Uttara Kannada: ವೈಕುಂಠದಂತೆ ಕಂಗೊಳಿಸಿತು ಸೋಂದೆಯ ರಥೋತ್ಸವ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ಸಲ ಸೋದೆಯ ಮಠಾಧೀಶರೊಂದಿಗೆ ಮಂತ್ರಾಲಯ ಮಠಾಧೀಶರೂ ಸಹ ಕೂಡಿ ಈ ವೈಭವದಲ್ಲಿ ಪಾಲ್ಗೊಂಡರು. ಈ ರಥೋತ್ಸವದ ಅದ್ದೂರಿ ವೈಭವವನ್ನು ನೀವೂ ನೋಡಿಬಿಡಿ.

  • News18 Kannada
  • 5-MIN READ
  • Last Updated :
  • Uttara Kannada, India
  • Share this:

    ಉತ್ತರ ಕನ್ನಡ: ರಥದ ಮೇಲೆ ಕಂಗೊಳಿಸುತ್ತಿರುವ ದೇವರಿಗೆ ಹಲವು ವಿಶಿಷ್ಟ ಪೂಜೆ, ಪುನಸ್ಕಾರ. ಸಾವಿರಾರು ಭಕ್ತರಿಂದ ಹರಕೆ, ಕಣ್ತುಂಬಾ ದೇವರ ದರ್ಶನ! ಹೀಗೆ ಮಠದ ಆವರಣವೇ ಸಂಪೂರ್ಣ ಭೂಮಿ ಮೇಲಿನ ವೈಕುಂಠದಂತೆ ಕಂಗೊಳಿಸಿದ್ದು ಶಿರಸಿಯ ಸೋದಎ ಮಠದಲ್ಲಿ (Sirsi Sonda Mutt) ರಥೋತ್ಸವದಲ್ಲಿ. 


    ಲೋಕಕ್ಕೆ ಹೋಳಿ ಹುಣ್ಣಿಮೆ ಬಣ್ಣದ ಹಬ್ಬವಾದರೆ, ಉತ್ತರ ಕನ್ನಡದ ಸೋಂದಾ ವಾದಿರಾಜ ಮಠಕ್ಕೆ ಭಕ್ತಿಯ ಹಬ್ಬ. ಇಲ್ಲಿನ ರಥೋತ್ಸವ ಕಣ್ತುಂಬಿಕೊಳ್ಳಲು ಭಕ್ತರು ಕರ್ನಾಟಕದ ಮೂಲೆ ಮೂಲೆಯಿಂದಲೂ ಆಗಮಿಸುತ್ತಾರೆ. ರಥವೇರಿದ ರಮಾ ಸಹಿತ ತ್ರಿವಿಕ್ರಮ ದೇವರ ದರ್ಶನ ಪಡೆಯುತ್ತಾರೆ.


    ಮಂತ್ರಾಲಯ ಮಠಾಧೀಶರು ಭಾಗಿ
    ಈ ಸಲ ಸೋದೆಯ ಮಠಾಧೀಶರೊಂದಿಗೆ ಮಂತ್ರಾಲಯ ಮಠಾಧೀಶರೂ ಸಹ ಕೂಡಿ ಈ ವೈಭವದಲ್ಲಿ ಪಾಲ್ಗೊಂಡರು. ಗರುಡ ಧ್ವಜಾರೋಹಣದೊಂದಿಗೆ ವಾರದ ಮುಂಚೆಯೇ ಪ್ರಾರಂಭವಾಗುವ ದೇವರ ಉತ್ಸವಗಳು ಮುಗಿಯುವುದು ಹುಣ್ಣಿಮೆಯ ಮರುದಿನ. ಪ್ರತಿಪದದ ಅವಭೃತ ಸ್ನಾನದೊಂದಿಗೆ ಈ ಎರಡು ವಾರ ಸೋದೆ ಕ್ಷೇತ್ರವನ್ನು ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯವೆಂಬಂತೆ ಭಾಸವಾಯಿತು.


    ಇದನ್ನೂ ಓದಿ: Uttara Kannada: ಪ್ರತಿಭೆ ಯಾರಪ್ಪನ ಸ್ವತ್ತಲ್ಲ! ಎರಡೂ ಕೈಲಿ ಡ್ರಾಯಿಂಗ್ ಮಾಡುವ ಹಳ್ಳಿ ಶಾಲೆ ವಿದ್ಯಾರ್ಥಿ!


    ಸಾಕ್ಷಿಯಾದ ಸಹಸ್ರಾರು ಭಕ್ತರು
    ಹಗಲು ಹಾಗೂ ರಾತ್ರಿ ಹೊತ್ತು ನಡೆದ ರಥೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸಾಕ್ಷಿಯಾದರು. ಹಗಲು ರಥೋತ್ಸವ ಸಮಯದಲ್ಲಿ ಮಠಾಧೀಶರು ಬಾಳೆ ಹಣ್ಣು ಹಾಗೂ ಇನ್ನಿತರ ಹಣ್ಣು ಹಂಪಲುಗಳನ್ನ ಭಕ್ತರೆಡೆಗೆ ತೂರಿದರು.




    ಇದನ್ನೂ ಓದಿ: Uttara Kannada: ಈ ದೇಗುಲಕ್ಕೆ ನಾಗರ ಕಲ್ಲುಗಳೇ ಗೋಡೆ!


    ಇನ್ನು ರಾತ್ರಿ ನಡೆದ ವಿದ್ಯುದ್ದೀಪಗಳಿಂದ ಅಲಂಕೃತವಾದ ರಥದಲ್ಲಿ ಆಸೀನರಾದ ದೇವರ ರಥೋತ್ಸವ ಭಾರೀ ವಿಜೃಂಭಣೆಯಿಂದ ನಡೆಯಿತು. ಒಟ್ಟಿನಲ್ಲಿ ಸೋಂದಾ ವಾದಿರಾಜ ಮಠದ ಆವರಣವು ಸಂಪೂರ್ಣ ವೈಕುಂಠದಂತೆ ಭಕ್ತಿ ಭಾವದಿಂದ ಕಂಗೊಳಿಸಿತು. ಭಕ್ತರೆಲ್ಲರೂ ರಥೋತ್ಸವದಲ್ಲಿ ಭಾಗಿಯಾಗಿ ಪುನೀತರಾದರು.


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: