ಗೋಕರ್ಣ: ಅಗಲಿದ ಆತ್ಮಗಳಿಗೆ ಚಿರಶಾಂತಿ ಕಲ್ಪಿಸೋ ತಾಣ ಗೋಕರ್ಣ. ಅದರಲ್ಲೂ ಉತ್ತರಾಯಣದ (Uttarayan) ಪುಣ್ಯಕಾಲ ಸನ್ನಿಹಿತವಾಗಿದ್ದು ಗೋಕರ್ಣ (Gokarna) ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿದೆ. ಸಾವು ಕಂಡ ಆತ್ಮಗಳಿಗೆ ಮುಕ್ತಿ ನೀಡುತ್ತಿದ್ದಾರೆ. ದಿನವಿಡೀ ಕ್ಷೇತ್ರಗಳಲ್ಲಿದ್ದು ಪಿತೃಗಳಿಗೆ ಪಿಂಡ ಪ್ರದಾನ (Pinda Pradhan) ನಡೆಸುತ್ತಿದ್ದಾರೆ.
ಹಿಂದೂ ಧಾರ್ಮಿಕ ನಂಬಿಕೆ ಪ್ರಕಾರ ಸಾವನ್ನಪ್ಪಿದ ಯಾರೇ ಇದ್ರೂ ಅವರ ಕುಟುಂಬಿಕರು ಆ ಆತ್ಮಕ್ಕೆ ಮುಕ್ತಿ ಕಲ್ಪಿಸುವುದು ಮುಖ್ಯ. ಹೀಗಾಗಿ ಉತ್ತರ ಕನ್ನಡದ ಗೋಕರ್ಣಕ್ಕೆ ಆಸ್ತಿಕರು ಬರುವುದು ಸಹಜ. ಹೀಗೆ ಬಂದವರು ಅಲ್ಲಿಯ ಅರ್ಚಕರ ಸಹಕಾರದಿಂದ ಶಾಸ್ತ್ರೋಕ್ತ ಕ್ರಮಗಳನ್ನ ಪಾಲಿಸುತ್ತಾರೆ. ಈ ಮೂಲಕ ತಮ್ಮನ್ನು ಅಗಲಿದ ಕುಟುಂಬಿಕರಿಗೆ ಮುಕ್ತಿ ಕಲ್ಪಿಸಿ ತಾವು ನೆಮ್ಮದಿಯಿಂದ ಇರಲು ಕಾರಣರಾಗುತ್ತಾರೆ. ಈ ಕಾರ್ಯಗಳ ಮೂಲಕ ಮೋಕ್ಷ ಪ್ರಾಪ್ತಿ ಕಲ್ಪಿಸಿದ ನಿಟ್ಟುಸಿರ ಜೊತೆಗೆ ಭಕ್ತರು ಹಿಂದಿರುಗುತ್ತಾರೆ.
ಉತ್ತರಾಯಣ ಪುಣ್ಯಕಾಲ
ಹಿಂದೂ ಪುರಾಣಗಳಲ್ಲಿ ಸ್ವರ್ಗ, ನರಕ, ಮೋಕ್ಷಾದಿಗಳನ್ನು ಹೇಳಲಾಗಿದೆ. ಇದಕ್ಕೆ ಬೇಕಾಗಿ ಗೋಕರ್ಣದಲ್ಲಿ ಪಿತೃಗಳಿಗೆ ಪಿಂಡ ಪ್ರದಾನ ಮಾಡುವುದರೊಂದಿಗೆ ನಾರಾಯಣ ಬಲಿ ಮಾಡಿಸಿದರೆ ಮೋಕ್ಷ ಪ್ರಾಪ್ತಿ ಎಂಬ ಶೃದ್ಧಾಪೂರ್ವಕ ನಂಬಿಕೆಯಿದೆ. ಹಾಗಾಗಿ ದೇಶದೆಲ್ಲೆಡೆಯಿಂದ ಜನ ಇಲ್ಲಿಗೆ ಬರುತ್ತಾರೆ. ಉತ್ತರಾಯಣ ಪುಣ್ಯಕಾಲವು ಸನ್ನಿಹಿತವಾಗಿದ್ದು, ಆ ದಿನಗಳಲ್ಲಿ ಸ್ವರ್ಗದ ಬಾಗಿಲು ತೆಗೆದಿರುತ್ತದೆ ಎಂಬ ನಂಬಿಕೆ ಹಿಂದೂಗಳಲ್ಲಿದೆ.
ಇದನ್ನೂ ಓದಿ: Gokarna: ಸಂಕ್ರಾಂತಿಗೂ ಮುನ್ನ ಅವಲಹಬ್ಬ! ದಕ್ಷಿಣ ಕಾಶಿ ಗೋಕರ್ಣದಲ್ಲಿ ವಿಶಿಷ್ಟ ಆಚರಣೆ
ಹೀಗಾಗಿ ಅತ್ಯಧಿಕ ಸಂಖ್ಯೆಯಲ್ಲಿ ಪಿಂಡ ಪ್ರದಾನ ಕಾರ್ಯ ಇಲ್ಲಿನ ಕೋಟಿತೀರ್ಥ ತಟಾಕ ಹಾಗೂ ಸಮುದ್ರ ದಂಡೆಯಲ್ಲಿ ನಡೆಯುತ್ತಿದೆ. ಉತ್ತರಾಯಣ ಪುಣ್ಯಕಾಲ ಪಿತೃಪಕ್ಷದ ದಿನಗಳಷ್ಟೇ ಮಹತ್ವವನ್ನು ಹೊಂದಿದೆ ಎನ್ನುತ್ತಾರೆ ಪಂಡಿತರಾದ ಶಿವ ಗಣೇಶ ಭಟ್ಟರು.
ಇದನ್ನೂ ಓದಿ: Fishermen Temple: ಮೀನುಗಾರರ ಮಹಾತಾಯಿ ಈ ದುರ್ಗಾಪರಮೇಶ್ವರಿ ದೇವಿ
ಇಷ್ಟು ಮಾತ್ರವಲ್ಲದೇ ಪ್ರೇತೋಚ್ಛಾಟನೆ, ನಾರಾಯಣ ಬಲಿ, ತ್ರಿಪಿಂಡಿ ಶ್ರಾದ್ಧ ಇಲ್ಲಿ ನಡೆಯುತ್ತವೆ. ಗೋಕರ್ಣಕ್ಕೆ ತೆರಳುವ ಪ್ರವಾಸಿಗರು ಕೋಟಿತೀರ್ಥ ತೀರದ ಕ್ರಿಯಾಮಂಟಪದ ಒಳಗೆ ಕಾಲಿಟ್ಟರೆ ಹೊಸ ಜಗತ್ತಿನ ಪರಿಚಯವಾಗುತ್ತದೆ ಅನ್ನೋದು ಅಕ್ಷರಶಃ ಸತ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ