Uttara Kannada: ಬಡವರಿಗೆ ಬಂಗಾರ ನೀಡುವ ಗ್ರಾಮ ದೇವತೆ ಈಕೆ! ವರ್ಷಕ್ಕೆ 3 ತಿಂಗಳಷ್ಟೇ ದರ್ಶನ ಭಾಗ್ಯ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮೀನುಗಾರರು, ತೋಟಗಾರರು, ಹಾಲಕ್ಕಿ ಗೌಡರು, ಬಡ ಕಾರ್ಮಿಕರು ಎಲ್ಲರಿಗೂ ಈಕೆ ತಾಯಿ. ರಾಜಕಾರಣಿಗಳಿಗೆ, ಉದ್ಯೋಗಿಗಳಿಗೆ, ಸಿರಿವಂತರಿಗೆ ಎಲ್ಲರಿಗೂ ಸೌಭಾಗ್ಯದಾಯಿನಿ ಎಂದೇ ಬಂಗಾರಮ್ಮ ದೇವಿ ಪ್ರಸಿದ್ಧಿ.

  • News18 Kannada
  • 2-MIN READ
  • Last Updated :
  • Uttara Kannada, India
  • Share this:

    ಉತ್ತರ ಕನ್ನಡ: ಶಾಂತವಾಗಿ ಹರಿಯುತ್ತಿರೋ ಅಘನಾಶಿನಿ ನದಿ. ದಡದಲ್ಲಿ ಗುಡಿ, ಗೋಪುರವಿಲ್ಲದೇ ನೆಲೆಯಾಗಿರುವ ಆರಾಧ್ಯ ದೇವತೆ. ಬಡವರ ಪಾಲಿಗೆ ಬಂಗಾರವನ್ನೇ ನೀಡ್ತಿದ್ದ ಈ ತಾಯಿಯೇ ಬಂಗಾರಮ್ಮ ದೇವಿ. ಈಕೆಯ (Bangaramma Devi) ಕಥೆಯಂತೂ ನಿಜಕ್ಕೂ ವಿಶಿಷ್ಟವಾದುದು.


    ಉತ್ತರ ಕನ್ನಡದ ಕುಮಟಾದ ದೀವಗಿಯಿಂದ ಮಣಕೋಣಕ್ಕೆ ಹೋಗೋ ದಾರಿಯಲ್ಲಿ ಅಘನಾಶಿನಿ ಹಿನ್ನೀರಲ್ಲಿ ಬಂಗಾರಮ್ಮ ದೇವಿಯ ಈ ಆಲಯ ಕಂಡುಬರುತ್ತೆ. ಹೇಳಿಕೊಳ್ಳೋದಕ್ಕೆ ಈಕೆ ಯಾವುದೇ ಗುಡಿ, ಗೋಪುರ, ಮಂದಿರವಿಲ್ಲ. ಅಘನಾಶಿನಿ ನದಿ ತಟವೇ ಈಕೆಗೆ ಎಲ್ಲವೂ ಆಗಿವೆ. ಅರಸಿ ಬರುವ ಭಕ್ತರನ್ನ ಹರಸಿ ಕಳಿಸೋದಷ್ಟೇ ಈ ಗ್ರಾಮ ದೇವತೆಗೆ ಗೊತ್ತು. ಜೊತೆಗಿರೋ ಮಹಾಸತಿ ವೃಕ್ಷವಷ್ಟೇ ಈಕೆಗೆ ಆಸರೆ. ಇಲ್ಲಿ ದೇವರ ಮುಖ ಮಾತ್ರ ನಮಗೆ ಕಾಣಲು ಸಾಧ್ಯ.


    ನಂಬಿ ಬಂದವರಿಗೆ ಆಭರಣ ನೀಡುತ್ತಿದ್ದ ದೇವಿ!
    ಬಡ ವರ್ಗದ ಜನರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಮೊದಲು ಈ ದೇವಿಯ ಆಭರಣಗಳನ್ನು ಊರು ಮಕ್ಕಳ ಮದುವೆಗೆ ಬಳಸಲಾಗುತ್ತಿತ್ತಂತೆ. ಕಾಲಾಂತರದಲ್ಲಿ ಆಸೆಗಳನ್ನು ಹರಕೆ ರೂಪದಲ್ಲಿ ಕಟ್ಟಿಕೊಂಡು ಇಲ್ಲಿ ಗಂಟೆಗಳನ್ನೂ ಜನ ನೀಡುತ್ತಾ ಬಂದರಂತೆ. ಒಂದು ಬಾರಿ ದೇವರಿಗೆ ಅಪಚಾರ ಮಾಡಿದ್ದಕ್ಕೆ ದೇವರ ಆಭರಣ ಹೊರಗಡೆ ಹೋಗುವುದು ನಿಂತಿದೆ. ಹೀಗಾಗಿ ಆಭರಣ ನೀಡ್ತಿದ್ರಿಂದಲೇ ಈಕೆಗೆ ಬಂಗಾರಮ್ಮ ಅನ್ನೋ ಹೆಸರು ಬಂದಿದೆ ಅನ್ನೋ ನಂಬಿಕೆಯಿದೆ.


    ಬೇಡಿದ್ದನ್ನು ಈಡೇರಿಸುವಳು!
    ಈಗಲೂ ಮಕ್ಕಳಾಗದವರ ಬೆಳ್ಳಿ ತೊಟ್ಟಿಲು ಕೊಟ್ಟು ಸಂತಾನ ಫಲ ಪಡೆದ ಉದಾಹರಣೆಗಳು ಇವೆಯಂತೆ. ಆದರೆ ವಿಶೇಷ ಅಂದ್ರೆ, ಮನುಷ್ಯ ಎಷ್ಟೇ ಆಡಂಬರ ಮಾಡಿದರು ಕಾಯಿ, ಬಾಳೆಗೊನೆ ಸಿಂಗಾರವಷ್ಟೇ ಇವಳ ಪಾಲಿಗೆ ಸಂತೃಪ್ತಿ ಕೊಡೋ ಹರಕೆಯಾಗಿವೆ.


    ಇದನ್ನೂ ಓದಿ: Shigehalli Ganapati Temple: ಭಕ್ತರ ಜೊತೆ ಮಾತನಾಡ್ತಾನಂತೆ ಬಯಲಲ್ಲೇ ನೆಲೆಸಿರುವ ಈ ಬಂಡೆ ಗಣಪ!




    ವರ್ಷಕ್ಕೆ ಇಷ್ಟೇ ದಿನ ಈ ದೇವಿಯ ದರ್ಶನ
    ಪ್ರತಿ ಸಂಕ್ರಾಂತಿಯಂದು ಇಲ್ಲಿ ಹಬ್ಬವಿರುತ್ತವೆ. ಪ್ರತೀ ಕಾರ್ತಿಕಕ್ಕೆ ರಂಗಪೂಜೆ, ಅಷ್ಟೇ ಅಲ್ಲದೇ ಈ ಊರಲ್ಲಿ ಪ್ರತಿ ಶುಕ್ರವಾರ ಮನೆಗೊಬ್ಬರು ಹೋಗಿ ಆವರ್ತನದ ಪ್ರಕಾರ ಪೂಜೆ ಪುನಸ್ಕಾರ ಮಾಡುತ್ತಾರೆ. ವರ್ಷಕ್ಕೆ ಎರಡೋ ಮೂರೋ ತಿಂಗಳು ಕಾಣೋ ಈ ದೇವರನ್ನು ನಂಬಿದ ಒಂದು ದೊಡ್ಡ ಸಂತತಿ ಕುಮಟಾದ ಸುತ್ತಲಿನ ಊರಿನಲ್ಲಿ ಸಿಗುತ್ತದೆ.


    ಇದನ್ನೂ ಓದಿ: Khapri Temple: ಮದ್ಯದ ಅಭಿಷೇಕ, ಬೀಡಿ ಸಿಗರೇಟಿನ ಆರತಿ; ಕಾರವಾರದಲ್ಲಿ ಆಫ್ರಿಕಾ ಮೂಲದ ದೇವರ ಜಾತ್ರೆ!


    ಬಡವರ ಸೌಭಾಗ್ಯದಾತೆ
    ಮೀನುಗಾರರು, ತೋಟಗಾರರು, ಹಾಲಕ್ಕಿ ಗೌಡರು, ಬಡಕಾರ್ಮಿಕರು ಎಲ್ಲರಿಗೂ ಈಕೆ ತಾಯಿ. ರಾಜಕಾರಣಿಗಳಿಗೆ, ಉದ್ಯೋಗಿಗಳಿಗೆ, ಸಿರಿವಂತರಿಗೆ ಎಲ್ಲರಿಗೂ ಸೌಭಾಗ್ಯದಾಯಿನಿ ಎಂದೇ ಬಂಗಾರಮ್ಮ ದೇವಿ ಪ್ರಸಿದ್ಧಿ. ಮಳೆಗಾಲ ಬರೋವರೆಗೆ ಈ ದೇವರ ದರ್ಶನ ಮಾಡಬಹುದು. ಕುಮಟಾದಿಂದ ಮಣಕೋಣಕ್ಕೆ ಬಸ್ಸುಗಳಿದ್ದು, ಇಲ್ಲಿಗೆ ಆಗಮಿಸಿ ಬಂಗಾರಮ್ಮ ದೇವಿ ದರ್ಶನ ಪಡೆದ್ರೆ ಬಾಳು ಬಂಗಾರವಾಗುತ್ತೆ ಅನ್ನೋ ನಂಬಿಕೆಯಿದೆ.


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: