ಉತ್ತರ ಕನ್ನಡ: ಪುಟ್ಟದಾದ ಬ್ಯಾಟು, ಪುಟ್ಟದಾದ ಚೆಂಡು ಟೇಬಲ್ ಮಧ್ಯೆ ಹುಡುಗರ ಆಟದ ಸೊಬಗು. ಗುರುಗಳ ಆಜ್ಞೆ ಪಾಲಿಸುತ್ತಾ ಜಿದ್ದಿಗೆ ಬಿದ್ದವರಂತೆ ಆಟವಾಡೋ ಪುಟ್ಟ ಪುಟ್ಟ ಬಾಲಕರು. ಹೌದು, ಈ ಆಟವೇನೋ ಟೇಬಲ್ ಟೆನ್ನಿಸ್ ಅನ್ನೋದನ್ನ ಹೇಳಬೇಕಿಲ್ಲ. ಆದ್ರೆ ನಗರದ ಸಿರಿವಂತರ ಮಕ್ಕಳ ಆಟ ಅನ್ನೋ ಥಿಂಕಿಂಗ್ ಗೆ ಈ ತರಬೇತಿ ಕೇಂದ್ರ ಅಪವಾದವೆನ್ನುವಂತಿದೆ. ಹಳ್ಳಿ ಮಕ್ಕಳ ತಂಡವೇ ಇದೀಗ ದೇಶ ಮಟ್ಟದಲ್ಲಿ ಮಿಂಚಲು ಸಜ್ಜಾಗಿ ನಿಂತಿದೆ.
ರಾಜ್ಯ, ರಾಷ್ಟ್ರ ಮಟ್ಟದ ಸಾಧನೆ
ಯೆಸ್, ಟೇಬಲ್ ಟೆನ್ನಿಸ್ ಅಂದ್ರೆ ಅದು ಸಿಟಿ ಜನರ ಗೇಮ್ ಅನ್ನೋ ಥಿಂಕಿಂಗ್ ಕಾಮನ್. ಯಾಕಂದ್ರೆ ಒಳಾಂಗಣ ಕ್ರೀಡೆಗಳೆಲ್ಲವೂ ಬಹುತೇಕ ನಗರದಲ್ಲೇ ಆಡಲಾಗುತ್ತೆ. ಆದ್ರೆ ಉತ್ತರ ಕನ್ನಡದ ಹಳಿಯಾಳ ಅದಕ್ಕೆ ಅಪವಾದ ಎನ್ನುವಂತಿದೆ. ಇಲ್ಲಿನ ಗ್ರಾಮೀಣ ಪ್ರತಿಭೆಗಳು ಟೇಬಲ್ ಟೆನ್ನಿಸ್ ಕಲಿಯುತ್ತಿದ್ದು, ಹಲವು ಮಕ್ಕಳು ಟೇಬಲ್ ಟೆನ್ನಿಸ್ ನಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಸಾಧನೆ ಮೆರೆದಿದ್ದಾರೆ. ತಾವು ಯಾರಿಗೂ ಕಮ್ಮಿ ಇಲ್ಲ ಅನ್ನೋದನ್ನ ಹಳಿಯಾಳದ ಹಳ್ಳಿಯ ಮಕ್ಕಳು ಸಾಧಿಸಿ ತೋರಿದ್ದಾರೆ.
ಅತ್ಯುತ್ತಮ ತರಬೇತಿ
ಹಳಿಯಾಳದ ಒಳಾಂಗಣ ಕ್ರೀಡಾಂಗಣದಲ್ಲಿ ಉದಯ್ ಜಾಧವ್ ಅವರ ಸತತ ಶ್ರಮ, ಶ್ರದ್ಧೆಯಿಂದ ದಿನವೂ ಮೂವತ್ತಕ್ಕಿಂತ ಹೆಚ್ಚು ಹುಡುಗರು ಸಂಜೆ ಆರರಿಂದ ರಾತ್ರಿ ಒಂಬತ್ತರವರೆಗೆ ಇಲ್ಲಿ ಬಂದು ದಿನವೂ ಆಟ ಆಡುತ್ತಾ ಟೇಬಲ್ ಟೆನ್ನಿಸ್ನಲ್ಲಿ ಸಾಧನೆ ಮಾಡುವ ಕನಸು ಕಾಣುತ್ತಿದ್ದಾರೆ. ಹೀಗೆ ಆಟವಾಡಲು ಬರುವವರಲ್ಲಿ ಈಗಾಗಲೇ ಹಲವರು ಯಶಸ್ವಿ ಆಟಗಾರರಾಗಿದ್ದಾರೆ. ಉದಯ್ ಜಾಧವ್ ಅವರಲ್ಲಿ ತರಬೇತಿ ಪಡೆಯುತ್ತಿರುವ ಬಾಲಕರು ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಟೇಬಲ್ ಟೆನ್ನಿಸ್ ಹವಾ!
ಹಳಿಯಾಳದಂತಹ ಹಳ್ಳಿಗಳಿಂದಲೇ ತುಂಬಿದ ತಾಲೂಕು ಈಗ ಟೇಬಲ್ ಟೆನ್ನಿಸ್ ಹಬ್ ಆಗಿ ಹೊರಹೊಮ್ಮಿದೆ. ‘‘ದ ಅರ್ಬನ್ ಗ್ರೂಪ್ ಆಫ್ ಸ್ಪೋರ್ಟ್‘‘ ಎಂಬ ಸಂಸ್ಥೆಯು ಒಳಾಂಗಣ ಕ್ರೀಡಾಂಗಣ ನಿರ್ಮಿಸಿದ್ದು ಮಕ್ಕಳ ತರಬೇತಿಗೆ ಅವಕಾಶವಾಗಿದೆ. ಇಲ್ಲಿನ ಮಕ್ಕಳು ಬಹುತೇಕ ಹಳ್ಳಿಯಿಂದ ಬಂದವರು, ಹಾಸ್ಟೆಲ್ಗಳಲ್ಲಿ ಇರುವವರು. ಇಂತಹವರು ರಾಜ್ಯ ರಾಷ್ಟ್ರವನ್ನು ಪ್ರತಿನಿಧಿಸಲು ಟೇಬಲ್ ಟೆನ್ನಿಸ್ ಒಂದು ಮಾಧ್ಯಮವಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: Positive Story: 25 ಸಾವಿರಕ್ಕೂ ಹೆಚ್ಚು ಗ್ರಾಮೀಣ ಯುವಕರ ಭವಿಷ್ಯ ರೂಪಿಸಿದ ನಮ್ಮ ಕರ್ನಾಟಕದ ಸಂಸ್ಥೆಯಿದು!
ಬರೀ ಟೈಂಪಾಸ್ಗೆ ಆಡಿದರೆ ಆಟ, ಕಲಿಕೆಗೆ ಅನ್ವಯಿಸಿದರೆ ಬೇಕಾದಷ್ಟು ಎತ್ತರಕ್ಕೆ ನಮ್ಮನ್ನು ಕರದೊಯ್ಯಬಲ್ಲ ಟೇಬಲ್ ಟೆನ್ನಿಸ್ ಒಂದು ಪರ್ಫೆಕ್ಟ್ ಗೇಮ್ ಎಂದೇ ಹೇಳಬಹುದು. ಈ ಗೇಮ್ ಮೂಲಕ ಹಳಿಯಾಳದ ಹಳ್ಳಿಯ ಮಕ್ಕಳು ಮುಂದೆ ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಮಿಂಚಲಿ ಅನ್ನೋದೆ ನಮ್ಮ ಹಾರೈಕೆ ಕೂಡಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ