Snake Viral Video: ನಾಗರಹಾವು ರಸ್ತೆ ದಾಟಲು ಹೆದ್ದಾರಿಯೇ ಅರ್ಧ ಗಂಟೆ ಬಂದ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸುಮಾರು 6 ಅಡಿ ಉದ್ದವಿದ್ದ ನಾಗರಹಾವಿನ ಮಧ್ಯಪ್ರವೇಶದಿಂದ ಸುಮಾರು ಅರ್ಧ ಗಂಟೆ ಕಾಲ ವಾಹನ ಸವಾರರು ಪರದಾಡುವಂತಾಯಿತು. ಘನ ವಾಹನಗಳಂತೂ ಹೋಗಲಾರದೆ ಕಂಗಾಲಾದವು.

  • News18 Kannada
  • 4-MIN READ
  • Last Updated :
  • Uttara Kannada, India
  • Share this:

    ಕುಮಟಾ: ಪಾಪ, ದಾರಿ ತಪ್ಪಿ ಬಂದಿತ್ತು ನೋಡಿ ನಾಗರಹಾವು ಹೈವೇ (Cobra In Highway) ಮಧ್ಯೆ. ಘನ ವಾಹನಗಳ ಹಾರ್ನ್ ಆರ್ಭಟಕ್ಕೆ ನಲುಗಿಹೋಗಿತ್ತು ಕೋಬ್ರಾ. ಡಾಂಬರು ಬಿಸಿ, ವಾಹನಗಳ ಕಿರಿಕಿರಿಯಿಂದ ಕೊನೆಗೂ ಸಿಕ್ತು ನೋಡಿ ನಾಗರಾಜನಿಗೆ (Snake Viral Video) ಮುಕ್ತಿ.


    ಹೌದು, ಉತ್ತರ ಕನ್ನಡದ ಹೊಳೆಗದ್ದೆ ಟೋಲ್ ಹತ್ತಿರ ಹೆದ್ದಾರಿಗೆ ನುಗ್ಗಿದ್ದ ನಾಗರಹಾವು ಕೆಲ ಕಾಲ ಆತಂಕದ ಪರಿಸ್ಥಿತಿ ಎದುರಿಸಿತು. ಅತ್ತ ವಾಹನ ಚಾಲಕರೂ ಅಷ್ಟೇ ನಾಗರಾಜ ಕಂಡು ಭಯಗೊಂಡು ಹಾರ್ನ್ ಹೊಡೆಯಲು ಆರಂಭಿಸಿದರು.


    ಹಾವನ್ನು ರಕ್ಷಿಸಿದ ಸ್ನೇಕ್ ಪವನ್
    ಇತ್ತ ನಾಗರಾಜ ಎತ್ತ ಹೋಗುವುದೆಂದು ಕಾಣದೇ ಕಂಗಾಲಾದ. ಆಗ್ಲೇ ನೋಡಿ ಸ್ಥಳಕ್ಕೆ ಧಾವಿಸಿ ಬಂದ ಸ್ನೇಕ್ ಪವನ್ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟರು. ಅತ್ತ ಹಾವು ನಿಟ್ಟುಸಿರು ಬಿಟ್ಟರೆ, ಇತ್ತ ವಾಹನ ಸವಾರರು ನಿರಾಳರಾದರು.


    ಇದನ್ನೂ ಓದಿ: Kavadikere Lake Temple: ಕವಡೆಯ ನೀರಿನಿಂದ ತುಂಬಿದ 60 ಎಕರೆಯ ಕೆರೆ! ದಟ್ಟ ಅಡವಿಯ ನಡುವಿನ ಕವಡಿಕೆರೆ ಮಹಾತ್ಮೆಯಿದು


    ಅರ್ಧ ಗಂಟೆ ಹೆದ್ದಾರಿ ಬಂದ್ ಮಾಡಿದ್ದ ನಾಗರಹಾವು
    ಸುಮಾರು 6 ಅಡಿ ಉದ್ದವಿದ್ದ ನಾಗರಹಾವಿನ ಮಧ್ಯಪ್ರವೇಶದಿಂದ ಸುಮಾರು ಅರ್ಧ ಗಂಟೆ ಕಾಲ ವಾಹನ ಸವಾರರು ಪರದಾಡುವಂತಾಯಿತು. ಘನ ವಾಹನಗಳಂತೂ ಹೋಗಲಾರದೆ ಕಂಗಾಲಾದವು.




    ಇದನ್ನೂ ಓದಿ: Uttara Kannada: 2 ಸಾವಿರಕ್ಕಿಂತ ಕಡಿಮೆ ಹಣಕ್ಕೆ ಅದ್ಭುತ ಕೃಷಿ ಉಪಕರಣ ತಯಾರಿಸಿದ ವಿದ್ಯಾರ್ಥಿಗಳು!


    ಕೊನೆಗೂ ಸ್ಥಳೀಯರ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಸ್ನೇಕ್ ಪವನ್ ಕ್ಷಣಾರ್ಧದಲ್ಲೇ ನಾಗರಹಾವನ್ನ ಮೆತ್ತಗೆಯಲ್ಲಿ ಕೈಯ್ಯಲ್ಲಿ ಹಿಡಿದು ಹೈವೇ ಪಕ್ಕದ ಸುರಕ್ಷಿತ ಸ್ಥಳಕ್ಕೆ ದಾಟಿಸಿದರು.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು