ಉತ್ತರ ಕನ್ನಡ: ಅರೆರೆ.. ಇದೇನಿದು ಶಿವಲಿಂಗದ (Shivalinga) ಪವಾಡ, ಒಮ್ಮೆ ಅತ್ತ ಕಡೆ ಸರಿಯುತ್ತೆ, ಒಮ್ಮೆ ಇತ್ತ ಕಡೆ ವಾಲುತ್ತೆ.. ಅಷ್ಟಕ್ಕೂ ಇದೆಲ್ಲ ಸಾಧ್ಯವಾಗೋದು ಹೇಗೆ? ಇಂತಹ ಶಿವಲಿಂಗ ಇರೋದಾದ್ರೂ ಎಲ್ಲಿ ಅಂತೀರ? ಅದೆಲ್ಲವನ್ನ ಹೇಳ್ತೀವಿ ನೋಡಿ.
ಕರಿಕಲ್ಲಿನಂತಿದೆ ಶಿವಲಿಂಗ
ಯೆಸ್, ಉತ್ತರ ಕನ್ನಡದ ಯಲ್ಲಾಪುರದಲ್ಲಿ ಇಂತಹದ್ದೊಂದು ಅತ್ತಿಂದಿತ್ತ ವಾಲುವ ಶಿವಲಿಂಗ ಕಂಡು ಬಂತು. ಜನರೆಲ್ಲರು ಈ ಶಿವಲಿಂಗ ಕಂಡು ಕೈ ಮುಗಿದು ನಮಸ್ಕರಿಸಿದರು. ಎತ್ತರದ ಈ ಶಿವಲಿಂಗ ಕಾಣೋದಕ್ಕೇನೋ ಥೇಟ್ ಕಲ್ಲಿನ ಶಿವಲಿಂಗದಂತೆಯೇ ಇದೆ.
ಹೀಲಿಯಂ ಬಲೂನ್
ಆದ್ರೆ, ಅಸಲಿಗೆ ಈ ಶಿವಲಿಂಗ ಹೀಲಿಯಂ ಬಲೂನ್ ಆಗಿದ್ದು, ಗಾಳಿ ತುಂಬಿಕೊಳ್ಳುತ್ತಲೇ ಅಪ್ಪಟ ಕರಿಕಲ್ಲಿನ ಶಿವಲಿಂಗದಂತೆ ರೂಪುಗೊಳ್ಳುತ್ತೆ. ಇದನ್ನ ಕಂಡ ಜನರು ಭಕ್ತಿ ಭಾವದಿಂದ ನಮಿಸುತ್ತಾರೆ.
ಯಲ್ಲಾಪುರದ ಗ್ರಾಮ ದೇವಿಯರ ಜಾತ್ರೆ ಸಂದರ್ಭ ಈಶ್ವರೀಯ ಬ್ರಹ್ಮ ಕುಮಾರಿ ಬಳಗದಿಂದ ಹಿಲೀಯಂ ಬಲೂನ್ ಮಾದರಿಯ ಈ ಶಿವಲಿಂಗದ ನಿರ್ಮಾಣ ಮಾಡಲಾಯಿತು. 45 ಅಡಿ ಎತ್ತರ ಹಾಗೂ ಸುಮಾರು 20 ಅಡಿ ಅಗಲದ ಈ ಶಿವಲಿಂಗವೂ ಅಷ್ಟೇ ಆಕರ್ಷಕವಾಗಿದೆ. ಒಟ್ಟಿನಲ್ಲಿ ಯಾವುದೇ ಜಾತ್ರೆ, ಉತ್ಸವ ಇರಲಿ ಈ ಹೀಲಿಯಂ ಬಲೂನಿನ ಶಿವಲಿಂಗ ಶಿವ ಭಕ್ತರನ್ನ ಕೈ ಬೀಸಿ ಕರೆಯುತ್ತೆ ಅನ್ನೋದು ಸತ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ