Uttara Kannada: ಮುಂಡಗೋಡಿನ ಈ ಸರ್ಕಾರಿ ಹೈಸ್ಕೂಲ್ ಕಲಿಯೋಕೂ ಚಂದ, ನೋಡೋಕೋ ಚಂದ!

ಕಲ್ಲು, ಮಣ್ಣಿನಿಂದ ತುಂಬಿದ್ದ ಸರಕಾರಿ ಶಾಲೆಯ ಪರಿಸರ ಇದೀಗ ಹಚ್ಚ ಹಸಿರಿನ ತಾಣವಾಗಿ ಬದಲಾಗಿದೆ. ಶಿಕ್ಷಕರ, ವಿದ್ಯಾರ್ಥಿಗಳ ಪರಿಶ್ರಮ ಬೋರಲು ಗುಡ್ಡದಂತಿದ್ದ ಪರಿಸರವನ್ನೇ ಹಚ್ಚ ಹಸಿರಾಗಿಸಿದೆ.

ಮಾದರಿ ಶಾಲೆ ಹುನಗುಂದ

"ಮಾದರಿ ಶಾಲೆ ಹುನಗುಂದ"

  • Share this:
    ಶಾಲೆ ಅಂದ್ರೆ ಕೇವಲ ನಾಲ್ಕು ಗೋಡೆಗಳ ನಡುವಿನ ಶಿಕ್ಷಣವಲ್ಲ.. ಬದಲಿಗೆ ಬದುಕು ರೂಪಿಸುವುದು, ಪರಿಸರದ ಜೊತೆ ಒಡನಾಟ ಮೂಡಿಸುವುದೂ ಆಗಿದೆ. ಹೌದು, ಅಂತಹ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯ (Uttara Kannada) ಈ ಶಾಲೆಯೂ ಸೇರುತ್ತದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮವನ್ನೂ ಬೆಳೆಸುತ್ತಿದೆ..ಮುಂಡಗೋಡ ತಾಲೂಕಿನ (Mundgod Hungund) ಹುನಗುಂದ ಗ್ರಾಮದಲ್ಲಿರುವ ಈ ಸರಕಾರಿ ಪ್ರೌಢಶಾಲೆ ಹಚ್ಚ ಹಸಿರಿನ ನಡುವೆ ಕಂಗೊಳಿಸುತ್ತಿದೆ. ಆದರೆ ಶಾಲೆಯ (Government School Hungund) ಆರಂಭದಲ್ಲಿ ಪರಿಸ್ಥಿತಿ ಹೀಗಿರಲಿಲ್ಲ‌. ಸುತ್ತಲೂ ಬೋರಲುಗುಡ್ಡದಂತಿತ್ತು.‌ ಹಾಗಾದರೆ ಹೀಗೆ ಹಸಿರು ಹಸಿರಾಗಿ ಬದಲಾಗಿದ್ದು ಹೇಗೆ? ಇಷ್ಟೊಂದು ಚಂದ ಚಂದ ಅನಿಸುವಂತಾಗಿದ್ದು ಯಾರ ಪ್ರಯತ್ನದಿಂದ ಎಲ್ಲ ವಿವರ ಇಲ್ಲಿದೆ ನೋಡಿ.

    ಹಚ್ಚ ಹಸಿರಿನ ಶಾಲೆ
    ಕಲ್ಲು, ಮಣ್ಣು ತುಂಬಿದ್ದ ಇಲ್ಲಿಯೇ ಈ ಹೈಸ್ಕೂಲ್ ತೆರೆಯಲಾಗಿತ್ತು. ಆದರೆ ಇಲ್ಲಿನ ಶಿಕ್ಷಕರು ಹಾಗೂ ಮಕ್ಕಳು ಕೂಡಿಕೊಂಡು ಎರಡು ಮೂರು ಎಕ್ರೆಗಿಂತ ಹೆಚ್ಚಿನ ಜಾಗದಲ್ಲಿ ಕ್ರಮೇಣವಾಗಿ ಗಿಡ ಬೆಳ್ಸೋಕೆ ಶುರು ಮಾಡಿದ್ರು‌. ಒಬ್ಬೊಬ್ಬ ವಿದ್ಯಾರ್ಥಿಗೆ ಒಂದೊಂದು ಗಿಡ ಅನ್ನೋ ಹಾಗೆ ನೀಡಿದರು. ಅದರ ಫಲಿತಾಂಶ ಈಗ ನಾವು ನೋಡಿತ್ತಿರೋ ಈ ಹಚ್ಚ ಹಸಿರ ಶಾಲೆ.

    ಇಂಗು ಗುಂಡಿಗೆ ಆದ್ಯತೆ
    ಇದಷ್ಟೇ ಅಲ್ಲ, ಮಳೆನೀರನ್ನ ಸರಿಯಾಗಿ ಉಪಯೋಗಿಸಿಕೊಂಡು ಇಲ್ಲಿನ ಶಿಕ್ಷಕರು ಇಂಗುಗುಂಡಿ ಮಾಡಿ ನೀರನ್ನು ಉಳಿಸಿ ಮಾದರಿ ಕೆಲಸ ಮಾಡ್ತಿದಾರೆ. ಈಗಾಗಲೇ ಇಲ್ಲಿ ಹನ್ನೊಂದಕ್ಕೂ ಹೆಚ್ಚು ಹೆಬ್ಬೇವು, ಹತ್ತಕ್ಕೂ ಹೆಚ್ಚು ಹಲಸು, ಮಾವು, ಸೀಬೆ ಹಣ್ಣು, ನುಗ್ಗೆಕಾಯಿ ಸೇರಿದಂತೆ ನೂರಾರು ಮರಗಳೂ ಇವೆ.

    Hungund Post office ಹುನಗುಂದ ಪೋಸ್ಟ್ ಆಫೀಸ್ ಹತ್ತಿರವೇ ಇದೆ ಈ ಶಾಲೆ[/caption]

    ಇದನ್ನೂ ಓದಿ: Uttara Kannada: ಅಬ್ಬಬ್ಬಾ! ಆಕಾಶಕ್ಕೇ ಸ್ಪರ್ಧೆ ನೀಡುವ ಆಲದಮರ! ನೋಡಿದ್ರೆ ಅಚ್ಚರಿ ಪಡೋದು ಗ್ಯಾರಂಟಿ

    ನಡುವೆ ಸೊರಗಿ ಹೋಗಿದ್ದ ಅರಳಿಮರಕ್ಕೆ ಶಾಲೆಯ ಮಕ್ಕಳು- ಶಿಕ್ಷಕರು ಗ್ರಾಮಸ್ಥರು ಒಟ್ಟಾಗಿ ಕಂಪೌಂಡ್ ಕಟ್ಟಿಸಿದ್ದು, ಈಗದು ಎಷ್ಟೋ ಸುಡುಬಿಸಿಲಿಗೂ ನೆರಳಾಗಿ ಕಾಯುತ್ತಿದೆ. ಈ ತಂಪಾದ ವಾತಾವರಣದ ಮಧ್ಯೆ ಮಕ್ಕಳು ಆನಂದದಿಂದ ಕಲಿಯುತ್ತಿದ್ದಾರೆ.

    ಇದನ್ನೂ ಓದಿ: Sri Ramalingeshwara Temple: ಶಿವನ ಎದುರೇ ಶ್ರೀಮನ್ನಾರಾಯಣ! ನೀವೂ ದರ್ಶನ ಪಡೆಯಿರಿ

    ಒಟ್ಟಿನಲ್ಲಿ ಶಿಕ್ಷಕರ ಪ್ರಯತ್ನ, ಮಕ್ಕಳ ಸಹಕಾರ, ಗ್ರಾಮಸ್ಥರ ಒಗ್ಗೂಡುವಿಕೆ ಇದೆಲ್ಲವೂ ಶಾಲೆಯನ್ನ ಮಾದರಿಯನ್ನಾಗಿಸಿದೆ. ಜೊತೆಗೆ‌ ಮಕ್ಕಳಲ್ಲೂ ಪರಿಸರ ಪ್ರೇಮವನ್ನು ಬಿತ್ತಿದೆ.

    ವರದಿ: ಎ.ಬಿ.ನಿಖಿಲ್
    Published by:guruganesh bhat
    First published: