Uttara Kannada: ಊರೂರು ತಿರುಗುವ ಸುಗ್ಗಿ ಮೇಳ, ಸಾಂಪ್ರದಾಯಿಕ ನೃತ್ಯದ ಸಂಭ್ರಮವೇ ಬೇರೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

Holi 2023: ಅಷ್ಟೇ ಅಲ್ಲ, ಕೋಮಾರಪಂಥ ಸಮಾಜದಲ್ಲಿ ಮನೆ ಮನೆಗೆ ತೆರಳಿ ಕೋಲಾಟ ಆಡಿ ಸಂಭ್ರಮಿಸಿ ನೀಡಿದ ಕಾಣಿಕೆ ಹಣ ಸಂಗ್ರಹಿಸುವ ಸಂಪ್ರದಾಯವಿದೆ. ಈ ಹಣವನ್ನು ಗ್ರಾಮದ ಅಭಿವೃದ್ಧಿಗಾಗಿ ಉಪಯೋಗ ಮಾಡಲಾಗುತ್ತೆ.

  • Share this:

    ಕಾರವಾರ: ತಲೆಯ ಮೇಲೆ ತುರಾಯಿ ಕಟ್ಟಿದ ಸಾಂಪ್ರದಾಯಿಕ ವೇಷಭೂಷಣ, ಮನೆ ಮನೆಗೂ ಹೋಗಿ ಜಾನಪದ ಹಾಡಿಗೆ ಕೋಲಾಟ ಆಡುವುದು ನೋಡೋಕೆ ಚಂದ! ಇದು ಜಾನಪದ ಕಲೆಯ ತವರೂರು ಅಂಕೋಲಾ ತಾಲೂಕಿನ (Ankola) ಅಲಗೇರಿ ಗ್ರಾಮದಲ್ಲಿ ಕ್ಷತ್ರಿಯ ಕೋಮಾರಪಂಥ ಸಮಾಜದವರ ಹೋಳಿ ಸುಗ್ಗಿ ಸಂಭ್ರಮ. ಕಳೆದ 20 ವರ್ಷದ ಬಳಿಕ ಈ ವರ್ಷ ಹೋಳಿ (Holi 2023) ಸುಗ್ಗಿ ಸಂಭ್ರಮ (Suggi Celebration) ಆಚರಿಸುತ್ತಿದೆ ಈ ಸಮುದಾಯ!


    ಹೋಳಿ ಹಬ್ಬಕ್ಕೆ ಏಳು ದಿನ ಇರುವಾಗ ಸುಗ್ಗಿ ಸಂಭ್ರಮ ಆರಂಭವಾಗುತ್ತದೆ. ಗ್ರಾಮದ ಕರಿ ದೈವರಲ್ಲಿ ಧಾರ್ಮಿಕ ಪದ್ದತಿಯಂತೆ ಊರಿನ ಸಮುದಾಯದ ಮುಖಂಡರು ಪ್ರಾರ್ಥನೆ ಮಾಡಿ ಸುಗ್ಗಿ ಮೇಳ ಊರೂರು ಸುತ್ತಾಟ ಆರಂಭವಾಗುತ್ತದೆ.


    ಏಳು ದಿನಗಳ ಕಾಲ ಊರೂರು ಸುತ್ತಾಟ!
    ಏಳು ದಿನದಲ್ಲಿ ಹಳ್ಳಿ ಹಳ್ಳಿ ಸುತ್ತಾಡಿ ಮನೆ ಮನೆಗಳಲ್ಲಿ ಕೋಲಾಟ ಆಡಿ ಸಾಂಪ್ರದಾಯಿಕ ಪದ್ದತಿ ಉಳಿಸುವ ಪ್ರಯತ್ನ ಮುಂದುವರಿಸಿದೆ ಈ ಕೋಮಾರಪಂಥ ಸಮಾಜ.


    ಇದನ್ನೂ ಓದಿ: Uttara Kannada: ಜಿಲೇಬಿ ಮಾರಿ ಶಾಲೆ ಕಟ್ಟಿದ ಸಾಹಸಿ! ಶಿಕ್ಷಣ ಕ್ರಾಂತಿ ಮಾಡಿದ ಅಡುಗೆ ಭಟ್ಟರು!




    ಅಷ್ಟೇ ಅಲ್ಲ, ಕೋಮಾರಪಂಥ ಸಮಾಜದಲ್ಲಿ ಮನೆ ಮನೆಗೆ ತೆರಳಿ ಕೋಲಾಟ ಆಡಿ ಸಂಭ್ರಮಿಸಿ ನೀಡಿದ ಕಾಣಿಕೆ ಹಣ ಸಂಗ್ರಹಿಸುವ ಸಂಪ್ರದಾಯವಿದೆ. ಈ ಹಣವನ್ನು ಗ್ರಾಮದ ಅಭಿವೃದ್ಧಿಗಾಗಿ ಉಪಯೋಗ ಮಾಡಲಾಗುತ್ತೆ.


    ಇದನ್ನೂ ಓದಿ: Uttara Kannada: ಮರ ಹತ್ತೋದೇನು, ಬಾವಿ ಇಳಿಯೋದೇನು! ಶಿರಸಿಯ ಈ ಲೇಡಿ ಮುಂದೆ ಸೂಪರ್​ಮ್ಯಾನ್​ ಸಹ ಏನಲ್ಲ!


    ಒಟ್ಟಾರೆ ಹೋಳಿ ಮುಂಚಿತವಾಗಿ ಕೋಮಾರಪಂಥ ಸಮಾಜದ ಸುಗ್ಗಿ ಸಂಭ್ರಮ ಈಗ ಮನೆ ಮನೆ ಮಾತಾಗಿದೆ.


    ವರದಿ: ದರ್ಶನ್ ನಾಯ್ಕ್, ನ್ಯೂಸ್ 18 ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: