• Home
  • »
  • News
  • »
  • uttara-kannada
  • »
  • Haliyal Wrestlers: ಕುಸ್ತಿಪಟುಗಳ ಕಾರ್ಖಾನೆ ಹಳಿಯಾಳ; ನೀವೂ ಇಲ್ಲಿ ಕುಸ್ತಿ ಕಲಿಯಬಹುದು ನೋಡಿ!

Haliyal Wrestlers: ಕುಸ್ತಿಪಟುಗಳ ಕಾರ್ಖಾನೆ ಹಳಿಯಾಳ; ನೀವೂ ಇಲ್ಲಿ ಕುಸ್ತಿ ಕಲಿಯಬಹುದು ನೋಡಿ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಇವ್ರೆಲ್ಲ ಉತ್ತರ ಕನ್ನಡದ ಹಳಿಯಾಳದ ಹುಲಿಗಳು. ಇಲ್ಲಿರೋ 30 ಕ್ಕೂ ಮಹಿಳಾ ಕುಸ್ತಿಪಟುಗಳು ರಣಚಂಡಿಗಳಂತೆ ಎದುರಾಳಿಗಳನ್ನ ಮಟ್ಟಹಾಕಬಲ್ಲರು.

  • News18 Kannada
  • Last Updated :
  • Uttara Kannada, India
  • Share this:

    ಕಾರವಾರ: ಅಬ್ಬ! ಅಬ್ಬಬ್ಬ! ಎಂಥ ಭಯಂಕರ ಕಸರತ್ತು ಕಣ್ರೀ. ಎದುರಾಳಿನ ಎತ್ತಿ ಎತ್ತಿ ನೆಲಕ್ಕೆ ಒಗೆದು ಹಾಕೋದನ್ನ ನೋಡ್ರೀ. ನೋಡ್ತಿದ್ರೆ ಮೈ ಝುಂ ಅನ್ನುತ್ತೆ, ಸಖತ್ ಮಜಾ ಕೊಡುತ್ತೆ. ಪುಟ್ಟ ಮಕ್ಕಳಿಂದ ಹಿಡಿದು ಒಬ್ಬೊಬ್ಬರದ್ದು ಒಂದೊಂದು ಬಗೆಯ ಸಾಹಸ ನೋಡ್ರೀ. ಈ ಕುಸ್ತಿ ಕಸರತ್ತಿನಲ್ಲಿ (Wrestling Champions) ಹೆಣ್ಮಕ್ಕಳು ತಾವೇನು ಕಮ್ಮಿ ಇಲ್ಲ ಅನ್ನೋದನ್ನ ತೋರಿಸ್ತಿದ್ದಾರೆ ನೋಡ್ರೀ. ಹೌದು, ಇವ್ರೆಲ್ಲ ಉತ್ತರ ಕನ್ನಡದ ಹಳಿಯಾಳದ (Haliyal Wrestlers) ಹುಲಿಗಳು. ಪೈಪೋಟಿಗೆ ಇಳಿದ್ರಂತೂ ದೇಶದ ಯಾವುದೇ ಮೂಲೆಗೆ ಹೋದ್ರೂ ಇವ್ರದ್ದೇ ಪಾರಮ್ಯ. ಪದಕ ಇಲ್ದೇ ವಾಪಸ್ ಬಂದವ್ರೇ ಅಲ್ಲ. ವಿಶೇಷವಾಗಿ ಇಲ್ಲಿರೋ 30 ರಷ್ಟು ಮಹಿಳಾ ಕುಸ್ತಿಪಟುಗಳು ರಣಚಂಡಿಯಂತೆ ಎದುರಾಳಿಗಳನ್ನ ಮಟ್ಟಹಾಕಬಲ್ಲರು.


    ಇದಕ್ಕೇ ನೋಡಿ ದಸರಾ ಕ್ರೀಡಾಕೂಟದ ಕುಸ್ತಿಸ್ಪರ್ಧೆಗೆ ತೆರಳಿದ ಎಂಟೂ ವಿದ್ಯಾರ್ಥಿನಿಯರು ಬಂಗಾರದ ಪದಕದೊಂದಿಗೆ ಹಿಂತಿರುಗಿ ಬಂದಿದ್ರು. ಪ್ರಿಸಿಂಟಾ ಸಿದ್ದಿ ಎನ್ನುವ ಹುಡುಗಿ ಕಿಶೋರಿ ಪ್ರಶಸ್ತಿ ಪಡೆಯುವುದರೊಂದಿಗೆ ಬೆಳ್ಳಿಗದೆಗೆ ಲಗ್ಗೆ ಇಟ್ಟ ಸಾಧನೆ ಮಾಡಿದ್ದರು.


    60 ಕ್ಕೂ ಹೆಚ್ಚು ಕುಸ್ತಿಪಟುಗಳು ತಯಾರಾಗ್ತಿದ್ದಾರೆ!
    ಹೀಗೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕುಸ್ತಿಪಟುಗಳನ್ನ ತಯಾರಿಸೋ ಕಾರ್ಖಾನೆಯಂತೆ ಕೆಲಸ ಮಾಡ್ತಿದೆ. ಯುವಜನ ಕ್ರೀಡಾ ಸಬಲೀಕರಣ ಮತ್ತು ಖೇಲೋ ಇಂಡಿಯಾ ಸಹಯೋಗದಲ್ಲಿ ನಡೆಯುತ್ತಿರೋ ಕುಸ್ತಿ ತರಬೇತಿ ಶಾಲೆಯೂ ಇಲ್ಲಿದೆ.


    ಇದನ್ನೂ ಓದಿ: Uttara Kannada: ಜಬರ್ದಸ್ತ್ ಹೋರಿ ಬೆದರಿಸೋ ಸ್ಪರ್ಧೆ! ನೋಡೋರ ಎದೆಯಲ್ಲೂ ಗಢಗಢ!


    ಅಂತಾರಾಷ್ಟ್ರೀಯ ಕುಸ್ತಿ ಪಟು ತುಕಾರಾಮ್ ಗೌಡ ಅವರ ಗರಡಿಯಲ್ಲಿ ಅರವತ್ತಕ್ಕೂ ಹೆಚ್ಚು ಮಕ್ಕಳು ಸದೃಢ ಕುಸ್ತಿಪಟುಗಳಾಗಿ ಅಖಾಡಕ್ಕೆ ಧುಮುಕಿದ್ದಾರೆ. ಹಲವಾರು ಕುಸ್ತಿಪಟುಗಳು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲೂ ಅನಾಯಾಸವಾಗಿ ಗೆದ್ದು ಹಳಿಯಾಳದಲ್ಲಿ ಹೆಸರು ಪಡೆದಿದ್ದಾರೆ. ಮುಂದೆ ಕಾಮನ್ ವೆಲ್ತ್, ಒಲಿಂಪಿಕ್ಸ್​ನಲ್ಲಿ ಭಾಗವಹಿಸೋ ಗುರಿಯನ್ನೂ ಇಲ್ಲಿನ ಕುಸ್ತಿಪಟುಗಳು ಹೊಂದಿದ್ದಾರೆ.


    ಕುಸ್ತಿ ಕಲಿಕೆಯ ಹಿಂದಿದೆ ಇವರೆಲ್ಲರ ಶ್ರಮ
    ಇದೆಲ್ಲದರ ಹಿಂದೆ ಕುಸ್ತಿ ತರಬೇತಿ ಪಟುಗಳಾದ ತುಕಾರಾಮ್, ಮಮತಾ ಹಾಗೂ ಅಧಿಕಾರಿ ಪ್ರವೀಣ್ ಕುಮಾರ್ ಅವರ ಶ್ರಮವಿದೆ. ಗಂಡುಮಕ್ಕಳನ್ನೂ ಮೀರಿಸುವಂತೆ ತೊಡೆತಟ್ಟಿ ನಿಲ್ಲುವ ಈ ಹೆಣ್ಣುಮಕ್ಕಳ ಕುಸ್ತಿ ನೋಡುವುದೇ ಚೆಂದ. ಬೆಳಗಾವಿ, ಧಾರವಾಡದಿಂದಲೂ ಹೆಣ್ಮಕ್ಳು ಕುಸ್ತಿ ಕಲಿಯೋ ಉಮೇದಿನಿಂದ ಹಳಿಯಾಳದ ವಸತಿ ನಿಲಯಕ್ಕೆ ಬರುತ್ತಾರೆ. ಹೀಗೆ ಕುಸ್ತಿ ಕಲಿಯುತ್ತಲೇ ತಮ್ಮ ಭವಿಷ್ಯವನ್ನೂ, ಭಾರತದ ಭವಿಷ್ಯವನ್ನೂ ಪ್ರಜ್ವಲಿಸುವಂತೆ ಮಾಡಲು ಮುಂದಾಗಿರೋ ಈ ಯುವ ಕುಸ್ತಿಪಟುಗಳಿಗೆ ನಮ್ಮ ಪರವಾಗಿಯೂ ಆಲ್ ದಿ ಬೆಸ್ಟ್.


    ಇದನ್ನೂ ಓದಿ: Uttara Kannada: ಆಕಳ ರಕ್ಷಣೆ ಹುಲಿಯ ಹೊಣೆ! ಕದಿಯೋಕೂ ಇದೆ ಅನುಮತಿ!


    ನೀವು ಕುಸ್ತಿ ಕಲಿಯಬೇಕೇ?
    ಹಳಿಯಾಳದ ಬಸ್ ಸ್ಟಾಂಡ್​ನಿಂದ ನೂರು ಮೀಟರ್ ಅಂತರದಲ್ಲಿ ಮೋತಿಕೇರಿ ಮೈದಾನದಲ್ಲಿ ಈ ಅಖಾಡವಿದೆ. ಕುಸ್ತಿ ಕೋಚ್ ಆಗಿರುವ ತುಕಾರಾಮ್ ಗೌಡ ಅವರನ್ನು ಸಂಪರ್ಕಿಸಿ ದಾಖಲಾತಿ ಮಾಹಿತಿ ಪಡೆಯಬಹುದು.


    ತುಕಾರಾಮ್ ಗೌಡ: 99454 89193
    ವಿಳಾಸ: ಮೋತಿಕೇರಿ ಮೈದಾನ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: