್ಕಿ' ಸ್ಪೆಷಲ್

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಇಂತಹದೊಂದು ಐಡಿಯಾ ಈ ಕುಟುಂಬದ ಹಿರಿಯ ತಲೆಯಾದ ಅಜ್ಜಿ ತೀರಿಕೊಂಡು ಅವರ ಶ್ರಾದ್ಧದ ದಿನ ಬಂದಿದ್ದು. ಅವರ ನೆನಪಿನಲ್ಲೇ ಈ ನ್ಯೂಸ್ ಲೆಟರ್ ಆರಂಭವಾಯಿತು. ಅಂದಿನಿಂದ ಶುರುವಾದ ಈ ‘ಮಿರ್ಚಿ ಮಂಡಕ್ಕಿ‘ ಪೇಪರ್ ಅನ್ನು ಈಗಲೂ ಮುಂದುವರೆಸಿಕೊಂಡು ಬರಲಾಗಿದೆ.

  • News18 Kannada
  • 2-MIN READ
  • Last Updated :
  • Uttara Kannada, India
  • Share this:

    ಉತ್ತರ ಕನ್ನಡ: ಮಿರ್ಚಿ ಮಂಡಕ್ಕಿ ಬೇಕಾ? ಮಿರ್ಚಿ ಮಂಡಕ್ಕಿ. ಇದು ಅಂತಿಂತ ಮಂಡಕ್ಕಿ ಅಲ್ಲ, ಪೇಪರ್ ಮಿರ್ಚಿ ಮಂಡಕ್ಕಿ. ಓ, ಇದನ್ನ ತಿನ್ನೋದ್ ಹೇಗ್ ಅಂತಾನ? ಅರೇ, ಇದನ್ನ (Mirchi Mandakki) ತಿನ್ನೋಕ್ಕೆ ಆಗಲ್ಲ! ಬದಲಿಗೆ ಇದು ಕುಟುಂಬವೊಂದರ ನೋವು ನಲಿವನ್ನ (Family Feelings)  ಶೇರ್ ಮಾಡಿಕೊಳ್ಳೋ ಮಿರ್ಚಿ ಮಂಡಕ್ಕಿ ಪೇಪರ್.

    ಒಂದಿಡೀ ಪರಿವಾರದ ನೋವು ನಲಿವುಗಳ ಭಾವಬುತ್ತಿಯನ್ನು ಕಟ್ಟಿಕೊಡುವ ಮನೆಯವರಿಗಾಗಿ ಮನೆಯವರಿಂದ ಮನೆಯವರೇ ತಯಾರಿಸಿರುವ ಪೇಪರ್ ಈ ಮಿರ್ಚಿ ಮಂಡಕ್ಕಿ. ಉತ್ತರ ಕನ್ನಡದ ಹೊನ್ನಾವರದ ಮಂಡಕ್ಕಿಕರ್ ಕುಟುಂಬದ ನ್ಯೂಸ್ ಪೇಪರ್ ಇದು.


    ಕುಟುಂಬದ ಕುರಿತು ಲೇಖನ! ಓದುಗರೇ ಇವರೇ!
    ಈ ನ್ಯೂಸ್ ಪೇಪರ್​ನಲ್ಲಿ ಹಿರಿಯರಿಂದ ಕಿರಿಯರ ತನಕ ಎಲ್ಲರೂ ಮನೆಯಲ್ಲಿ ಆಗುವ ಪ್ರತಿ ಸಮಾರಂಭ, ಸಮಾರಾಧನೆಗೂ ವಿಶೇಷ ಲೇಖನಗಳನ್ನು ಬರೆದು ಪ್ರಕಟಿಸಲಾಗುತ್ತೆ. ನಂತರ ಡಿಜಿಟಲ್ ಹಾಗೂ ಮ್ಯಾನ್ಯುಯಲ್ ಮಾದರಿಯಲ್ಲಿ ತಮ್ಮ ಕುಟುಂಬದ ಪ್ರತೀ ಸದಸ್ಯನಿಗೂ ತಲುಪಿಸ್ತಾರೆ. ಹೀಗೆ ಕುಟುಂಬದ ನಡುವಿನ ಆಗುಹೋಗುಗಳನ್ನ ಇಡೀ ಪರಿವಾರವೇ ಓದುವಂತೆ ಮಾಡುವ ವಿಶಿಷ್ಟ ಪ್ರಯತ್ನವೇ ಮಿರ್ಚಿ ಮಂಡಕ್ಕಿ! ಇದಕ್ಕೆ ಮಂಡಕ್ಕಿಕರ್ ಕುಟುಂಬಿಕರೆಲ್ಲರೂ ಉತ್ತಮವಾಗಿ ಸ್ಪಂದಿಸುತ್ತಿರುವುದು ಕೂಡಾ ವಿಶೇಷ.


    ಅಜ್ಜಿಯ ಶ್ರಾದ್ಧದ ದಿನ ಬಂದ ಐಡಿಯಾ!
    ಇಂತಹದೊಂದು ಐಡಿಯಾ ಈ ಕುಟುಂಬದ ಹಿರಿಯ ತಲೆಯಾದ ಅಜ್ಜಿ ತೀರಿಕೊಂಡು ಅವರ ಶ್ರಾದ್ಧದ ದಿನ ಬಂದಿದ್ದು. ಅವರ ನೆನಪಿನಲ್ಲೇ ಈ ನ್ಯೂಸ್ ಲೆಟರ್ ಆರಂಭವಾಯಿತು. ಅಂದಿನಿಂದ ಶುರುವಾದ ಈ ‘ಮಿರ್ಚಿ ಮಂಡಕ್ಕಿ‘ ಪೇಪರ್ ಅನ್ನು ಈಗಲೂ ಮುಂದುವರೆಸಿಕೊಂಡು ಬರಲಾಗಿದೆ.


    ಪೇಪರ್ ಕೆಲಸ ಮಾಡೋದು ಮನೆಯವರೇ!
    ಪತ್ರಿಕೆಗೆ ಈ ಮನೆಯವರೇ ಬರೆಯುತ್ತಾರೆ. ಎಡಿಟ್ ಮಾಡುತ್ತಾರೆ, ಪ್ರೂಫ್ ನೋಡುತ್ತಾರೆ ಕೊನೆಗೆ ಪ್ರಕಟಿಸುತ್ತಾರೆ. ಆ ಮಟ್ಟಿಗೆ ಒಂದು ಸುದ್ದಿ ಮನೆಯಲ್ಲಿ ಪತ್ರಿಕೆ ಪ್ರಕಟವಾಗಬೇಕಾದರೆ ಇರುವ ಜಾಗರೂಕತೆಗಳೆಲ್ಲವನ್ನ ಇವ್ರು ಪಾಲಿಸ್ತಾರೆ.




    ಇದನ್ನೂ ಓದಿ: Kavadikere Lake Temple: ಕವಡೆಯ ನೀರಿನಿಂದ ತುಂಬಿದ 60 ಎಕರೆಯ ಕೆರೆ! ದಟ್ಟ ಅಡವಿಯ ನಡುವಿನ ಕವಡಿಕೆರೆ ಮಹಾತ್ಮೆಯಿದು


    2ನೇ ಸಂಚಿಕೆ ಪ್ರಕಟ
    ಸದ್ಯ ಈ ಕೌಟುಂಬಿಕ ಪತ್ರಿಕೆಯ 2ನೇ ಸಂಚಿಕೆ ಪ್ರಕಟವಾಗಿದ್ದು ಕುಟುಂಬದ ಸದ್ಯರನ್ನು ತಲುಪಿಸುವ ಕೆಲಸ ನಡೆದಿದೆ. ಈ ಪತ್ರಿಕೆಯಲ್ಲಿ ಕೆಲವರು ದುಃಖ, ಇನ್ನು ಕೆಲವರು ತುಂಟಾಟ, ಹಲವರು ಹೊಸ ವಿಷಯ, ಇನ್ನೊಂದಿಷ್ಟು ಮಂದಿ ಕುಟುಂಬದ ಇತಿಹಾಸವನ್ನು ಈ ಮೂಲಕ ಹಂಚಿಕೊಳ್ಳುತ್ತಾರೆ.


    ಇದನ್ನೂ ಓದಿ: Uttara Kannada: 2 ಸಾವಿರಕ್ಕಿಂತ ಕಡಿಮೆ ಹಣಕ್ಕೆ ಅದ್ಭುತ ಕೃಷಿ ಉಪಕರಣ ತಯಾರಿಸಿದ ವಿದ್ಯಾರ್ಥಿಗಳು!


    ಒಟ್ಟಿನಲ್ಲಿ ಕುಟುಂಬಕ್ಕೊಂದು ತನ್ನದೇ ಆದ ಸುದ್ದಿ ಪತ್ರಿಕೆ ಹೊಂದಿರುವುದು ಇದೇ ಮೊದಲು ಇರಬೇಕೋ ಏನೋ! ಏನೇ ಇರಲಿ, ಮಿರ್ಚಿ ಮಂಡಕ್ಕಿ ಸದಾ ನೋವು ನಲಿವುಗಳ ಅಕ್ಷರ ರೂಪದ ಈ ಪ್ರಯತ್ನಕ್ಕೆ ನಿಜಕ್ಕೂ ಭೇಷ್ ಎನ್ನಲೇಬೇಕು.


    ವರದಿ: ಎ.ಬಿ,ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್ ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: