• Home
 • »
 • News
 • »
 • uttara-kannada
 • »
 • Uttara Kannada: ಕರಾವಳಿಯಲ್ಲಿ ಹೊಂಡೆ ಆಟದ ಸಂಭ್ರಮ! ಈ ಆಟ ಆಡೋದು ಹೀಗೆ!

Uttara Kannada: ಕರಾವಳಿಯಲ್ಲಿ ಹೊಂಡೆ ಆಟದ ಸಂಭ್ರಮ! ಈ ಆಟ ಆಡೋದು ಹೀಗೆ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಹಿಂದೆ ರಾಜ ಮಹಾರಾಜರ ಆಳ್ವಿಕೆಯಲ್ಲಿ ಯುದ್ಧಗಳನ್ನೇ ಉಸಿರಾಡಿಕೊಂಡಿದ್ದ ಕೋಮಾರಪಂಥೀಯರು ತಮ್ಮ ವೀರೋತ್ಸಾಹವನ್ನು ಮತ್ತೊಮ್ಮೆ ಬಡಿದೆಬ್ಬಿಸಲು ಈ ರೀತಿಯ ಹೊಂಡೆ ಆಟ ಆಡುತ್ತಾರೆ.

 • Share this:

  ಉತ್ತರ ಕನ್ನಡ: ಇದೇನಿದು ಕಾಯಿ ಎಸೆಯುತ್ತಿದ್ದಾರೆ? ಏನಾದ್ರೂ ಸ್ಟ್ರೈಕ್ ನಡೆಸ್ತಿದ್ದಾರಾ ಹೇಗೆ ಅಂತ ಯೋಚಿಸಿದ್ರಾ? ಅಲ್ಲ ಕಣ್ರೀ.. ಇದು ದೀಪಾವಳಿ ಸೆಲಬ್ರೇಷನ್! ಉತ್ತರ ಕನ್ನಡದ (Uttara Kannada) ಕರಾವಳಿಯ ಭಾಗಗಳಲ್ಲಿ ದೀಪಾವಳಿ ಕೊನೆಯಾಗುವುದೇ ಹೀಗೆ. "ಇದೆಂತಾ ಆಚರಣೆ ಮಾರ್ರೇ!" ಅಂತೀರಾ.. ಇದು ಕೋಮಾರ ಪಂಥ ಸಮುದಾಯ ಆಚರಿಸುವ ವೀರತ್ವ-ಭ್ರಾತೃತ್ವ ಸಾರುವ ಹೊಂಡೆ ಆಟ ಎಂಬ ಆಚರಣೆ. ಹೀಗೊಂದು ವಿಶಿಷ್ಟ ಆಟವನ್ನ (Folk Games In Uttara Kannada) ಬಹು ಹಿಂದಿನಿಂದಲೇ ಆಚರಿಸಲಾಗ್ತಿದೆ.


  ಹಿಂದೆ ರಾಜ ಮಹಾರಾಜರ ಆಳ್ವಿಕೆಯಲ್ಲಿ ಯುದ್ಧಗಳನ್ನೇ ಉಸಿರಾಡಿಕೊಂಡಿದ್ದ ಕೋಮಾರಪಂಥೀಯರು ತಮ್ಮ ವೀರೋತ್ಸಾಹವನ್ನು ಮತ್ತೊಮ್ಮೆ ಬಡಿದೆಬ್ಬಿಸಲು ಈ ರೀತಿಯ ಹೊಂಡೆ ಆಟ ಆಡುತ್ತಾರೆ.


  ಇದನ್ನೂ ಓದಿ: Uttara Kannada: ಆಕಳ ರಕ್ಷಣೆ ಹುಲಿಯ ಹೊಣೆ! ಕದಿಯೋಕೂ ಇದೆ ಅನುಮತಿ!


  ಈ ಆಟ ಆಡೋದು ಹೇಗೆ?
  ಈ ಆಟ ಆಡೋದು ಹೇಗೆ ಅಂತ ನೋಡೋದಾದ್ರೆ ಹಿಂಡ್ಲು ಕಾಯಿಯನ್ನು ಕವಣೆಯಲ್ಲಿ ಕಟ್ಟಿಕೊಂಡು ಎರಡು ತಂಡಗಳಾಗಿ ಒಬ್ಬರಿಗೊಬ್ಬರು ಹೊಂಡೆ ಹೊಂಡೆ ಎಂದು ಅರಚುತ್ತಾ ಈ ರೀತಿ ಹೊಡೆದುಕೊಳ್ಳುತ್ತಾರೆ.


  ಶಾಂತದುರ್ಗಾ ದೇವಸ್ಥಾನದಲ್ಲಿ ಹಬ್ಬ ಆರಂಭಗೊಂಡರೆ ವೆಂಕಟರಮಣ ದೇವಸ್ಥಾನದಲ್ಲಿ ಮುಗಿಯುತ್ತದೆ. ಊರಿನ ಹಾಗೂ ಸಮುದಾಯದ ಪ್ರಮುಖರು ಎರಡು ತಂಡದ ನಡುವೆ ನಿರ್ಣಾಯಕರಾಗಿರುತ್ತಾರೆ.


  ಇದನ್ನೂ ಓದಿ: Uttara Kannada: ಶಿವನಿಗೂ ಗಂಗೆಗೂ ಅದ್ದೂರಿ ಕಲ್ಯಾಣ! ಮದುವೆ ಆಲ್ಬಂ ನೋಡಿ!


  ಪುರಾತನ ಆಟಕ್ಕೆ ಸಾಕ್ಷಿಯಾದ ಕರಾವಳಿ
  ಸದ್ಯ ಬಲಿಪಾಡ್ಯಮಿಯಲ್ಲಿ ಹೊನ್ನೆಕೇರಿ ಹಾಗೂ ಕುಂಬಾರಕೇರಿಯ ಕೋಮಾರಪಂಥಿಯರು ಹೊಂಡೆ ಆಟ ಆಡಿದರು. ನಂತರ ವೆಂಕಟರಮಣ ದೇವಾಲಯದಲ್ಲಿ ಈ ಆಟ ಎರಡು ತಂಡದ ಭೇಟಿಯೊಂದಿಗೆ ಕೊನೆಯಾಯ್ತು.  ಒಟ್ಟಾರೆ ಪುರಾತನ ಆಟವೊಂದರ ಕಲರವಕ್ಕೆ ಕರಾವಳಿ ಸಾಕ್ಷಿಯಾಯ್ತು.


  ವರದಿ: ಎ.ಬಿ.ನಿಖಿಲ್, ಮುಂಡಗೋಡು

  Published by:ಗುರುಗಣೇಶ ಡಬ್ಗುಳಿ
  First published: