ಕಾರವಾರ: ಸುತ್ತಲೂ ಅಬ್ಬರಿಸಿ ಬರೋ ದೈತ್ಯ ಅಲೆಗಳು. ಕಡಲದಡದಿಂದ ಅಣತಿ ದೂರದಲ್ಲಿ ಕಾಣೋ ದೇವಸ್ಥಾನ. ಬಂಡೆ ಕಲ್ಲುಗಳ ಸಾಲಿನಲ್ಲಿ ಸಾಗಿ ಹೋಗುವುದೆಂತು? ಅನ್ನೋ ಕುತೂಹಲ. ಇದುವೇ ನೋಡಿ ಸಮುದ್ರದ ಗಡಿ ಕಾಯೋ ದೇವರ (Sea God) ಆವಾಸ ಸ್ಥಾನ. ಅಂಕೋಲಾ ತಾಲೂಕಿನ (Temple's In Ankola) ಗಬಿತ್ ಕೇಣಿಯ ಅಂಚಿಗೆ ಇರುವ ಈ ದೇಗುಲದ ಹೆಸರು ಮಂಗ್ತೇಶ್ವರ ದೇವಸ್ಥಾನ. ಮಂಗ್ತೇಶ್ವರ ದೇವರು (Mangteshwar God) ಅರಬ್ಬೀ ಸಮುದ್ರದ ಗಡಿ ಕಾಯುವ ದೇವರು ಎಂದೇ ಪ್ರಸಿದ್ಧಿ ಪಡೆದಿದ್ದಾನೆ.
ಹೀಗಾಗಿ ಸಣ್ಣದಾಗಿ ಜಾಗ ಮಾಡಿಕೊಂಡಿರೋ ಇದಕ್ಕೆ ಮಂಗ್ತೇಶ್ವರ ದ್ವೀಪ ಅಂತಲೇ ಕರೆಯುತ್ತಾರೆ. ಈ ದೇವರನ್ನು ತಲುಪಲು ಇರೋದು ಮರಳು ಹಾಗೂ ಕಲ್ಲಿನಿಂದ ಹಿರಿಯರು ಮಾಡಿದ ಸೀ ವಾಕ್. ಆದರೆ ಬೆಳಿಗ್ಗೆಯಿಂದ ಸಂಜೆ ತನಕ ಭೋರ್ಗರೆಯುವ ಕಡಲು ಸಂಜೆ ತಣ್ಣಗಾದ ಮೇಲಷ್ಟೇ ಈ ದೇಗುಲ ಪ್ರವೇಶ ಹಾಗೂ ದೇವರ ದರ್ಶನ ಸಾಧ್ಯ. ಇಲ್ದೇ ಹೋದಲ್ಲಿ ದೂರದಲ್ಲೇ ಕಂಡು ಮಂಗ್ತೇಶ್ವರನಿಗೆ ಕೈ ಮುಗಿದು ಬೇಡಿಕೊಳ್ಳಬೇಕು.
ಕಡಲಿನ ಅಬ್ಬರದ ನಡುವೇ ದೇವಸ್ಥಾನದ ದಾರಿ!
ಆದರೆ ಕಡಲಿನ ಅಲೆಗಳ ಅಬ್ಬರ ಹೆಚ್ಚಿದ್ದಾಗ ಈ ಪುಟ್ಟದಾದ ಸೀ ವಾಕ್ ಮೇಲೂ ನೀರಿನ ಹೊಡೆತಗಳು ಜೋರಾಗಿಯೇ ಇರುತ್ತವೆ. ಅಂತಹ ಸಮಯದಲ್ಲಿ ಯಾರೂ ರಿಸ್ಕ್ ತೆಗೆದುಕೊಳ್ಳಲಾರರು.
ಇದನ್ನೂ ಓದಿ: Ganapathi Temple: ಉಪ್ಪಿಗಿಂತ ರುಚಿ ಬೇರೆ ಇಲ್ಲ ಅನ್ನೋ ಕುಮಟಾದ ಗಣಪ!
ಸಂಕ್ರಾಂತಿ ದಿನ ವಿಶೇಷ ಪೂಜೆ
ಸಂಕ್ರಾಂತಿಯ ದಿನ ಮಂಗ್ತೇಶ್ವರನಿಗೆ ವಿಶೇಷ ಪೂಜೆ ಇರುತ್ತದೆ. ಅಂದು ಬೆಸ್ತರು ದೋಣಿ ಮೂಲಕ ಕರೆದೊಯ್ಯುವ ವ್ಯವಸ್ಥೆ ಮಾಡುತ್ತಾರೆ. ಸಾಮಾನ್ಯವಾಗಿ ಈ ಭಾಗದಲ್ಲಿ ಕಡಲಿಗೆ ಇಳಿಯುವ ಯಾರೇ ಇದ್ರೂ ಅವರೆಲ್ಲರೂ ಈ ದೇವರನ್ನು ನೆನೆಯುವುದು ವಾಡಿಕೆ.
ಇದನ್ನೂ ಓದಿ: Fishermen Temple: ಮೀನುಗಾರರ ಮಹಾತಾಯಿ ಈ ದುರ್ಗಾಪರಮೇಶ್ವರಿ ದೇವಿ
ರಾಮೇಶ್ವರ ನೆನಪಾಗೋದು ಪಕ್ಕಾ!
ಸುಮಾರು ಮುಕ್ಕಾಲು ಕಿಲೋ ಮೀಟರ್ ದೂರದ ಕಲ್ಲು ರಾಶಿಯ ಈ ಸಂಪರ್ಕ ಸೇತು ಒಂದು ಕ್ಷಣ ಪಾಕ್ ಜಲಸಂಧಿಯಲ್ಲಿರೋ ರಾಮಸೇತುವನ್ನು ನೆನಪಿಸುವಂತಿದೆ. ಏನೇ ಇರಲಿ, ದ್ವೀಪ, ದ್ವೀಪಕ್ಕೆ ಅಂಟಿಕೊಂಡಂತಿರುವ ಈ ದೇಗುಲವು ಬೀಚ್ಗೆ ಬರುವವರನ್ನು ತನ್ನೆಡೆಗೆ ಕೈ ಬೀಸಿ ಕರೆಯೋದು ಸುಳ್ಳಲ್ಲ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ