ಶ್ರೀರಾಮ, ಪರಶುರಾಮ, ಬುದ್ದ, ಉಗ್ರ ನರಸಿಂಹ, ಲಕ್ಷ್ಮೀ, ಸರಸ್ವತಿ, ಆಂಜನೇಯ ಹೀಗೆ ಹಲವು ದೇವರುಗಳು. ಅದಕ್ಕೆ ತಕ್ಕಂತೆ ಸುಂದರವಾದ ಮರದ ಕೆತ್ತನೆಗಳು.ಇಲ್ಲಿರೋ ಈ ಬಗೆಯ ಕೆತ್ತನೆಗೆ ವಿದೇಶಗಳಲ್ಲೂ (Foreign) ಇದೆ ಸಖತ್ ಡಿಮ್ಯಾಂಡ್. ಇದು ಯಾವುದೋ ರೆಡಿಮೇಡ್ ಮಾರಾಟ ಮಳಿಗೆಯಲ್ಲ. ಬದಲಾಗಿ ಕರುನಾಡಲ್ಲೇ ತಯಾರಾಗಿ ಜಗತ್ತಿನಾದ್ಯಂತ ರಫ್ತಾಗುವ ಪಕ್ಕ ಮರದ ಕೆತ್ತನೆಯ ಆಗರವಿದು. ಉತ್ತರಕನ್ನಡ ಜಿಲ್ಲೆಯಲ್ಲಿ (Uttara Kannada Artist) ಗುಡಿಗಾರ್ ಮನೆತನ (Gudgar Family) ಅಂದ್ರೆ ಸಾಕು, ಎಲ್ರೂ ತೋರಿಸೋದು ಇದೇ ಕುಟುಂಬವನ್ನು.
ಹೌದು, ಯಲ್ಲಾಪುರದಲ್ಲಿ ತಲೆತಲಾಂತರದಿಂದ ವಿಗ್ರಹ, ರಥ ಸೇರಿದಂತೆ ಕೆತ್ತನೆ ಕಾರ್ಯ ನಡೆಸಿಕೊಂಡು ಬರ್ತಿದೆ ಈ ಗುಡಿಗಾರ್ ಕುಟುಂಬ. ಸದ್ಯ ಆದಿತ್ಯ ಗುಡಿಗಾರ್ ಮತ್ತವರ ತಂಡ ಈ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಿದ್ದಾರೆ.
ಅಮೆರಿಕಕ್ಕೂ ರಫ್ತು!
ದೇವರ ವಿಗ್ರಹಗಳ ಕೆತ್ತನೆಗಂತೂ ಇವರ ಶ್ರೀದೇವಿ ಕ್ರಾಫ್ಟ್ಸ್ ತುಂಬಾನೇ ಪ್ರಸಿದ್ಧಿ. ಇಲ್ಲಿ ತಯಾರಾದ ವಿಗ್ರಹಗಳು ಭಾರತ ಮಾತ್ರವಲ್ಲ ಅಮೇರಿಕಾಕ್ಕೂ ರಫ್ತಾಗಿವೆ. ಇಸ್ಕಾನ್ ಟೆಂಪಲ್ ಗಳಿಂತೂ ಯಲ್ಲಾಪುರದ ಈ ಮರದ ಕೆತ್ತನೆಯ ಶ್ರೀಕೃಷ್ಣನೇ ಹೆಚ್ಚು ಅಚ್ಚುಮೆಚ್ಚು.
ಇದನ್ನೂ ಓದಿ: Inspiration: ಇಡೀ ಊರಿಗೇ ಅಗರಬತ್ತಿ ಪರಿಮಳ ಹರಡುವ ಸಾಧಕ! ಇವರದ್ದು ಸ್ಫೂರ್ತಿ ನೀಡುವ ಜೀವನ
ಹಿರಿಯರಿಂದ ಪ್ರೇರಣೆ
ಇಲ್ಲಿ ಮರದಲ್ಲಿ ರೂಪು ಪಡೆದ ವಿಗ್ರಹಗಳು ಅಮೆರಿಕಾದ ನ್ಯೂಜೆರ್ಸಿಯಲ್ಲಿರುವ ರಾಮಮಂದಿರ ಹಾಗೂ ಸ್ವಾಮಿ ನಾರಾಯಣ ಮಂದಿರ, ಪುಣೆಯ ಇಸ್ಕಾನ್ ಟೆಂಪಲ್ ಮತ್ತು ಅಮೆರಿಕಾದ ಇಸ್ಕಾನ್ ಟೆಂಪಲ್ಗೂ ರಫ್ತಾಗಿವೆ. ಕುಟುಂಬದ ಹಿರಿಯರಾದ ಬಿಕ್ಕು ಗುಡಿಗಾರ್ ಅವರಿಂದ ಹಿಡಿದು ಈಗಿನ ಯುವಕರೂ ಕೆತ್ತನೆ, ಪೇಂಟಿಂಗ್ ಮಾರ್ಕೇಟಿಂಗ್ ಎಲ್ಲವನ್ನೂ ಮಾಡ್ತಿದ್ದಾರೆ.
ಇದನ್ನೂ ಓದಿ: Best Trekking Plan: ಕಾಡಿನ ನಡುವೆ ಮಿಲಿಟರಿ ಕ್ಯಾಂಪ್, ಇವರೇ ನೋಡಿ ಒನ್ ಮ್ಯಾನ್ ಆರ್ಮಿ!
ಹೀಗೆ ಬಳುವಳಿಯಾಗಿ ಬಂದ ವೃತ್ತಿಯನ್ನ ಕೈ ಬಿಡದೇ, ಇನ್ನಷ್ಟು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿರುವ ಗುಡಿಗಾರ್ ಕುಟುಂಬ ಅದೆಷ್ಟೋ ದೇವರ ವಿಗ್ರಹಗಳಿಗೆ ಜೀವ ತುಂಬಿದೆ.
ಇವರ ದೂರವಾಣಿ ಸಂಖ್ಯೆ:+91 87625 20972
ವರದಿ: ಎ.ಬಿ. ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ