ಶಿರಸಿ: ಗಣಪತಿ ಅಂದ್ರೆ ನೆನಪಿಗೆ ಬರೋದೆ ಆನೆ ಸೊಂಡಿಲಿನ ಮೊಗ, ನಾಲ್ಕು ಕೈ, ಎರಡು ದೊಡ್ಡದಾದ ಕಿವಿ. ಆದರೆ ಇಲ್ನೋಡಿ, ಅದೆಲ್ಲಕ್ಕೂ ಭಿನ್ನವಾಗಿರೋ (Half Ganapati Temple) ಗಣಪನನ್ನು. ಇದ್ಯಾವುದೋ ವಿದೇಶಿ ದಾಳಿಕೋರರ ದಾಳಿಯಿಂದ ತುತ್ತಾದ ದೇವರ ಮೂರ್ತಿಯಲ್ಲ. ಬದಲಿಗೆ ಈ ಪುರಾತನ ಕಟ್ಟಡದಲ್ಲಿರೋ ಈ ಗಣಪತಿ ಇರೋದು ಹೀಗೆ. ಇಲ್ಲಿರೋ ವಿಘ್ನ ವಿನಾಯಕನ (Ganapati Temple) ವಿಶೇಷತೆಯೇ ಅಂತಹದ್ದು. ಹಾಗಿದ್ರೆ ಈ ಕ್ಷೇತ್ರ ಎಲ್ಲಿದೆ? ಏನಿದರ ವಿಶೇಷತೆ ಅನ್ನೋದನ್ನೆಲ್ಲವನ್ನ ಹೇಳ್ತೀವಿ ನೋಡಿ.
ಯೆಸ್, ಉತ್ತರ ಕನ್ನಡದ ಶಿರಸಿಯ ಬನವಾಸಿಯಲ್ಲಿ ಕಾಣಸಿಗುವ ಗಣಪತಿ ದೇಗುಲದಲ್ಲಿ ಹೀಗೆ ಅರ್ಧ ಭಾಗ ಹೊಂದಿರೋ ಪ್ರಥಮ ಪೂಜಿತನನ್ನ ಕಾಣಬಹುದು. ಇಲ್ಲಿನ ದೇವಾಲಯದ ಕಟ್ಟಡವೇ ಈ ದೇಗುಲದ ಇತಿಹಾಸವನ್ನ ಸಾರಿದ್ರೆ, ಅರ್ಧ ಕೆತ್ತಿದ ಮೂರ್ತಿ ಇಲ್ಲಿನ ವಿಶೇಷತೆ ತಿಳಿಸುತ್ತಾ ಹೋಗುತ್ತೆ.
ಈ ಗಣಪನಿಗೆ ಸೊಂಡಿಲು, ಮೊಗ, ಹೊಟ್ಟೆ ಭಾಗ ಎಲ್ಲವೂ ಅರ್ಧ
ಹೌದು, ಇಲ್ಲಿರೋ ಗಣಪತಿಗೆ ಸೊಂಡಿಲು, ಮುಖ, ಹೊಟ್ಟೆಭಾಗ ಎಲ್ಲವೂ ಅರ್ಧವಾದರೆ, ಒಂದು ಕಿವಿ, ಒಂದು ಕಾಲು ಹಾಗೂ ಎರಡು ಕೈಗಳಷ್ಟೇ ಇವೆ. ವಿಶೇಷ ಅಂದ್ರೆ ಈ ಅರ್ಧ ಶರೀರದ ಗಣಪತಿಯು ಬ್ರಹ್ಮಚರ್ಯದ ಪ್ರತೀಕ ಎಂದು ನಂಬಲಾಗಿದೆ.
ದಕ್ಷಿಣ ಭಾರತದಲ್ಲೇ ಅಪರೂಪ!
ಅಷ್ಟೇ ಅಲ್ದೇ, ಗಣಪತಿಯ ಇನ್ನರ್ಧ ಭಾಗ ವಾರಣಸಿಯ ಕಾಲಭೈರವನ ಸನ್ನಿಧಾನದಲ್ಲಿದೆಯಂತೆ. ಇಂತಹ ವಿಗ್ರಹ ಕರ್ನಾಟಕದ ಅಷ್ಟೇ ಅಲ್ದೇ ದಕ್ಷಿಣ ಭಾರತದಲ್ಲೇ ಅಪರೂಪ ಎನ್ನಲಾಗಿದೆ.
ಇದನ್ನೂ ಓದಿ: Uttara Kannada: ಹವ್ಯಾಸದಿಂದಲೇ ಹಣ-ಹೆಸರು ಎರಡನ್ನೂ ಗಳಿಸಿದ ಗ್ರಾಮೀಣ ಮಹಿಳೆ!
ಯಾವಾಗ ಬೇಕಿದ್ರೂ ದರ್ಶನ ಭಾಗ್ಯ!
ಅರ್ಧ ಗಣೇಶನಾಗಿದ್ದರೂ ಈತ ಪವರ್ ಫುಲ್ ಗಣಪನೂ ಹೌದು. ಇಲ್ಲಿಯ ಶ್ರೀ ಗಣೇಶನ ಇಲ್ಲಿ ಗಣಹೋಮದಂತಹ ಹೋಮ-ಹವನಗಳಿಂದ ಹಿಡಿದು ಕುಂಕುಮಾರ್ಚನೆವರೆಗೆ ಮಾಡಲಾಗುವ ಸರ್ವಸೇವೆಗಳನ್ನು ಸ್ವೀಕರಿಸುತ್ತಾನೆ. ಆದ್ರಿಲ್ಲಿ, ಇವನಿಗೆ ಏಕಕಾಲದ ಪೂಜೆ ಮಾತ್ರ ಜರುಗುತ್ತವೆ. ಬೆಳಿಗ್ಗೆ ಮಡಿಯಲ್ಲಿ ಪ್ರಥಮ ವಂದಿತನಿಗೆ ಪೂಜೆ ಮಾಡಿ ಬಾಗಿಲು ಹಾಕಿದರೆ, ಮತ್ತೆ ತೆರೆಯುವುದು ಮಾರನೇ ದಿವಸ ಬೆಳಿಗ್ಗೆಯೇ. ಆದರೆ ಇಲ್ಲಿ ಗರ್ಭಗುಡಿಗೆ ಬಾಗಿಲಿಲ್ಲವಾದ್ದರಿಂದ ದರ್ಶನ ಯಾವಾಗ ಬೇಕಿದ್ದರೆ ಸಾಧ್ಯವಾಗುತ್ತೆ.
ಇದನ್ನೂ ಓದಿ: Uttara Kannada: ಜೇನು ಮೇಣದಿಂದ ಪೇಪರ್ ತಯಾರಿ! ಯಲ್ಲಾಪುರದ ಕೃಷಿಕರ ವಿಶಿಷ್ಟ ಬ್ಯುಸಿನೆಸ್
ಈ ದೇಗುಲಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಒಟ್ಟಿನಲ್ಲಿ ಈಶ್ವರ ಅರ್ಧನಾರೀಶ್ವರ ಅನ್ನೋ ಹೆಸರು ಪಡೆದಿದ್ದರೆ, ಬನವಾಸಿಯ ಈ ಗಣಪ ಅರ್ಧ ಶರೀರದ ಗಣಪತಿ ಅನ್ನೋ ಹೆಸರಿಗೆ ಪಾತ್ರರಾಗುವ ಮೂಲಕ ಅರಸಿ ಬಂದ ಭಕ್ತರ ಹರಸುತ್ತಿದ್ದಾನೆ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ