Uttara Kannada: ಇಲ್ಲಿ ಬೆಳೆಯುವ ಸಿಹಿ ಜಡೆ ಈರುಳ್ಳಿ ವರ್ಷಪೂರ್ತಿ ಇಟ್ರೂ ಹಾಳಾಗಲ್ಲ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಉತ್ತರ ಕನ್ನಡದ ಗೋಕರ್ಣದ ಬೀಚ್‌ ಬಳಿ ಈಗ ಏನಿದ್ರೂ ಈ ಸಿಹಿ ಈರುಳ್ಳಿಯ ಕಟಾವು ಸಮಯ. ವರ್ಷಕ್ಕೆ ಮೂರು ತಿಂಗಳ ಬೆಳೆಯಾಗಿರುವ ಈ ಈರುಳ್ಳಿ, ಮಾರ್ಚ್‌ ತಿಂಗಳ ಅಂತ್ಯಕ್ಕೆ ಅಥವಾ ಚೈತ್ರ ಕಾಲದಲ್ಲಿ ಕಟಾವಿಗೆ ಬಂದಿರುತ್ತೆ.

  • News18 Kannada
  • 4-MIN READ
  • Last Updated :
  • Uttara Kannada, India
  • Share this:

ಉತ್ತರ ಕನ್ನಡ: ಈರುಳ್ಳಿ ಕತ್ತರಿಸಿದ್ರೆ ಕಣ್ಣಲ್ಲಿ ನೀರು ತರಿಸುತ್ತೆ ಅನ್ನೋದು ಕಾಮನ್..‌ ಆದ್ರಿಲ್ಲಿರೋ ಈರುಳ್ಳಿ ಕಂಡ್ರೆ ಬಾಯಲ್ಲಿ ನೀರೂರಿಸುತ್ತೆ. ಅರೆ! ಈರುಳ್ಳಿ ಎಂತ ಅಷ್ಟು ರುಚಿನಾ ಅಂತೀರ? ನಿಜ, ನಾವ್‌ ನೀವ್‌ ಬಳಸೋ ಈರುಳ್ಳಿಗಳು (Onion)  ಭಾರೀ ಘಾಟು ಬೀರಿದ್ರೆ, ಈ ಈರುಳ್ಳಿ ಮಾತ್ರ  (Gokarna Onion) ಘಾಟಿನೊಂದಿಗೆ ಸಿಹಿಯೂ ಕೂಡ. ಹಾಗಿದ್ರೆ ಈ ಈರುಳ್ಳಿ ಸಿಗೋದೆಲ್ಲಿ? ಏನಿದರ ಸ್ಪೆಷಾಲಿಟಿ ಅಂತೀವಿ ನೋಡಿ.


ಸಿಹಿ ಈರುಳ್ಳಿ
ಯೆಸ್‌, ಉತ್ತರ ಕನ್ನಡದ ಗೋಕರ್ಣದ ಬೀಚ್‌ ಬಳಿ ಈಗ ಏನಿದ್ರೂ ಈ ಸಿಹಿ ಈರುಳ್ಳಿಯ ಕಟಾವು ಸಮಯ. ವರ್ಷಕ್ಕೆ ಮೂರು ತಿಂಗಳ ಬೆಳೆಯಾಗಿರುವ ಈ ಈರುಳ್ಳಿ, ಮಾರ್ಚ್‌ ತಿಂಗಳ ಅಂತ್ಯಕ್ಕೆ ಅಥವಾ ಚೈತ್ರ ಕಾಲದಲ್ಲಿ ಕಟಾವಿಗೆ ಬಂದಿರುತ್ತೆ. ಇನ್ನೊಂದು ವಿಶೇಷ ಅಂದ್ರೆ ಈ ಈರುಳ್ಳಿನ ಬಾಳೆ ನಾರಿನಿಂದ ಮನೆ ಛಾವಣಿಗೆ ಸಿಕ್ಕಿಸಿಟ್ರೆ, ಮತ್ತೆ ಒಂದೂವರೆ ವರ್ಷ ಆದ್ರೂ ಏನೂ ಆಗದು.




ಜಡೆ ಈರುಳ್ಳಿ
ಅಂದಹಾಗೆ ಈ ಈರುಳ್ಳಿ ಹೆಸರು ʼಜಡೆ ಈರುಳ್ಳಿʼ ಅಂತ. ಪ್ರತೀ ವರ್ಷ ಇದನ್ನ ಕ್ವಿಂಟಾಲುಗಟ್ಟಲೆ ಬೆಳೆಯುತ್ತಾರೆ. ಬಹುತೇಕ ಇದನ್ನ ಸಾವಯವ ಪದ್ಧತಿಯಲ್ಲೇ ಬೆಳೆಯುವುದು. ಆದ್ರೆ ಈ ಬಾರಿ ಹವಾಮಾನದ ವೈಪರೀತ್ಯದಿಂದ ಹೆಚ್ಚಿನ ಬೆಳೆ ಬಂದಿಲ್ಲ. ಕ್ವಿಂಟಾಲ್‌ ಗಟ್ಟಲೆ ಬೆಳೆಯುತ್ತಿದ್ದವರು, ಕೆಜಿ ಲೆಕ್ಕದಲ್ಲಿ ಈ ಜಡೆ ಈರುಳ್ಳಿ ಬೆಳೆದು ಫಸಲು ತೆಗೆದಿದ್ದಾರೆ.


ಇದನ್ನೂ ಓದಿ: Yellow Watermelon: ಕೆಂಪಲ್ಲ, ಇದು ಹಳದಿ ಕಲ್ಲಂಗಡಿ! ಭರ್ಜರಿ ಲಾಭ ಗಳಿಸಿದ ಮಲೆನಾಡ ಕೃಷಿಕ




ಕೆಜಿಗೆ ಎಷ್ಟಿದೆ?
ಇವು ಗಾತ್ರದಲ್ಲಿ ಸಣ್ಣದಾಗಿದ್ದರೂ ಕೆಜಿಗೆ 75-80 ರೂಪಾಯಿವರೆಗೆ ಮಾರಾಟವಾಗುತ್ತವೆ. ಊರಿನ ಹೊರಗಡೆ ದುಡಿಯುವ ಕರಾವಳಿ ಹಾಗೂ ಘಟ್ಟದ ಮಹಿಳೆಯರಿಗೆ ಇದೊಂದು ಎಮೋಷನ್. ಈ ಸಲ ಊರಿಗೆ ಹೋದರೆ ಜಡೆ ಈರುಳ್ಳಿ ತರಬೇಕು ಎಂದು ಅವರು ಮಾತನಾಡಿಕೊಳ್ಳುತ್ತಾರೆ. ಇದಕ್ಕೊಂದು ರಾಷ್ಟ್ರೀಯ ಮಾನ್ಯತೆ ಒದಗಿಸಬೇಕೆನ್ನುವ ಚರ್ಚೆ ಇರುವಾಗಲೇ, ರೈತ ಇದನ್ನು ಬೆಳೆಯುವುದನ್ನೇ ತೀರಾ ಕಡಿಮೆ ಮಾಡಿದ್ದು ಮಾತ್ರ ಮೂಡ್‌ ಆಫ್‌ ಮಾಡೋ ಸಂಗತಿ.


ಇದನ್ನೂ ಓದಿ: Uttara Kannada: ಈ ಅಕ್ಕಿ ಯಾವ ಸುಗಂಧ ದ್ರವ್ಯಕ್ಕೂ ಕಡಿಮೆಯಿಲ್ಲ, ಊರೆಲ್ಲ ಪರಿಮಳ ಸೂಸುತ್ತೆ!


ಸದ್ಯ ಈ ಬೆಳೆಯನ್ನ ಗೋಕರ್ಣದ ರುದ್ರಪಾದದಲ್ಲಷ್ಟೇ ಬೆಳೆಯಲಾಗ್ತಿದೆ. ಅಪರೂಪದಲ್ಲಿ ಅಪರೂಪದ ಈ ಸಿಹಿಯಾಗಿರೋ ಜಡೆ ಈರುಳ್ಳಿ ಅಳಿವಿನಂಚಿಗೆ ಸರಿದಿರುವುದು ಕೂಡಾ ಆಶ್ಚರ್ಯವೇ ಸರಿ.


ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

First published: