• Home
  • »
  • News
  • »
  • uttara-kannada
  • »
  • Uttara Kannada: ಅಂಕೋಲಾ ತರಕಾರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ಬೆಲೆಯೂ ಕಡಿಮೆ

Uttara Kannada: ಅಂಕೋಲಾ ತರಕಾರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ಬೆಲೆಯೂ ಕಡಿಮೆ

ಅಂಕೋಲಾ ತರಕಾರಿ ಭಾರೀ ಪ್ರಸಿದ್ಧ

"ಅಂಕೋಲಾ ತರಕಾರಿ ಭಾರೀ ಪ್ರಸಿದ್ಧ"

ಇವರು ಮಾರಾಟ ಮಾಡ್ತಿರೋ ಈ ತರಕಾರಿಗಳಾವುದೂ ವರ್ಷವಿಡೀ ಸಿಗದು. ವರ್ಷದಲ್ಲಿ ಎರಡು ಬಾರಿ ಮಾತ್ರ ಮಾರುಕಟ್ಟೆಯಲ್ಲಿ ಈ ತರಕಾರಿ ಕಾಣಬಹುದಾಗಿದೆ.

  • News18 Kannada
  • Last Updated :
  • Uttara Kannada, India
  • Share this:

    ಕಾರವಾರ: ಹಾಲಿನಷ್ಟೇ ಬಿಳಿಬಿಳಿ ಇರುವ ಮೂಲಂಗಿ, ಉದ್ದನೆ ಗಾತ್ರದ ಬದನೆಕಾಯಿ, ತೊಂಡೆಕಾಯಿ, ಹಾಗಲಕಾಯಿ ಹೀಗೆ ಆಕಾರ, ರೂಪದಲ್ಲಿ ವಿಭಿನ್ನವಾದ ಈ ತರಕಾರಿ (Ankola Vegetables) ನೋಡ್ತಿದ್ರೇನೆ ಡಿಫರೆನ್ಸ್ ಕಂಡು ಹಿಡಿಯಬಹುದು. ಮಾರುಕಟ್ಟೆಗೆ ಬಂದರೆ ಸಾಕು, ಈ ತರಕಾರಿಗಳು ಪಟ ಪಟನೆ ಮಾರಾಟವಾಗುತ್ತವೆ. ಅಷ್ಟಕ್ಕೂ ಈ ತರಕಾರಿಗೆ ಅಷ್ಟೊಂದು ಡಿಮ್ಯಾಂಡ್ ಯಾಕ್ ಅಂತೀರಾ? ಅದುವೇ ಈ ತರಕಾರಿ ಸ್ಪೆಷಲ್ (Special Vegetables)  ನೋಡ್ರೀ. ಉತ್ತರ ಕನ್ನಡದ ಅಂಕೋಲಾದಲ್ಲೇ (Uttara Kannada Ankola) ಇಂತಹ ವಿಶಿಷ್ಟ ತರಕಾರಿಗಳು ಸಿಗುವುದು!


    ಇವರು ಮಾರಾಟ ಮಾಡ್ತಿರೋ ಈ ತರಕಾರಿಗಳಾವುದೂ ವರ್ಷವಿಡೀ ಸಿಗದು. ವರ್ಷದಲ್ಲಿ ಎರಡು ಬಾರಿ ಮಾತ್ರ ಮಾರುಕಟ್ಟೆಯಲ್ಲಿ ಈ ತರಕಾರಿ ಕಾಣಬಹುದಾಗಿದೆ. ಇದು ಪಕ್ಕ ಸಾವಯವ ಬೆಳೆ. ಜೊತೆಗೆ ಔಷಧೀಯ ಗುಣ ಹೊಂದಿರುತ್ತವೆ ಎಂದು ಹೇಳಲಾಗುತ್ತವೆ.


    ಹಾಲಕ್ಕಿ ಸಮುದಾಯದ ತರಕಾರಿಯೇ ವಿಶೇಷ
    ಅದರಲ್ಲೂ ಈ ತರಕಾರಿಗಳನ್ನು ವಿಶೇಷವಾಗಿ ಉತ್ತರ ಕನ್ನಡದ ಹಾಲಕ್ಕಿ ಸಮುದಾಯದವರು ಬೆಳೆಯುತ್ತಾರೆ. ಅಂಕೋಲಾ, ಕುಮಟಾ, ಗೋಕರ್ಣ, ಕಾರವಾರದಲ್ಲಿ ಇಂತಹ ತರಕಾರಿಗಳನ್ನು ಕಾಣಬಹುದಾಗಿದೆ.


    ಇದನ್ನೂ ಓದಿ: Freedom Fighter: 117 ವರ್ಷದ ಈ ಸ್ವಾತಂತ್ರ್ಯ ಹೋರಾಟಗಾರ ಕೇವಲ‌ ಗಡ್ಡೆಗೆಣಸು ತಿಂದು ಬದುಕುತ್ತಿದ್ದಾರೆ!


    ಗಾತ್ರ, ಆಕಾರ, ರೂಪದಲ್ಲೂ ಇದು ಬೇರೆಲ್ಲ ತರಕಾರಿಗಳಿಗಿಂತೂ ಹೆಚ್ಚು ವಿಭಿನ್ನ. ಹಾಗಾಗಿ ಬೇರೆ ಇದೇ ಮಾದರಿಯ ತರಕಾರಿಗೂ ಇಲ್ಲಿರೋ ತರಕಾರಿಗೂ ವ್ಯತ್ಯಾಸ ಕಾಣಬಹುದು.


    ದರ ವಿವರ ಹೀಗಿದೆ
    50 ರೂಪಾಯಿಗೆ 5 ಮೂಲಂಗಿ, ಕಾಲು ಕೆಜಿ ಬದನೆಕಾಯಿಗೆ 30 ರಿಂದ 40 ರೂಪಾಯಿ ಹಾಗೂ ಅಪರೂಪದ ಮಜ್ಜಿಗೆ ಮೆಣಸಿಗೆ ಇಂತಿಷ್ಟು ಅಂತ ದರ ನಿಗದಿಪಡಿಸಿಕೊಳ್ಳುತ್ತಾರೆ.


    ಇದನ್ನೂ ಓದಿ: Success Story: ಸಾವಿರಾರು ಮಹಿಳೆಯರ ತಿಂಗಳ ರಗಳೆಗೆ ಪರಿಹಾರ! ಸ್ಟಾರ್ಟಪ್ ಮಾಡಿ ಸಕ್ಸಸ್ ಕಂಡ ಗೋಕರ್ಣದ ಯುವತಿ


    ಹೋಟೇಲ್ ವ್ಯಾಪಾರಿಗಳನ್ನು ಹೊರತಾಗಿ ಎಲ್ಲಾ ಕರಾವಳಿಗರೂ ಈ ತರಕಾರಿಗಳನ್ನು ಅವಲಂಬಿಸಿದ್ದಾರೆ. ಈ ತರಕಾರಿ ಬೆಳೆಗಳಿಗೆ ಮಾನ್ಯತೆ ಸಿಕ್ಕಲ್ಲಿ ಇನ್ನಷ್ಟು ಜನಪ್ರಿಯವಾಗೋದ್ರಲ್ಲಿ ಸಂಶಯವಿಲ್ಲ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: