ಕಾರವಾರ: ಕೈಯಲ್ಲಿ ಮಡಿಕೆ ಹಿಡಿದಿರೋ ವ್ಯಕ್ತಿ, ಈ ಮಡಿಕೆ ಒಳಗಡೆ ಏನಿರಬಹುದು ಅನ್ನೋ ಕುತೂಹಲ! ಇದು ಅಂತಿಂಥಾ ಮಡಿಕೆ ಅಲ್ಲ, ಹೀಗೆ ಭದ್ರವಾಗಿ ಮುಚ್ಚಿರೋ ಮಡಿಕೆಯಿಂದ ಹೊರಡುವ ಅದ್ಭುತ ಸ್ವರ ಕೇಳಿದ್ರೆ ನೀವು ಮೂಗಿನ ಮೇಲೆ ಬೆರಳಿಡ್ತೀರಾ! ಯೆಸ್, ಈ ಮಡಿಕೆಯನ್ನ ಹಿಂಗೆ ಭದ್ರವಾಗಿರಿಸಿ ಮೊಳಗಿಸೋ ಸಂಗೀತ ಆಲಾಪನೆ ಒಂದ್ಸಲ ಕೇಳಿಸಿಕೊಳ್ಳಿ. ಯಾವ ಬೀಟ್ಗೂ ಕಮ್ಮಿಯಿಲ್ಲದ ಗಮ್ಮತ್ತು ನೀಡೋ ಸ್ವರವಿದು. ಇದರ ಹೆಸರು ಗುಮಟೆ ಪಾಂಗ್ (Gumate Pang) ಅಂತ.
ಉತ್ತರ ಕನ್ನಡದ ಕರಾವಳಿ ಭಾಗದ ಹಲವು ಮನೆಗಳಲ್ಲಿ ಗುಮಟೆ ಪಾಂಗ್ ಪರಿಣಿತರು ಕಾಣಸಿಗ್ತಾರೆ. ಕರಾವಳಿಯ ಲೋಕಲ್ ಬ್ಯಾಂಡ್ ಸೆಟ್ ಆಗಿರುವ ಇದು, ಗಣಪತಿ ದೇವರ ಇಷ್ಟದ ವಾದ್ಯವೂ ಹೌದಂತೆ. ಮಡಿಕೆಯ ಎರಡೂ ಬದಿ ಹೋಲ್ ಮಾಡಬೇಕು. ಒಂದು ಬದಿ ಉಡದ ಚರ್ಮ ಕಟ್ಟಿ ಇನ್ನೊಂದು ಬದಿ ಬರೀ ಕೈಯ ಚಲನೆಯಿಂದ ನುಡಿಸೋ ವಿಶಿಷ್ಟ ವಾದ್ಯವೇ ಈ ಗುಮಟೆ ಪಾಂಗ್.
ಇದನ್ನೂ ಓದಿ: Rudra Veena: ಭಾರತದ 8 ರುದ್ರವೀಣೆಯ ವಾದಕರಲ್ಲಿ ಉತ್ತರ ಕನ್ನಡದ ಇವರೂ ಒಬ್ಬರು!
ಕಲಿಯೋದು ಅಷ್ಟು ಕಷ್ಟ ಅಲ್ಲ!
ವಾಜಂತ್ರಿ ಎಂದು ಕರೆಯಲ್ಪಡುವ ಜನಾಂಗವು ತಲೆತಲಾಂತರದಿಂದ ಈ ವಾದ್ಯವನ್ನು ತಯಾರಿಸುತ್ತೆ. ಗುಮಟೆ ಪಾಂಗ್ ಕಲಿಯೋಕೆ ಅತಿಯಾಗಿ ಶ್ರಮಪಡಬೇಕಿಲ್ಲ. ಅತಿಯಾಗಿ ಕೈನೋವು ತರುವ ವಾದ್ಯವೂ ಇದಲ್ಲ.
ಇದನ್ನೂ ಓದಿ: Success Story: ಮಹಿಳೆಯೇ ಇಲ್ಲಿ ಮೇಸ್ತ್ರಿ, ಪುರುಷರನ್ನು ಮೀರಿಸಿದ ಧೀರೆ!
ಇಳಯರಾಜರಿಂದಲೂ ಬಳಕೆ!
ಇಳಯರಾಜ ಅವ್ರೂ ಈ ವಾದ್ಯವನ್ನು ತಮ್ಮ ಹಾಡೊಂದ್ರಲ್ಲಿ ಉಪಯೋಗಿಸಿದ್ರು. ಒಟ್ಟಾರೆ ಹೊಸ ಅನುಭವ ನೀಡೋ ವಿಶಿಷ್ಟ ಗುಮಟೆ ಪಾಂಗ್ ಎಂಬ ವಾದ್ಯದ ನಾದವನ್ನ ನೀವೂ ತಪ್ಪದೇ ಕೇಳಿ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ