• Home
  • »
  • News
  • »
  • uttara-kannada
  • »
  • Uttara Kannada: ಗೊಂಬೆಯಾಟವಯ್ಯಾ! ಮಕ್ಕಳಿಗೆ ಗೊಂಬೆಗಳಿಂದಲೇ ವಿಜ್ಞಾನ, ಗಣಿತದ ಪಾಠ ಕಲಿಸುವ ಶಿಕ್ಷಕ

Uttara Kannada: ಗೊಂಬೆಯಾಟವಯ್ಯಾ! ಮಕ್ಕಳಿಗೆ ಗೊಂಬೆಗಳಿಂದಲೇ ವಿಜ್ಞಾನ, ಗಣಿತದ ಪಾಠ ಕಲಿಸುವ ಶಿಕ್ಷಕ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಸುಮಾರು 10 ವರ್ಷಗಳಿಂದ ಸಾವಿರಕ್ಕೂ ಹೆಚ್ಚು ಕಡೆ ಪ್ರದರ್ಶನ ಕೊಟ್ಟು, ಹೊರರಾಜ್ಯವಾದ ಒರಿಸ್ಸಾದಲ್ಲಿ ಕೂಡ ಕನ್ನಡದ ಕಲಾ ಪ್ರಕಾರದ ಪ್ರದರ್ಶನ ಮಾಡಿದ್ದಾರೆ.

  • News18 Kannada
  • Last Updated :
  • Uttara Kannada, India
  • Share this:

    ಕಾರವಾರ: ಸೂತ್ರಧಾರನ ಕೈಯ್ಯಲ್ಲಿದ್ದರೂ ಈ ಗೊಂಬೆಗಳು ಕುಣಿಯೋದು ನೋಡೋಕೇ ಚಂದ! ಅಪರೂಪದ ಈ ಗೊಂಬೆಯಾಟ ನೋಡುವುದೇ ಅದೇನೋ ಒಂಥರ ಖುಷಿ. ಅದರ ಕಥೆ ಕೇಳೋದೆ ಕಿವಿಗೆ ಇಂಪು. ಇಂತಹ, ನೇಪಥ್ಯಕ್ಕೆ ಸರಿದ ಈ ಕಲೆಯನ್ನು ಉಳಿಸಿ ಬೆಳೆಸೋದಕ್ಕೆ ಇಲ್ಲೊಬ್ಬರು ಪಣ ತೊಟ್ಟು ನಿಂತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ (Uttara Kannada) ಯಲ್ಲಾಪುರದ ವಡ್ಡಾಲದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮನೋಜ್ ಪಾಲೇಕರ್ ಹಾಗೂ ಕುಟುಂಬದವರೇ ಗೊಂಬೆಯಾಟವನ್ನ (Togalu Gombeyaata) ಉಳಿಸೋ ಪ್ರಯತ್ನ ಮಾಡ್ತಿರೋದು. ಜೊತೆಗೆ ಆ ಕಲೆಯನ್ನು ನಾಡಿನಾದ್ಯಂತ ಪಸರಿಸುವ ಇರಾದೆಯೂ ಅವರದು.


    ಸುಮಾರು 10 ವರ್ಷಗಳಿಂದ ಸಾವಿರಕ್ಕೂ ಹೆಚ್ಚು ಕಡೆ ಪ್ರದರ್ಶನ ಕೊಟ್ಟು, ಹೊರರಾಜ್ಯವಾದ ಒರಿಸ್ಸಾದಲ್ಲಿ ಕೂಡ ಕನ್ನಡದ ಕಲಾ ಪ್ರಕಾರದ ಪ್ರದರ್ಶನ ಮಾಡಿದ್ದಾರೆ. ಮನೋಜ್ ಪಾಲೇಕರ್ ಅವರು ಗೊಂಬೆಯಾಟದ ಬಗ್ಗೆ ಇಟ್ಟಿರೋ ಆಸಕ್ತಿಯೇ ಇದೆಲ್ಲವನ್ನೂ ಸಾಧ್ಯವಾಗಿಸಿದೆ.


    ಕಲಾಭಾರತಿ ಅನ್ನೋ ತಂಡದ ಪ್ರಯತ್ನ
    ಗೊಂಬೆಯಾಟ ಉಳಿಸೋದಕ್ಕಾಗಿ ಮನೋಜ್ ಪಾಲೇಕರ್ ಕಲಾಭಾರತಿ ಅನ್ನೋ ತಂಡ ಕಟ್ಟಿದ್ದಾರೆ. ಗೊಂಬೆಯಾಟದ ಮೂಲಕ ಕದಂಬ ಸಾಮ್ರಾಜ್ಯ, ವಿಕ್ರಮ ಬೇತಾಳ, ಗಣೇಶ ಮಹಾತ್ಮೆ ಹಾಗೂ ಸಂಗೊಳ್ಳಿ ರಾಯಣ್ಣನಂತಹ ಹಲವು ಪ್ರಸಂಗಗಳನ್ನು ಗೊಂಬೆಯಾಟದಲ್ಲಿ ಆಡಿಸುತ್ತಾರೆ. ಅದಲ್ಲದೇ ಕೈಗೊಂಬೆಗಳ ಮೂಲಕ ಪ್ರಸಂಗಗಳನ್ನು ರಚಿಸುವುದನ್ನು ಇವರು ರೂಢಿಸಿಕೊಂಡಿದ್ದಾರೆ.


    ಗೊಂಬೆಗಳ ಮೂಲಕವೇ ಪಾಠ
    ವಿಶೇಷವೇನೆಂದರೆ ಈ ಗೊಂಬೆಗಳ ಮೂಲಕವೇ ಮಕ್ಕಳಿಗೆ ವಿಜ್ಞಾನ, ಗಣಿತ, ಕನ್ನಡ, ಇತಿಹಾಸದ ಪಾಠವನ್ನು ಕಲಿಸ್ತಾರೆ. ಇವರ ಇಡೀ ಕುಟುಂಬವು ಪಾತ್ರಗಳಿಗೆ ಹಿನ್ನೆಲೆ ಧ್ವನಿ ಒದಗಿಸುತ್ತೆ. ಇವರ ಮನೆಯ ಚಿಕ್ಕ ಮಕ್ಕಳಿಂದ ಹಿಡಿದು ಗೃಹಿಣಿಯರು ಹಾಗೂ ಇವರ ಮಿತ್ರರೂ ಕೂಡ ಗೊಂಬೆಯಾಟ ಆಡಿಸುತ್ತಾರೆ ಅನ್ನೋದು ಇನ್ನೊಂದು ವಿಶೇಷ. ಹೀಗೆ ಅಪರೂಪದ ಕಲೆಗೆ, ಅದನ್ನ ಬೆಳೆಸ್ತಿರೋ ಪ್ರತಿಭೆಗಳಿಗೆ ಸರ್ಕಾರದ ಪ್ರೋತ್ಸಾಹವೂ ಸಿಗ್ಲಿ ಅನ್ನೋದೇ ನಮ್ಮ ಆಶಯ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: