ಕಾರವಾರ: ವರ್ಷದ ಈ ದೇಹವನ್ನು ಹೀಗೆ ಹುರಿಗಟ್ಟಿಸಿದ್ದು ಅಂತಿಂಥ ಸಾಧನೆಯಲ್ಲ, ಕಿರಾಣಿ ಅಂಗಡಿ ಮಾಲೀಕ (Grocery Shop Owner) ವೇಟ್ ಲಿಫ್ಟಿಂಗ್ನಲ್ಲಿ ಬಂಗಾರದ ಪದಕಕ್ಕೆ (Gold In Weight Lifting) ಮುತ್ತಿಟ್ಟ ರೋಚಕ ಸ್ಟೋರಿ ಇದು! ಇವರು ವಿಕ್ರಂ ಪ್ರಭು ಅಂತ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ (Kumta) ಕಿರಾಣಿ ಅಂಗಡಿಯ ಮಾಲೀಕರು. 40 ವರ್ಷದ ಈ ಹರೆಯದಲ್ಲಿ 93 ಕೆಜಿ ತೂಕದ ಬೆಂಚ್ ಪ್ರೆಸ್ ಎಮ್ 1 ವಿಭಾಗದ ಸ್ಪರ್ಧೆಯಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ!
ಪುರಸಭೆಯ ವ್ಯಾಯಾಮ ಶಾಲೆಯಲ್ಲಿ ದಿನವೂ ಕಸರತ್ತು ಮಾಡುತ್ತಿದ್ದ ಪ್ರಭು ಅವ್ರಿಗೆ ಯಾವ ಟ್ರೇನರೂ ಇರ್ಲಿಲ್ವಂತೆ. ಮನೆಯಲ್ಲಿ ಜಿಮ್ ಉಪಕರಣಗಳೂ ಇರ್ಲಿಲ್ವಂತೆ.
ಇದನ್ನೂ ಓದಿ: Uttara Kannada: ಲೋಟ, ತಟ್ಟೆಗಳಲ್ಲೇ ಸಂಗೀತ ನುಡಿಸುವ ಬಾಲಕ!
ಸುಮ್ನೆ ಟ್ರಯಲ್ಗೆ ಹೋದವ್ರಿಗೆ ಬಂಗಾರವೇ ಸಿಕ್ತು!
ಸುಮ್ನೆ ಒಂದು ಟ್ರಯಲ್ ಕೊಡೋಣ ಅಂತ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಒಂದಕ್ಕೆ ಹೋದ್ರೆ ಆರು ಬಂಗಾರದ ಪದಕ ಗೆದ್ಬಿಟ್ರಂತೆ. ಮುಂದೆ ಇದೇ ಇನ್ನೂ ಹೆಚ್ಚಿನ ಸಾಧನೆ ಮಾಡೋಕೆ ಸ್ಪೂರ್ತಿಯಾಯ್ತು ಅಂತಾರೆ ಪ್ರಭು.
ಇದನ್ನೂ ಓದಿ: Belambar Treatment: ಉತ್ತರ ಕನ್ನಡದ ಈ ನಾಟಿವೈದ್ಯರ ಬಳಿ ರಾಜ್ಕುಮಾರ್, ಬಿಗ್ ಬಿ ಸಹ ಚಿಕಿತ್ಸೆ ಪಡೆದಿದ್ರು!
ಜಿಮ್ಗೆ ಸಾವಿರಾರು ರೂಪಾಯಿ ಖರ್ಚು ಮಾಡೋರಿಗೆ ಮಾದರಿ
ಪ್ರಭು ಅವ್ರು ಈವರೆಗೆ ಒಟ್ಟು ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕಗಳನ್ನ ಮುಡಿಗೇರಿಸಿಕೊಂಡಿದ್ದಾರೆ. ಒಟ್ಟಾರೆ ಜಿಮ್ಗೆ ಅಂತ ಸಾವಿರಾರು ರೂಪಾಯಿ ಖರ್ಚು ಮಾಡೋರ ಮುಂದೆ ನಮ್ಮ ಉತ್ತರ ಕನ್ನಡದ ಪ್ರಭು ಅವ್ರು ಕಡಿಮೆ ಖರ್ಚಲ್ಲಿ ಹೆಚ್ಚು ಸಾಧನೆ ಮಾಡಿ ಮಾದರಿಯಾಗಿದ್ದಾರೆ.
ವಿಕ್ರಂ ಪ್ರಭು ಅವರಿಗೆ ನೀವೂ ಅಭಿನಂದಿಸಲು ಮಾಡಲು ಈ ನಂಬರ್ಗೆ ಕರೆ ಮಾಡಬಹುದು: 94827 86333
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ