• Home
  • »
  • News
  • »
  • uttara-kannada
  • »
  • Uttara Kannada: ಲೋಟ, ತಟ್ಟೆಗಳಲ್ಲೇ ಸಂಗೀತ ನುಡಿಸುವ ಬಾಲಕ!

Uttara Kannada: ಲೋಟ, ತಟ್ಟೆಗಳಲ್ಲೇ ಸಂಗೀತ ನುಡಿಸುವ ಬಾಲಕ!

X
ಸಂಗೀತ ಸುಧೆ ಕೇಳಿ

"ಸಂಗೀತ ಸುಧೆ ಕೇಳಿ"

ಯಾವ ಹಾಡನ್ನೇ ಆದ್ರೂ ಲೋಟ, ತಟ್ಟೆಗಳಿಂದಲೇ ಮಧುರವಾಗಿ ನುಡಿಸ್ತಾರೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಈ 8ನೇ ತರಗತಿಯ ಬಾಲಕ!

  • Share this:

    ಹತ್ತಾರು ಲೋಟ, ಎರಡು ಪೇಂಟಿಂಗ್ ಬ್ರಶ್ಶು. ಮೊಳಗುತ್ತೆ ನೋಡಿ ಸಂಗೀತ ಸುಧೆ. ಈ ಬಾಲಕ ಸುಶ್ರಾವ್ಯವಾಗಿ ಹಾಡಿದಂತೆ ಹೊರಹೊಮ್ಮುತ್ತೆ ಸಪ್ತಸ್ವರ. ಗಿಟಾರ್, ಬ್ಯಾಂಡ್ ಯಾವ್ದೂ ಇಲ್ದೇ ಹೋದ್ರೂ ಈ ಸಂಗೀತ ಮನಸನ್ನು ಖುಷಿಯಲ್ಲಿ ಮುಳುಗಿಸುತ್ತೆ. ಲೋಟ, ತಟ್ಟೆಗಳ ಮೇಲೂ ಸಂಗೀತ (Music) ನುಡಿಸುತ್ತಾರಿವರು! ಇವರು ಗೋಕರ್ಣದ (Gokarna) ಎಂಟನೇ ತರಗತಿಯ ವಿಘ್ನೇಶ್ ಕೂರ್ಸೆ ಅಂತ.


    ಇವರು ಲೋಟ, ತಟ್ಟೆಗಳ ಮೂಲಕ ಪೇಟಿಂಗ್ ಬ್ರಷ್ ಬಳಸಿ ಸಂಗೀತ ಸುಧೆ ನುಡಿಸ್ತಾರೆ. ವಿಘ್ನೇಶ್ ಕೂರ್ಸೆ ಒಂದನೇ ತರಗತಿಯಲ್ಲಿರಬೇಕಾದ್ರೆ ಅವರ ತಂದೆ ಗಣಪತಿ ಖೂರ್ಸೆಯವರಿಂದ ಜಲತರಂಗ ಎಂಬ ಕಲೆಯನ್ನು ಅಧ್ಯಯನ ಮಾಡಿದ್ರಂತೆ.


    ಇದನ್ನೂ ಓದಿ: Belambar Treatment: ಉತ್ತರ ಕನ್ನಡದ ಈ ನಾಟಿವೈದ್ಯರ ಬಳಿ ರಾಜ್​ಕುಮಾರ್, ಬಿಗ್ ಬಿ ಸಹ ಚಿಕಿತ್ಸೆ ಪಡೆದಿದ್ರು!


    ಯಾವ ಹಾಡನ್ನಾದ್ರೂ ನುಡಿಸಬಹುದು!
    ನಂತರ ಈ ವಿಶೇಷ ಲೋಹ ತರಂಗದ ಬಗ್ಗೆ ತಿಳಿದು ತಮ್ಮ ತಂದೆಯ ಜೊತೆ ಸೇರಿ ಗೋಕರ್ಣ ಪೇಟೆಯ ಸ್ಟೀಲ್ ಅಂಗಡಿಗಳಿಗೆ ಹೊಕ್ಕರಂತೆ. ಪಿಚ್ ಲ್ಯಾಬ್ ಸಾಫ್ಟ್​ವೇರ್​ನಿಂದ ಪ್ರತಿ ಲೋಟವೂ ಹೊರಡಿಸುವ ಶಬ್ದ ತರಂಗವನ್ನು ಅಧ್ಯಯನ ಮಾಡಿದ್ರು. ಒಂದು ವರ್ಷದ ತನಕ ಎಲ್ಲಾ ರೀತಿಯ ಲೋಟಗಳನ್ನು ಪರೀಕ್ಷಿಸಿ ಹೊಸ ಮಾದರಿಯನ್ನು ಸಿದ್ದಪಡಿಸಿದ್ರು. ಈಗ ವಿಘ್ನೇಶ್ ಯಾವ ಹಾಡನ್ನಾದ್ರೂ ಈ ವಾದ್ಯದಲ್ಲಿ ಮಧುರವಾಗಿ ನುಡಿಸ್ತಾರೆ.


    ಇದನ್ನೂ ಓದಿ: Kashmiri Apple: 50 ರೂಪಾಯಿಗೆ ಕಾಶ್ಮೀರದ ಸೇಬು! ಮಾಜಿ ಯೋಧರ ಆ್ಯಪಲ್ ಸೇವೆ


    ಈ ವಿದ್ಯಾರ್ಥಿಗೆ ಹಲವು ಪ್ರಶಸ್ತಿ
    ಹೀಗೆ ಶಬ್ದ ತರಂಗ ವಾದ್ಯ ನುಡಿಸುವ ವಿಘ್ನೇಶ್ ಅವ್ರು ಗೋಕರ್ಣದ ವಿಷ್ಣುಗುಪ್ತ ವಿದ್ಯಾಪೀಠದಲ್ಲಿ ಎಂಟನೇ ತರಗತಿ ಓಡ್ತಿದ್ದಾರೆ. ಈಗಾಗಲೇ ವಿಘ್ನೇಶ್ ಅವರಿಗೆ ಹವ್ಯಕ ಪಲ್ಲವ, ಸ್ವರ ಶ್ರೀ ಪ್ರಶಸ್ತಿ ಸಂದಿದೆ. ವಿಶ್ವಶಾಂತಿ ಪ್ರತಿಷ್ಠಾನದಿಂದ ನಮ್ಮನೆ ಯುವ ಪುರಸ್ಕಾರವೂ ದೊರೆತಿದೆ. ಒಟ್ಟಿನಲ್ಲಿ ಎರಡು ಬ್ರಷ್ ಹಾಗೂ ಲೋಟದಿಂದ ಇಂಪಾದ ಸಂಗೀತ ಹೊರಡಿಸುವ ಇವರ ಈ ಸಾಧನೆ ಸಂಗೀತ ಪ್ರೇಮಿಗಳ ಕಿವಿ ತಂಪಾಗಿಸ್ತಿರೋದಂತೂ ಸತ್ಯ.


    ವಿಘ್ನೇಶ್ ಕೂರ್ಸೆ ಅವರ ಬಳಿ ನೀವೂ ಮಾತನಾಡಬೇಕಂದ್ರೆ ಈ ಸಂಖ್ಯೆಗೆ ಒಂದು ಕರೆ ಮಾಡಬಹುದು! 94488 18549


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: