Hanuman Temple: ನುಗ್ಗಿಕೇರಿಯ ಈ ಆಂಜನೇಯ ಬಲಭೀಮ ಎಂದೇ ಫೇಮಸ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ನುಗ್ಗಿಕೇರಿಯ ಹನುಮನಿಗೆ ಏನೇ ಹರಕೆ ಮಾಡಿಕೊಂಡರೂ ಈಡೇರುತ್ತದೆ ಎಂಬ ಪ್ರತೀತಿಯಿದೆ.

  • News18 Kannada
  • 3-MIN READ
  • Last Updated :
  • Hubli-Dharwad (Hubli), India
  • Share this:

jಧಾರವಾಡ: ಗರ್ಭಗುಡಿಯನ್ನೇ ಮೀರಿ ಬೆಳೆದಂತೆ ಭಾಸವಾಗೋ ಪ್ರಭಾವಳಿ. ನವನೀತ ಸಿಂಧೂರದ ಅಲಂಕಾರದಲ್ಲಿ ಮುಳುಗೆದ್ದ ಮೂರ್ತಿ. ದಪ್ಪನೆಯ ಮೀಸೆ, ಅಭಯ ಹಸ್ತದ ವಿಶಾಲತೆ, ಮರಕ್ಕೆ ತಾಗಿ ಬೆಳೆದ ಬಳ್ಳಿಯಂತೆ ಅರಳಿದ ಸೌಗಂಧಿಕಾ ಪುಷ್ಪ. ಹೌದು, ಇದು ಇಲ್ಲಿರೋ ಆಂಜನೇಯನ (Lord Hanuman) ನೋಟ. ಹಾಗಿದ್ರೆ ಎಲ್ಲಿದ್ದಾನೆ ಈ ಪವರ್‌ ಫುಲ್‌ ಭಜರಂಗಿ (Bajarang Bali) ಅಂತೀರಾ? ಈ ಸ್ಟೋರಿ ನೋಡಿ.


ನುಗ್ಗಿಕೇರಿಯ ಬಲಭೀಮ!
ಯೆಸ್‌, ಈ ಆಂಜನೇಯನನ್ನು ನೀವು ನೋಡಬೇಕಾದ್ರೆ ಧಾರವಾಡದ ನುಗ್ಗಿಕೇರಿಗೆ ಬರಬೇಕು. ಪ್ರಶಾಂತವಾದ ವಾತಾವರಣದಲ್ಲಿ ಈ ಆಂಜನೇಯನ ಕಾರಣಿಕ ಕಡಿಮೆಯದ್ದಲ್ಲ. ಹಾಗಾಗಿ ಪ್ರತಿದಿನ ನೂರಾರು ಭಕ್ತರು ಇಲ್ಲಿಗೆ ಆಗಮಿಸ್ತಾರೆ. ಅದ್ರಲ್ಲೂ ಶನಿವಾರವಂತೂ ಭಕ್ತರ ಸಂಖ್ಯೆ ಸಾವಿರದ ಮೇಲೆ ಇರುತ್ತೆ. ಹೀಗಾಗಿ ಇಲ್ಲಿರೋ ಭಜರಂಗಿ ನುಗ್ಗಿಕೇರಿಯ ಬಲಭೀಮ ಅಂತಾನೇ ಪ್ರಸಿದ್ಧಿ ಪಡೆದಿದ್ದಾನೆ.
ದೇಸಾಯಿ ಪರಿವಾರದ ಆಡಳಿತ
ಮುಂದೆ ಪರ್ವತ ಹಾಗೂ ಹಿಂದೆ ಕೆರೆಯಿರುವ ಈ ದೇಗುಲದ ಪ್ರಾಂಗಣದಲ್ಲಿ ವಿಶಾಲವಾದ ಅಶ್ವತ್ಥ ವೃಕ್ಷವಿದೆ. ದೇಸಾಯಿ ಪರಿವಾರದವರು ಈ ದೇವಸ್ಥಾನದ ಸಮಸ್ತ ಅಧಿಕಾರವನ್ನು ಹೊಂದಿದ್ದು ಅವರ ಸೇವೆಯೇ ಇಲ್ಲಿ ಪ್ರಧಾನವೆನಿಸಿದೆ. ಅಂದಹಾಗೆ ಕಲಿಯುಗದ ಪ್ರಾರಂಭಕಾಲದಲ್ಲಿ ಜನಮೇಜಯ ರಾಜನಿಂದ ಪ್ರತಿಷ್ಠಾಪಿಸಲ್ಪಟ್ಟ ಮೂರ್ತಿಯಿದು ಅನ್ನೋ ಪ್ರತೀತಿಯಿದೆ.


ಸಾವಿರಾರು ವರ್ಷಗಳ ಇತಿಹಾಸ
ಸುಮಾರು 5ಸಾವಿರ ವರ್ಷಗಳ ಹಿಂದೆ ಅರ್ಜುನನ ಮರಿ ಮೊಮ್ಮಗನೂ ಆಗಿದ್ದ ಜನಮೇಜಯ ಪ್ರತಿಷ್ಠಾಪಿಸಿ ಪೂಜೆ ಮಾಡಿದ್ದನಂತೆ.‌ ಈ ದೇವರನ್ನು ವ್ಯಾಸರಾಯರು ತಮ್ಮ ಪ್ರವಾಸ ಕಾಲದಲ್ಲಿ ಪುನಃ ಪ್ರತಿಷ್ಠೆ ಮಾಡಿದ್ದಾರಂತೆ, ಅಂದ್ರೆ ಇಂದಿಗೆ ಸುಮಾರು 500 ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡ ದೇವಾಲಯವಿದು.


ಇದನ್ನೂ ಓದಿ: Hubballi Special Tractor: ಟ್ರ್ಯಾಕ್ಟರ್‌ ಒಂದೇ ಆದ್ರೂ, ಉಪಯೋಗ ಹಲವು! ಕರುನಾಡ ಹುಡುಗನ ಸಾಧನೆ


ವಿವಿಧ ಸೇವೆಗೆ ಪಾತ್ರನಾಗೋ ಹನುಮ
ನುಗ್ಗಿಕೇರಿಯ ಹನುಮನಿಗೆ ಏನೇ ಹರಕೆ ಮಾಡಿಕೊಂಡರೂ ಈಡೇರುತ್ತದೆ ಎಂಬ ಪ್ರತೀತಿಯಿದೆ. ಪಂಚಾಮೃತಾಭಿಷೇಕ, ಅರ್ಕಮಾಲಾ ಸಮರ್ಪಣೆ, ನವನೀತ ಅಲಂಕಾರ, ಸಿಂಧೂರಾಲಂಕಾರ ಇಲ್ಲಿ ದೇವರಿಗೆ ಮಾಡಲ್ಪಡುವ ವಿಶೇಷ ಸೇವೆಗಳಾಗಿವೆ.
ಶಕ್ತಿಶಾಲಿ ಭಜರಂಗಿ
ದೇವಸ್ಥಾನ ಸಂಪೂರ್ಣ ಚಿನ್ನದ ಬಣ್ಣವನ್ನು ಹೊಂದಿದ್ದು, ಒಳಗಡೆ ವಿಶಾಲ ಪ್ರಾಂಗಣ ನಂತರ ದೇಗುಲದ ಮಧ್ಯೆ ಸಣ್ಣ ಗರ್ಭಗುಡಿಯಲ್ಲಿ ವಿಶಾಲವಾದ ಆಂಜನೇಯನ ಮೂರ್ತಿ ಇದೆ. ಧಾರವಾಡಕ್ಕೆ ಬರುವ ಗಣ್ಯರು ಎಲ್ಲರೂ ಈ ಆಂಜನೇಯನ ಭಕ್ತರೇ!


ಇದನ್ನೂ ಓದಿ: Dharwad News: ಆಂಜನೇಯನ ದೇಗುಲದಲ್ಲಿ ಎಕ್ಕೆ ಹೂವಿನ ಸ್ವಾಗತ, ಸುವಾಸನೆ ಇಲ್ದಿದ್ರೂ ಇದೆ ಸಖತ್ ಸಂಪಾದನೆ!

top videos


    ಹೀಗಾಗಿ ಸ್ಥಳ ಇತಿಹಾಸದೊಂದಿಗೆ ಪೌರಾಣಿಕವಾಗಿ ಅಧ್ಯಯನ ನಡೆಸಿದರೆ ಈತ ಕಲಿಯುಗದ ಮೊದಲ ಆಂಜನೇಯ ಆಗುವುದರಲ್ಲಿ ಅನುಮಾನವಿಲ್ಲ. ಆ ನಿಟ್ಟಿನಲ್ಲಿ ಅಧ್ಯಯನಗಳು ನಡೆಯಬೇಕಿದೆ ಅನ್ನೋದೇನೋ ನಿಜ. ಆದ್ರೆ ಈ ಆಂಜನೇಯನ ಭಕ್ತರಿಗಂತೂ ಈತನೇ ಶಕ್ತಿಶಾಲಿ ದೇವರಾಗಿ ನೆಲೆಸಿದ್ದಾನೆ.

    First published: