ಉತ್ತರ ಕನ್ನಡ: ಆಧುನಿಕ ಮೆಷಿನ್ ಯುಗದಲ್ಲೂ ಸಖತ್ ಆಗಿರೋ ಒಳಕಲ್ಲು, ರುಬ್ಬೋಗುಂಡು, ಕುಟ್ಟಣಿ. ಅದೆಷ್ಟೇ ಎಲೆಕ್ರ್ಟಿಕ್ ಗ್ರೈಂಡರ್ಗಳು (Electric Grinder) ಬಂದ್ರೂ ಕುಶಲಕರ್ಮಿಗಳ ಕೆತ್ತಿರುವ ಈ ಕಲ್ಲುಗಳ (Grinding Stone) ಡಿಮ್ಯಾಂಡ್ ಕಡಿಮೆಯಾಗಿಲ್ಲ. ಒಂದೊಂದು ಕಲ್ಲುಗಳು ಕೂಡಾ ಒಂದೊಂದೊ ಶೇಪ್ ಪಡೆದಿದ್ದು, ಪಕ್ಕಾ ನಾಟಿ ಅಡುಗೆ ಸವಿಯೋರಿಗಂತೂ ಈ ಮ್ಯಾನುವಲ್ ಗ್ರೈಂಡರ್ ಗಳೇ ಬಲು ಪ್ರೀತಿ.
ಯೆಸ್, ಉತ್ತರ ಕನ್ನಡದ ಸಿದ್ದಾಪುರದಲ್ಲಿ ಇಂದಿಗೂ ಮಾರ್ಕೆಟ್ನಲ್ಲಿ ರಾಜನ ಸ್ಥಾನಮಾನವನ್ನೇ ಪಡೆದಿದೆ. ಅದೆಷ್ಟೇ ಎಲೆಕ್ರ್ಟಿಕ್ ಗ್ರೈಂಡರ್, ಮೆಷಿನ್ಗಳು ಬಂದ್ರೂ, ಕರಕುಶಲ ಕರ್ಮಿಗಳು ಕೆತ್ತಿದ ಕಲ್ಲಿನ ಈ ಗ್ರೈಂಡರ್ಗಳಿಗೆ ಅತ್ಯುತ್ತಮ ಮಾರ್ಕೆಟ್ ಇದೆ. ಇಲ್ಲಿನ ನಿವಾಸಿ ಹನುಮಂತ ಭೋವಿವಡ್ಡರ್ ಹಾಗೂ ಅವರ ಹೆಂಡ್ತಿ ಈ ಕಲ್ಲಿನ ಕೆತ್ತನೆಯ ನಿರ್ಮಾತೃ.
ಸಿಗುತ್ತೆ ಸಖತ್ ಗಳಿಕೆ
ಬೆಳಗಾವಿಯಿಂದ ಕಲ್ಲು ತರಿಸಿಕೊಳ್ಳೋ ಇವರು ಅದಕ್ಕೆ ತಮ್ಮ ಪಳಗಿದ ಕೈಗಳಿಂದ ಬೇಕಾದ ರೂಪ ನೀಡ್ತಾರೆ. ಬಳಿಕ ಮಾರುಕಟ್ಟೆಯಲ್ಲಿ ಮಾರಾಟಕ್ಕಿಡುವ ಈ ದಂಪತಿ, ಪ್ರತೀ ಕಲ್ಲಿಗೆ ಕಡಿಮೆ ಅಂದ್ರೂ ಸಾವಿರ ರೂಪಾಯಿ ಪಡೆಯುತ್ತಾರೆ.
ಭಾರೀ ಡಿಮ್ಯಾಂಡ್
ಹೀಗೆ ತಯಾರಾದ ಕಲ್ಲುಗಳಿಗೆ ಉಡುಪಿ, ಮಂಗಳೂರು, ಮುಂಬೈಯಿಂದಲೂ ಬೇಡಿಕೆಯಿದೆ. 75ರ ಹರೆಯವಾದರೂ ಹನುಮಂತಪ್ಪ ಅವರ ಕುಟುಂಬ ನಿರ್ವಹಣೆಗೆ ಈ ಕಲ್ಲುಗಳೇ ಆಸರೆಯಾಗಿದೆ.
ಇದನ್ನೂ ಓದಿ: Uttara Kannada: ಬಡವರಿಗೆ ಬಂಗಾರ ನೀಡುವ ಗ್ರಾಮ ದೇವತೆ ಈಕೆ! ವರ್ಷಕ್ಕೆ 3 ತಿಂಗಳಷ್ಟೇ ದರ್ಶನ ಭಾಗ್ಯ!
ಈ ಕಲ್ಲಿನ ಮಸಾಲೆ ಟೇಸ್ಟ್ ಗೊತ್ತಿದ್ದವರು ಈ ನ್ಯಾಚುರಲ್ ಗ್ರೈಂಡರ್ಗಳತ್ತ ಹೆಚ್ಚು ಆಕರ್ಷಿತರಾಗ್ತಾರೆ. ಹಾಗಾಗಿ ಇಂದಿಗೂ ರುಬ್ಬೋ ಗುಂಡು ಕಲ್ಲು, ಕುಟ್ಟಣಿಗಳಿಗೆ ಇಂದಿಗೂ ಸಖತ್ ಡಿಮ್ಯಾಂಡ್ ಇದೆ.
ಇದನ್ನೂ ಓದಿ: Khapri Temple: ಮದ್ಯದ ಅಭಿಷೇಕ, ಬೀಡಿ ಸಿಗರೇಟಿನ ಆರತಿ; ಕಾರವಾರದಲ್ಲಿ ಆಫ್ರಿಕಾ ಮೂಲದ ದೇವರ ಜಾತ್ರೆ!
ಒಟ್ಟಿನಲ್ಲಿ ಎಲೆಕ್ರ್ಟಿಕ್ ಮೆಷಿನ್ ಗಳ ಕಾರುಬಾರು ನಡುವೆ ಈ ಸಾಂಪ್ರದಾಯಿಕ ಕಲ್ಲುಗಳು ಇಂದಿಗೂ ತನ್ನ ವರ್ಚಸ್ಸು ಉಳಿಸಿಕೊಂಡಿರುವುದು ವಿಶೇಷವೇ ಸರಿ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ