Uttara Kannada: ಹೋಳಿ ಹಬ್ಬಕ್ಕಿಲ್ಲ ಬಣ್ಣದೋಕುಳಿ; ಇಲ್ಲಿ ಬೂದಿಯೇ ರಂಗು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಇಂದಿಗೂ ಗೌಳಿ ಸಮುದಾಯದ ಜನರು ಯಾವುದೇ ರೀತಿ ಬೇರೆ ಬಣ್ಣ ಬಳಸುವುದಿಲ್ಲ. ಕೇವಲ ಬೂದಿಯೇ ಅವರಿಗೆ ಭಂಡಾರವೂ ಹೌದು, ಬಣ್ಣವೂ ಹೌದು!

  • News18 Kannada
  • 2-MIN READ
  • Last Updated :
  • Uttara Kannada, India
  • Share this:

    ಉತ್ತರ ಕನ್ನಡ: ಹೋಳಿ ಅಂದ್ರೆ ರಂಗು ರಂಗಿನ ಬಣ್ಣ ಎರಚಿ ಸಂಭ್ರಮಿಸೋದನ್ನ (Holi Celebration) ನೋಡಿದ್ದೀವಿ, ಕೇಳಿದ್ದೀವಿ ಇಲ್ಲವೇ ಅನುಭವಿಸಿದ್ದೀವಿ ಕೂಡಾ. ಆದ್ರೆ ಇಲ್ಲಿ ಹೋಳಿ ಅಂದ್ರೆ ವರ್ಣ ರಂಜಿತ ಬಣ್ಣಗಳಿಲ್ಲ, ಓಕುಳಿಯಾಟವಿಲ್ಲ. ಇಲ್ಲೇನಿದ್ರೂ (Holi 2023) ಬಣ್ಣದೋಕುಳಿಯ ಬದಲು ಬೂದಿಯೇ ಎಲ್ಲವೂ.


    ಬೂದಿಯೇ ರಂಗು!
    ಯೆಸ್, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಬ್ಯಾನಳ್ಳಿ, ಕಗ್ಗಾಡಿನ ನಡುವೆ ಇರೋ ಗೌಳಿ ಸಮುದಾಯದ ಜನರು ಬಣ್ಣದೋಕುಳಿ ಆಡೋದೇ ಇಲ್ಲ. ಇಲ್ಲಿನ ಹೋಳಿ ಹಬ್ಬದ ಆಚರಣೆಗಳೇ ಬೇರೆ. ಇಲ್ಲಿ ಹೋಳಿ ಹಬ್ಬದ ಆಚರಣೆ ಆಡುವುದೇ ಬೆರಣಿಯ ಬೂದಿಯಿಂದ!




    ಇಂದಿಗೂ ಗೌಳಿ ಸಮುದಾಯದ ಜನರು ಯಾವುದೇ ರೀತಿ ಬೇರೆ ಬಣ್ಣ ಬಳಸುವುದಿಲ್ಲ. ಕೇವಲ ಬೂದಿಯೇ ಅವರಿಗೆ ಭಂಡಾರವೂ ಹೌದು, ಬಣ್ಣವೂ ಹೌದು! ಊರ ಹಿರಿಯರು ಬೂದಿ ಹಚ್ಚಿದ ನಂತರವೇ ಉಳಿದವರು ಆಡುವ ಮೂಲಕ ಐದು ದಿನಗಳ ಕಾಲ ಈ ಗೌಳಿ ಹಟ್ಟಿಯಲ್ಲಿ ಹಬ್ಬದ ಸಂಭ್ರಮವಿರುತ್ತೆ.


    ದುಂಡುಕಲ್ಲುಗಳೇ ರತಿ ಕಾಮರು!
    ಇತರೆಡೆ ರತಿ ಕಾಮನನ್ನು ಇಟ್ಟು ಹೋಳಿ ಹಬ್ಬ ಮಾಡುತ್ತಾರೆ. ಕೊನೆಗೆ ವಿಸರ್ಜನೆ ಮಾಡುವ ಸಂಪ್ರದಾಯವಿದೆ. ಆದರೆ ಇಲ್ಲಿ ಕಾಮನಿಗೆ ರತಿಗೆ ರೂಪವಿಲ್ಲ. ಹಿರಿಯರು ತಂದಿಟ್ಟ ಎರಡು ರೀತಿಯ ದುಂಡುಕಲ್ಲುಗಳೇ ರತಿ ಕಾಮ. ಹೋಳಿ ಹುಣ್ಣಿಮೆಯ ಹಿಂದಿನ ದಿನ ಗೌಳಿಗರು ಬೆರಣಿ ತೆಗೆದುಕೊಂಡು ಹೋಗಿ ಈ ರತಿ ಕಾಮನ ಸುತ್ತುವರೆದು ಬೆಂಕಿ ಇಡುತ್ತಾರೆ.




    ಇದನ್ನೂ ಓದಿ: Uttara Kannada: ಸುಗ್ಗಿ ಹಬ್ಬಕ್ಕೆ ಚಂದದ ಅಲಂಕಾರ! ತಲೆ ಮೇಲಿನ ತುರಾಯಿ ತಯಾರಿಸೋದು ಹೀಗೆ ನೋಡಿ


    ಮಾರನೇ ದಿನ ಹಾಲು ತುಪ್ಪ ವಿಧಿ ಇಮಾಡುವಂತೆಯೇ ಪ್ರತಿ ಮನೆಯಿಂದ ಅನ್ನ ಬೆಲ್ಲ ಹಾಗೂ ಎಣ್ಣೆ, ಹಾಲು ತಂದು ಗುಂಡುಕಲ್ಲುಗಳನ್ನು ತೊಳೆದು ಎಣ್ಣೆ ಸವರಿ ಹಾಲು ಹಾಕಿ ನಂತರ ಕುಂಕುಮ ಅರಿಶಿನ ಹಚ್ಚಿ ಬೂದಿ ಸಂಗ್ರಹಿಸುತ್ತಾರೆ.


    ಇದನ್ನೂ ಓದಿ:Bedara Vesha: ಶಿರಸಿಯ ಬೀದಿಗಳಲ್ಲಿ ಬೇಡರ ವೇಷದ್ದೇ ಕಾರುಬಾರು! ವಿಶೇಷ ಕುಣಿತಕ್ಕೆ ಯುವಕರ ಸಖತ್ ಹೆಜ್ಜೆ




    ಐದು ದಿನಗಳ ಸಂಭ್ರಮದ ಹಬ್ಬ!
    ಪ್ರತಿ ಮನೆಯಿಂದ ಒಣಗಿದ ಸಾಗವಾನಿ ಎಲೆಯಲ್ಲಿ ಪ್ರಸಾದ ತಂದಿಡಲಾಗುತ್ತದೆ. ಈ ರೀತಿ ಮಾಡಿದ ಮೇಲೆ ಕೊನೆಗೆ ಐದು ದಿನ ಗೌಳಿಗರು ನೃತ್ಯ ಮಾಡುತ್ತಾರೆ. ಒಟ್ಟಿನಲ್ಲಿ ಹೋಳಿ ಅಂದರೆ ವರ್ಣ ರಂಜಿತ ಬಣ್ಣ, ಡಿಜೆ ಸದ್ದು ಇದ್ದರೆ ಗೌಳಿ ಸಮುದಾಯದ ಹೋಳಿ ಆಚರಣೆಯು ವಿಶಿಷ್ಟ ಹಾಗೂ ಸಾಂಪ್ರದಾಯಿಕವಾಗಿ ಉಳಿದಿರುವುದು ವಿಶೇಷವೇ ಸರಿ.


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: