Ghatiana Dwivarna: ಬಿಳಿ ಮೈ, ಕಾಲು ಚಾಕ್ಲೇಟ್ ಬಣ್ಣ! ಅಪರೂಪದ ಘಾಟಿಯಾನ ದ್ವಿವರ್ಣ ಏಡಿಯ ವಿಡಿಯೋ ನೋಡಿ

New Bicolor Crab: ಘಾಟಿಯಾನ ದ್ವಿವರ್ಣಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಅಂತಂದ್ರೆ ಸಾಕು ಹಸಿರು ಪಶ್ಚಿಮ ಘಟ್ಟವೇ ಕಣ್ತುಂಬಿ ಬರುತ್ತೆ. ಇದೇ ಯಲ್ಲಾಪುರದ ಬಾರೆ ಎಂಬ ಊರಲ್ಲೇ ಈ ಘಾಟಿಯಾನ ದ್ವಿವರ್ಣ ಏಡಿ ಪತ್ತೆಯಾಗಿದೆ.

ಘಾಟಿಯಾನ ದ್ವಿವರ್ಣ (ಚಿತ್ರಕೃಪೆ: ಹಿಮವತಿ ಭಟ್)

"ಘಾಟಿಯಾನ ದ್ವಿವರ್ಣ (ಚಿತ್ರಕೃಪೆ: ಹಿಮವತಿ ಭಟ್)"

  • Share this:
    ಉತ್ತರ ಕನ್ನಡ: ನಿಮಗೆ ಏಡಿ ಗೊತ್ತು, ಆದ್ರೆ ಬಿಳಿ ಬಣ್ಣದ ಏಡಿ ಗೊತ್ತಾ? ಗೊತ್ತಿರಲು ಸಾಧ್ಯವೇ ಇಲ್ಲ! ಏಕಂದ್ರೆ ಈ ಬಿಳಿ ಏಡಿ ಪತ್ತೆಯಾಗಿದ್ದೇ ಈಗ. ಅದ್ರಲ್ಲೂ ನಮ್ಮ ಪಶ್ಚಿಮ ಘಟ್ಟಗಳಲ್ಲಿ ಇಲ್ಲಿವರ್ಗೆ 74 ಪ್ರಬೇಧದ ಏಡಿಗಳಿದ್ವು, ಆದ್ರೆ ಇದೀಗ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ನೇ ವರ್ಷದಲ್ಲೇ 75 ಪ್ರಬೇಧದ ಏಡಿ ಪತ್ತೆಯಾಗಿದೆ. ಬಿಳಿ ಬಣ್ಣದ ಈ ಏಡಿ ಕಾಲುಗಳು  ಚಾಕ್ಲೇಟ್ ಬಣ್ಣದಲ್ಲಿವೆ (New Bicolor Crab) ಅನ್ನೋದು ಭಾರಿ ಅಚ್ಚರಿ ಮೂಡಿಸಿದೆ. ಈ ಹೊಸ ಏಡಿಗೊಂದು ಹೆಸರನ್ನೂ ಇಟ್ಟಿದ್ದಾರೆ ಸಂಶೋಧಕರು, ಅದೇ ಘಾಟಿಯಾನ ದ್ವಿವರ್ಣ (Ghatiana Dwivarna) ಅಥವಾ ಬೈಕಲರ್.

    ಘಾಟಿಯಾನ ದ್ವಿವರ್ಣ (ಚಿತ್ರಕೃಪೆ: ಹಿಮವತಿ ಭಟ್)


    ಪ್ರಪಂಚದಲ್ಲಿ 4000 ಜಾತಿಯ ಏಡಿಗಳಿವೆ ಅನ್ನೋದು ವಿಜ್ಞಾನಿಗಳ ಅಂದಾಜು. ಈ ಪೈಕಿ ನಮ್ ದೇಶದಲ್ಲಿ ಇರೋದೇ 125 ತಳಿಯ ಏಡಿಗಳು. ಸದ್ಯ ಪತ್ತೆಯಾಗಿರೋದು ಘಾಟಿಯಾನ ಎಂಬ ಜೀನ್ಸ್‌ನ ಏಡಿಯಂತೆ. ಅಂದ್‌ಹಾಗೆ ಈವರೆಗೆ 13 ಥರದ ಘಾಟಿಯಾನ ಏಡಿ ಸಿಕ್ಕಿದೆ, ಇದು 14 ನೇಯದ್ದು ಅಂತಾರೆ ವನ್ಯಜೀವಿ ತಜ್ಞರು.

    ಇದನ್ನೂ ಓದಿ: Havyaka Food Recipes: ಭಾರೀ ರುಚಿರುಚಿ ಹವ್ಯಕರ ಹಲಸಿನ ಬುಡ್ನಾ ! ಇಲ್ಲಿದೆ ರೆಸಿಪಿ

    ಕಂಡು ಹಿಡಿದವರ್ಯಾರು?
    ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಅಂತಂದ್ರೆ ಸಾಕು ಹಸಿರು ಪಶ್ಚಿಮ ಘಟ್ಟವೇ ಕಣ್ತುಂಬಿ ಬರುತ್ತೆ. ಇದೇ ಯಲ್ಲಾಪುರದ ಬಾರೆ ಎಂಬ ಊರಲ್ಲೇ ಈ ಘಾಟಿಯಾನ ದ್ವಿವರ್ಣ ಏಡಿ ಪತ್ತೆಯಾಗಿದೆ. ನೈಸರ್ಗಿಕ ವಿಜ್ಞಾನಿ ಗೋಪಾಲಕೃಷ್ಣ ಹೆಗಡೆ, ಅರಣ್ಯ ಇಲಾಖೆ ಸಿಬ್ಬಂದಿ ಪರಶುರಾಮ ಪ್ರಭು ಭಜಂತ್ರಿ, ಸಮೀರಕುಮಾರ್ ಪತಿ ಮತ್ತು ತೇಜಸ್ ಠಾಕ್ರೆ ತಂಡವು ಈ ಸಿಹಿನೀರಿನ ಏಡಿಯನ್ನ ಪತ್ತೆಹಚ್ಚಿದೆ.

    Ghatiana dwiwarna video a white crab found in western ghats near yellapur uttara kannada
    ಘಾಟಿಯಾನ ದ್ವಿವರ್ಣ (ಚಿತ್ರಕೃಪೆ: ಹಿಮವತಿ ಭಟ್)


    ಇದನ್ನೂ ಓದಿ: Uttara Kannada: ಗೋಕರ್ಣದಲ್ಲಿ ಹೆಣ್ಣು ಹೆಣ್ಣಿಗೆ ಮದುವೆ! ಅದ್ದೂರಿ ವಿಡಿಯೋ ನೋಡಿ

    ಹೇಗೆ ಬದುಕುತ್ತವೆ ಗೊತ್ತೇ?
    ಘಾಟಿಯಾನ ದ್ವಿವರ್ಣ ಬದುಕೋದು ಕಲ್ಲುಬಂಡೆಗಳ ಬಿರುಕಲ್ಲಿ! ಸಣ್ ಸಣ್ ಹುಳು, ಪಾಚಿನೇ ಇದರ ಭಕ್ಷ್ಯಭೋಜನ! ಈ ಏಡಿ ಇಲ್ಲಾ ಅಂದ್ರೆ ಆಹಾರ ಸರಪಳಿಯೇ ಕಟ್ ಆಗಿಬಿಡುತ್ತೆ! ಇದ್ರಿಂದಾನೇ ಪರಿಸರ ವ್ಯವಸ್ಥೆ ಸರ್ಯಾಗಿ ನಡೆಯುತ್ತೆ ಅಂತಾರೆ ಸಂಶೋಧಕರು
    Published by:guruganesh bhat
    First published: