Jackfruit Recipe: ಶಿರಸಿ ಸ್ಪೆಷಲ್ ಹಲಸಿನ ಕಾಯಿಯ ಚಕ್ಕೆ ಪೊಳ್ಜ ಮಾಡೋದು ಹೇಗೆ? ರೆಸಿಪಿ ಇಲ್ಲಿದೆ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಹಲಸಿನ ಸೊಳೆ ಹಾಗೂ ಬೀಜಗಳ ಚಕ್ಕೆ ಪೊಳ್ಜ ಈ ಸೀಸನ್​ಗಂತೂ ಭಾರೀ ಉತ್ತಮ ಅನ್ನೋದು ಹಿರಿಯರ ಮಾತು.

  • News18 Kannada
  • 2-MIN READ
  • Last Updated :
  • Sirsi, India
  • Share this:

ಉತ್ತರ ಕನ್ನಡ: ಹಳದಿ ಹಲಸು ಕಾಣ್ತಿದ್ರೆ ಯಾರ್‌ ಬಾಯಲ್ಲಾದ್ರೂ ನೀರೂರೋದು ಗ್ಯಾರಂಟಿ. ಅದ್ರಲ್ಲೂ ಹಲಸಿನ ಹಣ್ಣಿನ ವೆರೈಟಿ ತಿಂಡಿಗಳು ಇನ್ನಷ್ಟು ಸೂಪರ್.‌ ಅದ್ರಲ್ಲೂ ಉತ್ತರ ಕನ್ನಡದ ಹವ್ಯಕರ (Uttara Kannada Havyaka) ಮನೆಯಲ್ಲಿ ತಯಾರಾಗೋ ಈ ಹಲಸಿನ ಸೊಳೆಗಳ ಪೊಳ್ಜವಂತೂ (Jackfruit) ಸಖತ್‌ ಟೇಸ್ಟಿ ಚಕ್ಕೆ ಪೊಳ್ಜ!


“ಚಕ್ಕೆ ಪೊಳ್ಜ” ಮಾಡೋದು ಹೀಗೆ!
ಹಾಗಿದ್ರೆ ಹಲಸಿನ ಸೊಳೆಗಳ ಈ ಪೊಳ್ಜ ಮಾಡೋದು ಹೇಗೆ ಅನ್ನೋದನ್ನ ಹೇಳಿಕೊಡ್ತಾರೆ ನೋಡಿ. ಚಕ್ಕೆ ಪೊಳ್ಜ ಅಂತಲೂ ಕರೆಯೋ ಈ ಪದಾರ್ಥಕ್ಕೆ ಮೊದಲು ತಮಗೆ ಬೇಕಾದಷ್ಟು ಹಲಸಿನ ಹಣ್ಣಿನ ತೊಳೆ ಹಾಗೂ ಬೀಜಗಳನ್ನು ತೊಳೆದುಕೊಂಡು ಅದಕ್ಕೆ ನೀರು ಹಾಗೂ ಕಂಚಿಕಾಯಿ ಅಥವಾ ಲಿಂಬು, ಕೋಕಂ, ಹುಣಸೆಯ ಹುಳಿ ಹೀಗೆ ಯಾವುದಾದರೂ ಒಂದನ್ನ ಬೆರೆಸಬೇಕು.




ಇದನ್ನೂ ಓದಿ: Laphing Food Recipe: ಲ್ಯಾಪಿಂಗ್‌ ಎಂಬ ರುಚಿಕರ ತಿಂಡಿ, ಮನೆಯಲ್ಲೇ ಮಾಡಲು ಇಲ್ಲಿದೆ ರೆಸಿಪಿ


ನಂತರ ಸ್ವಲ್ಪ ಉಪ್ಪು ಹಾಕಿ ಐದಾರು ಸೂಜಿ ಮೆಣಸು, ಕರಿಬೇವಿನ ಸೊಪ್ಪನ್ನು ಸೇರಿಸಿ ಐದರಿಂದ ಹತ್ತು ನಿಮಿಷ ಬೇಯಿಸಲು ಇಡಬೇಕು. ಕುಕ್ಕರ್​ನಲ್ಲಿಟ್ಟ ನಂತರ ಎರಡು ವಿಸಲ್ ಆದ್ಮೇಲೆ ಈ ಪೊಳ್ಜ ರೆಡಿಯಾಗುತ್ತೆ.




ಒಗ್ಗರಣೆ ಹಾಕಿ
ಹಾಗಂತ ಹಾಗೆಯೇ ಸವಿಯೋದಕ್ಕೆ ಹೋಗ್ದೇ, ಎಣ್ಣೆ, ಸಾಸಿವೆ ಸೇರಿಸಿ ಒಗ್ಗರಣೆ ಕೊಟ್ಟರೆ ಈ ಚಕ್ಕೆ ಪೊಳ್ಜದ ಟೇಸ್ಟಿ ಡಬಲ್‌ ಆಗುತ್ತೆ. ಹೆಚ್ಚು ನಾರಿನಾಂಶ, ಮಸಾಲೆ, ಹುಳಿ ಇರೋದಿಂದ್ರ ನಾಲಗೆಯ ರುಚಿ ಹೆಚ್ಚಿಸುತ್ತೆ




ಇದನ್ನೂ ಓದಿ: Business Idea: ಬೇಸಿಗೆ ರಜೆ ಬ್ಯುಸಿನೆಸ್! ಮಾವಿನ ಹಣ್ಣು ಮಾರಿ ದಿನಕ್ಕೆ 5 ಸಾವಿರ ದುಡಿಯುವ ಮಕ್ಕಳು

top videos


    ಈ ಚಕ್ಕೆ ಪೊಳ್ಜವನ್ನ ಅನ್ನ ಸೇರಿದಂತೆ ಯಾವುದೇ ಆಹಾರದ ಜೊತೆಗೂ ಸವಿಯಬಹುದು. ಒಟ್ಟಿನಲ್ಲಿ ಹಲಸಿನ ಸೊಳೆ ಹಾಗೂ ಬೀಜಗಳ ಚಕ್ಕೆ ಪೊಳ್ಜ ಈ ಸೀಸನ್​ಗಂತೂ ಭಾರೀ ಉತ್ತಮ ಅನ್ನೋದು ಹಿರಿಯರ ಮಾತು.

    First published: