ಉತ್ತರ ಕನ್ನಡ: ರಬ್ಬರ್ನಂತೆ ಬೆಂಡಾಗುವಳು, ಸ್ಪ್ರಿಂಗ್ನಂತೆ ಪುಟಿದೇಳುವಳು. ಪಕ್ಕಾ ಮಣ್ಣಿನ ಕಲೆಯನ್ನ ಕರಗತ ಮಾಡಿಕೊಂಡಿರುವ ಈ ಬಾಲೆಯ ಸಾಧನೆ ಅದ್ಭುತ. ಭಾರತಕ್ಕಷ್ಟೇ (India) ಸೀಮಿತ ಅನ್ನೋ ಹಾಗಿದ್ದ ಯೋಗ (Yoga) ಸ್ಪರ್ಧೆಯಲ್ಲಿ ಈ ಕುವರಿ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ (International Level) ಮಿಂಚಲು ಸಿದ್ಧವಾಗಿ ನಿಂತಿದ್ದಾರೆ.
ದುಬೈ ಯೋಗ ಸ್ಪರ್ಧೆ
ಯೆಸ್, ಉತ್ತರ ಕನ್ನಡದ ಗೋಕರ್ಣದ ಬಾಲಕಿ, ಹದಿನೈದರ ಹರೆಯದ ಶ್ರೀನಿಧಿ ಗೌಡ ಈಗ ಭಾರತದ ಗಡಿರೇಖೆ ದಾಟಿ ತನ್ನ ಯೋಗ ಕಲೆಯನ್ನ ಪ್ರದರ್ಶಿಸುವ ಯೋಗವನ್ನ ಪಡೆದಿದ್ದಾರೆ. ಮುಂಬರುವ ದುಬೈ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಶ್ರೀನಿಧಿ ಭಾರತವನ್ನ ಪ್ರತಿನಿಧಿಸುತ್ತಿದ್ದಾರೆ.
ದಾಖಲೆಯ ಕುವರಿ
ಗೋಕರ್ಣದ ಪ್ರಕಾಶ್ ಗೌಡ ಹಾಗೂ ಸರೋಜಾ ಗೌಡ ದಂಪತಿಯ ಮಗಳಾಗಿರುವ ಇವರು, ಈ ಹಿಂದೆ 22 ನಿಮಿಷಗಳ ಕಾಲ ಭೂಮಾಸನ ಮಾಡಿ ವಿಶ್ವ ದಾಖಲೆ ಬರೆದಿದ್ದರು. ಅಲ್ಲದೇ 30 ಸೆಕೆಂಡ್ ನಲ್ಲಿ 12 ಚಕ್ರಾಸನ, ಒಂದು ನಿಮಿಷದಲ್ಲಿ ಒಂದು ಸಾವಿರ ಸೂರ್ಯ ನಮಸ್ಕಾರ ಮಾಡಿ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: Uttara Kannada: ಪ್ರತಿಭೆ ಯಾರಪ್ಪನ ಸ್ವತ್ತಲ್ಲ! ಎರಡೂ ಕೈಲಿ ಡ್ರಾಯಿಂಗ್ ಮಾಡುವ ಹಳ್ಳಿ ಶಾಲೆ ವಿದ್ಯಾರ್ಥಿ!
ಇತರರಿಗೂ ಯೋಗ ತರಬೇತಿ
ಸಣ್ಣ ವಯಸ್ಸಿಗೆ ಯೋಗಾಸನ ಮಾಡುತ್ತಿದ್ದ ಈ ಬಾಲಕಿ ಕಾರ್ಕಳದ ಯೋಗಗುರು ನರೇಂದ್ರ ಕಾಮತ್ ಅವರ ಗರಡಿಯಲ್ಲಿ ಪಳಗಿದವರು. ಬರೀ ಯೋಗಪಟುವಾಗಿರದೇ ಕುಂದಾಪುರದ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ ತನ್ನ ಶಾಲೆಯ ಎಲ್ಲಾ ಮಕ್ಕಳಿಗೂ ಪ್ರಾಣಾಯಾಮ ಹಾಗೂ ಯೋಗಾಸನವನ್ನು ಕಲಿಸುತ್ತಿದ್ದಾರೆ.
ಇದನ್ನೂ ಓದಿ: Uttara Kannada: ಸ್ನಾತಕೋತ್ತರ ಪದವಿಯಲ್ಲಿ ಚಿನ್ನ ಗಳಿಸಿದ ಗೌಳಿ ಸಮುದಾಯದ ಮೊದಲ ಮಹಿಳೆ!
ಭರ್ಜರಿ ತಯಾರಿ
ಐದನೇ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆ ದುಬೈಯಲ್ಲಿ ನಡೆಯಲಿದ್ದು, ದಿನಾಂಕ ಇನ್ನೂ ನಿಗದಿಯಾಗದಿದ್ದರೂ ಬಾಲಕಿ ಭರ್ಜರಿ ತಯಾರಿಯಲ್ಲಿ ತೊಡಗಿದ್ದಾಳೆ. ಒಟ್ಟಿನಲ್ಲಿ ಯೋಗ ಕಲೆ ಮೂಲಕ ದುಬೈಗೆ ತೆರಳೋ ಯೋಗ ಸದ್ಯ ಶ್ರೀನಿಧಿ ಗೌಡ ಅವರ ಪಾಲಿಗೆ ಒದಗಿ ಬಂದಿದೆ. ಇವರ ಸಾಧನೆ ಇನ್ನಷ್ಟು ಉನ್ನತಿಗೇರಲಿ, ಆ ಮೂಲಕ ಭಾರತದ ಕೀರ್ತಿ ಪತಾಕೆ ಎತ್ತಿ ಹಿಡಿಯುವಂತಾಗಲಿ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ