ಹಳಿಯಾಳ: ಕೈಕೈ ಮಿಲಾಯಿಸೋ ಕುಸ್ತಿಪಟುಗಳು. ಎದುರಾಳಿ ಕೆಡವಿ ಹಾಕಲು ರಣತಂತ್ರ. ಪಂದ್ಯ ಗೆಲ್ಲೋದಕ್ಕೆ ನಡೆಯಿತು ನೋಡಿ ಪೈಪೋಟಿ. ಇದೆಲ್ಲವೂ ಉತ್ತರ ಕನ್ನಡದ (Uttara Kannada News) ಹಳಿಯಾಳದಲ್ಲಿ (Wrestling Village) ನಡೆದ ಕುಸ್ತಿಯ ಝಲಕ್. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ 25 ಕೆಜಿಯಿಂದ ಹಿಡಿದು 65 ಕೆಜಿ ವಿಭಾಗದಲ್ಲಿ ಕುಸ್ತಿ ಸ್ಪರ್ಧೆ ನಡೆದವು. ಕುಸ್ತಿ ಪೈಲ್ವಾನ್ಗಳಂತೂ ತೊಡೆ ತಟ್ಟಿ ನಿಂತಿದ್ರೆ, ಇತ್ತ ನೆರೆದ ಕುಸ್ತಿಪ್ರಿಯರ ಕರತಾಡನ ಮುಗಿಲು ಮುಟ್ಟುತ್ತಿತ್ತು. ತಮ್ಮಿಷ್ಟದ ಕುಸ್ತಿಪಟುಗಳನ್ನ ಜನರು ಹುರಿದುಂಬಿಸಿದರು.
ವಿಶೇಷ ಅಂದರೆ, ಒಂದೆಡೆ ಚಿಣ್ಣರ ಕುಸ್ತಿ ನಡೆದರೆ, ಇನ್ನೊಂದೆಡೆ ಸೀನಿಯರ್ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಹಿರಿಯ ಪೈಲ್ವಾನ್ಗಳು ಕಾದಾಡಿದರು. ಎದುರಾಳಿಯನ್ನ ನೆಲಕ್ಕೆ ಕೆಡವುತ್ತಾ, ಎದುರಾಳಿಯ ಪ್ರತಿರೋಧ ಎದುರಿಸುತ್ತಾ ಜಿದ್ದಾಜಿದ್ದಿಗೆ ಇಳಿದರು. ಒಬ್ಬೊಬ್ಬ ಪೈಲ್ವಾನ್ ಕೂಡಾ ತಾನೇನು ಕಡಿಮೆ ಇಲ್ಲ ಅನ್ನೋದನ್ನ ಹಳಿಯಾಳದ ಜನರ ಮುಂದೆ ತೋರಿಸಿಕೊಟ್ಟರು. ಶಕ್ತಿ ಪ್ರದರ್ಶನದ ಮೂಲಕ ಕುಸ್ತಿಪಟುಗಳು ಜನರ ಮುಂದೆ ಸೈ ಎನಿಸಿಕೊಂಡರು.
ಇದನ್ನೂ ಓದಿ: Dandeli Elephant: ದಾಂಡೇಲಿಗೆ 'ಲಕ್ಷ್ಮಿ' ಆಗಮನ! ಹೆಣ್ಣುಮರಿಗೆ ಜನ್ಮ ನೀಡಿದ ಚಾಮುಂಡಿ
ಕುಸ್ತಿಗೆ ಫೇಮಸ್ ಈ ಊರು!
ಇನ್ನು ಹಳಿಯಾಳದಲ್ಲಿ ಕ್ರೀಡಾಪಟುಗಳ ಕಾರ್ಖಾನೆಯೇ ಇದೆ. ಅದರಲ್ಲೂ ಕುಸ್ತಿಗಂತೂ ಈ ಗ್ರಾಮ ಹೆಚ್ಚು ಫೇಮಸ್. ಹಾಗಾಗಿ ಕುಸ್ತಿಪ್ರಿಯರು ಹೆಚ್ಚಾಗಿ ನೆರೆದು ಪಂದ್ಯಾವಳಿಯನ್ನ ಸವಿದರು.
ಇದನ್ನೂ ಓದಿ: Bhatkal Jasmine: ಈ ಮಲ್ಲಿಗೆಗೆ ಇದೆ ರಾಜ ಮರ್ಯಾದೆ! ಹೂಗಳ ಅನಭಿಷಿಕ್ತ ರಾಣಿ ಈಕೆ
ಹಳಿಯಾಳದ ಮಕ್ಕಳು ಈಗಾಗಲೇ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚು ಹರಿಸಿದ್ದಾರೆ. ಅಂತಹದ್ದರಲ್ಲಿ ತವರಲ್ಲೇ ನಿಂತು ಆಟ ಆಡೋ ಖುಷಿಯನ್ನ ಕುಸ್ತಿಪಟುಗಳು ಅನುಭವಿಸಿದ್ರೆ, ಊರ ಮಂದಿಯೂ ಅಷ್ಟೇ ಎಂಜಾಯ್ ಮಾಡಿದ್ರು.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ