ಕಾರವಾರ: ಭಕ್ತರ ಪಾಲಿನ ಶಕ್ತಿಕೇಂದ್ರ, ಮೀನುಗಾರರ ಆರಾಧ್ಯ ದೈವ ಭಟ್ಕಳದ ಅಳ್ವೆಕೋಡಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ (Sri Durgaparameshwari Temple) ಮಾರಿಜಾತ್ರಾ ಮಹೋತ್ಸವದ ಸಂಭ್ರಮ. ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ಜಾತ್ರಾ (Mari Jatra) ಮಹೋತ್ಸವಕ್ಕೆ ಹೊರ ಜಿಲ್ಲೆಗಳಿಂದಲೂ ಭಕ್ತರ ದಂಡು ಹರಿದು ಬರ್ತಿದೆ.
ಪ್ರತಿ ಎರಡು ವರ್ಷಕ್ಕೊಮೆ ನಡೆಯುತ್ತೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿಯ ಸುಪ್ರಸಿದ್ಧ ಮಾರಿಜಾತ್ರಾ ಮಹೋತ್ಸವ. ಕೋವಿಡ್ ಕಾರಣದಿಂದಾಗಿ 2021 ರಲ್ಲಿ ನಡೆಯಬೇಕಿದ್ದ ಐದನೇ ವರ್ಷದ ಜಾತ್ರಾ ಮಹೋತ್ಸವವನ್ನು ಮುಂದೂಡಿ ಈ ಭಾರಿ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದೆ.
ಮೀನುಗಾರರಿಗೆ ವರ ಕೊಡುವ ದೇವಿ
ಸುಮಾರು 300 ವರ್ಷಗಳಿಗೂ ಹಿಂದಿನ ಇತಿಹಾಸ ಹೊಂದಿರುವ ಈ ದುರ್ಗಾಪರಮೇಶ್ವರಿ ದೇವಿಯೂ ಭಕ್ತರು ಬೇಡಿದ್ದನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಈ ಭಾಗದ ಭಕ್ತರಲ್ಲಿದೆ. ಅಲ್ಲದೆ ಗ್ರಾಮದ ಮೀನುಗಾರ ಸಮುದಾಯದವರು ದೇವಿಗೆ ನಡೆದುಕೊಳ್ಳಲು ಪ್ರಾರಂಭಿಸಿದಾಗಿನಿಂದಲೂ ಸಾಕಷ್ಟು ಅಭಿವೃದ್ಧಿ ಕಂಡಿದ್ದಾರೆ. ಇದರಿಂದ ಪ್ರತಿ ವರ್ಷವೂ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಎರಡು ದಿನ ವಿಶೇಷ ಪೂಜೆ ಬಳಿಕ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಗುತ್ತದೆ ಎನ್ನುತ್ತಾರೆ ದೇವಸ್ಥಾನ ಸಮಿತಿ ಅಧ್ಯಕ್ಷರು.
ಇದನ್ನೂ ಓದಿ: Narasimha Devaru: ಸಮುದ್ರದ ನಡುವೆ ನರಸಿಂಹ ದೇವರು!
ಹೀಗಿದೆ ಐತಿಹ್ಯ
ಇನ್ನು ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಇರುವ ಈಗಿನ ಪ್ರದೇಶ ನಿರ್ಜನ ಪ್ರದೇಶವಾಗಿತ್ತು. ಇಲ್ಲಿನ ಪೊದೆಯೊಂದರ ಮಧ್ಯೆ ಪ್ರತಿನಿತ್ಯ ತೆರಳುವ ಹಸುವೊಂದು ಹಾಲೆರೆದು ಬರುತಿತ್ತು. ಆ ಬಳಿಕ ನೋಡಿ ವಿಚಾರಿಸಿದಾಗ ಅಲ್ಲಿ ದೇವಿ ನೆಲೆಸಿರುವುದು ತಿಳಿದು ಬಂದಿದೆ. ಬಳಿಕ ಸುತ್ತಮುತ್ತಲಿನ ಗ್ರಾಮಸ್ಥರು ದೇವಿಗೆ ನಡೆದುಕೊಳ್ಳಲು ಆರಂಭವಿಸಿದ್ದರು.
ಇದನ್ನೂ ಓದಿ: Uttara Kannada: ಕೌದಿ ಹೊಲಿಯಾಕ ಬಂದಾಳ ನೋಡ್ರಿ ಅಮೇರಿಕಾ ಹುಡುಗಿ!
ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಈ ಭಾಗದಲ್ಲಿ ಹೆಚ್ಚಾಗಿ ನೆಲೆಸಿರುವ ಮೀನುಗಾರರು ಕೂಡ ದೇವಿಗೆ ನಡೆದುಕೊಳ್ಳುವುದರಿಂದ ಇಂದು ಸಾಕಷ್ಟು ಅಭಿವೃದ್ಧಿಕಂಡಿದ್ದಾರೆ. ಇದರಿಂದ ಮೀನುಗಾರರು ತಮ್ಮ ದುಡಿಮೆಯಲ್ಲಿನ ಒಂದು ಪಾಲನ್ನು ದೇವಿಗೆ ಅರ್ಪಣೆ ಮಾಡುತ್ತಾರೆ. ಬಂದಂತಹ ಭಕ್ತರ ಸಕಲ ಇಷ್ಟಾರ್ಥಗಳನ್ನು ದೇವಿಯೂ ಈಡೇರಿಸುತ್ತಾಳೆ ಎನ್ನುತ್ತಾರೆ ಭಕ್ತರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ