Ganesh Chaturthi: ವಾವ್! ಗಣೇಶನ ಜೊತೆ ನಮ್ಮ ಅಪ್ಪು ಪ್ರತ್ಯಕ್ಷ!

Power Star Puneeth Rajkumar: ಗಣೇಶೋತ್ಸವ ಸಂಭ್ರಮದಲ್ಲೂ ಪುನೀತ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಮರೆತಿಲ್ಲ. ಸಾರ್ವಜನಿಕವಾಗಿ ಪೂಜಿಸಲ್ಪಡುವ ಗಣೇಶನ ಜೊತೆಗೆ ಅಪ್ಪು ಕೂಡಾ ಪೂಜನೀಯ ಸ್ಥಾನ ಪಡೆದುಕೊಂಡಿದ್ದಾರೆ. 

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಉತ್ತರ ಕನ್ನಡ: ವಿಘ್ನ ವಿನಾಯಕನ ಹಬ್ಬದಲ್ಲೂ ಅಪ್ಪು ನೆನಪು.. ಈ ಬಾರಿ ಕನ್ನಡದ ಕೋಟ್ಯಾಧಿಪತಿಯಲ್ಲಿ ಗಣೇಶನೇ ಕೋಟ್ಯಾಧೀಶ್ವರ. ಪವರ್ ಸ್ಟಾರ್, ಏಕದಂತ ಒಂದಾಗಿದ್ದು ಕಣ್ಣುಗಳೆರಡು ಸಾಲುತ್ತಿಲ್ಲ ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು! ನಮ್ಮ ಪುನೀತ್ ರಾಜ್​ಕುಮಾರ್ (Puneeth Rajkumar) ಅವರ ನೆನಪು ಜನ ಇನ್ನೂ ಮರೆತಿಲ್ಲ ಅನ್ನೋದಕ್ಕೆ ಗಣೇಶ ಚತುರ್ಥಿಯೂ (Ganesh Chaturthi) ಸಾಕ್ಷಿ ಹೇಳುತ್ತಿದೆ. ಹೌದು, ಗಣೇಶ ಹಬ್ಬಕ್ಕೆ ವಿವಿಧ ಭಂಗಿಯ ಗಣಪತಿಯ ಮೂರ್ತಿಗಳು ತಯಾರಿಸುವುದು ಕಾಮನ್. ಈ ವರ್ಷ ಪುನೀತ್ ರಾಜ್​ಕುಮಾರ್ ಸಹ ಗಣಪತಿ ಜೊತೆ ಕಾಣಿಸಿಕೊಂಡಿದ್ದಾರೆ.

    ಅಪ್ಪು ಕೋಟ್ಯಾಧಿಪತಿ ಗೆಟಪ್!
    ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಲಂಬೋದರ ಹಾಟ್ ಸೀಟಿನಲ್ಲಿ ಕುಳಿತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೆ ಕನ್ನಡದ ಕೋಟ್ಯಾಧಿಪತಿ ಆಡಲು ಬರ್ತಿದ್ದು, ಈ ಗಣಪನನ್ನ ನೋಡಲು ಜನ ಮುಗಿಬೀಳುತ್ತಿದ್ದಾರೆ.



    ಹಾಟ್ ಸೀಟ್ ನಲ್ಲಿ ಗಣಪ
    ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ದಿನೇಶ್ ಮೇತ್ರಿಯೇ ಈ ಕಲೆಯ ಹಿಂದಿನ ಮಾಂತ್ರಿಕ. ಒಂದು ಕಡೆ ಸೂಟು ಬೂಟು ಹಾಕಿಕೊಂಡು ಅಪ್ಪು ಸರ್ ಎಂದಿನಂತೆ ಮುಗುಳ್ನಗೆಯಲ್ಲಿ ಕಪ್ಪು ಕೂಲಿಂಗ್ ಗ್ಲಾಸ್ ಧರಿಸಿ ಕೂತಿದ್ರೆ, ಇತ್ತ ಗಜಮುಖ ಹಾಟ್ ಸೀಟ್​ನಲ್ಲಿ ಕೂತು ಪ್ರಶ್ನೆ ಎದುರಿಸಲು ಸಿದ್ಧನಾಗಿದ್ದಾನೆ. ಇದನ್ನ ಕಣ್ತುಂಬಿಕೊಳ್ಳಲೆಂದೇ ನೂರಾರು ಜನ ಆಗಮಿಸುತ್ತಿದ್ದು, ಪುನೀತ್ ರಾಜ್ ಕುಮಾರ್ ನಿಜವಾದ ರಾಜಕುಮಾರ ಅನ್ನೋದನ್ನ ಮರೆಯುವಂತಿಲ್ಲ.

    ಇದನ್ನೂ ಓದಿ: Ganesh In Tree: ಮರದಲ್ಲಿ ಮೂಡಿದ ಗಣಪ! ಪ್ರಕೃತಿ ವಿಸ್ಮಯಕ್ಕೆ ಗಣೇಶನೇ ಸಾಕ್ಷಿ!

    ಪವರ್ ಸ್ಟಾರ್ ಜೊತೆ ಸಾರ್ವಜನಿಕ ಗಣಪ
    ಅವರ್ಸಾ ಗ್ರಾಮದ ಮೇತ್ರಿ ಮನೆತನವು ಮೂರ್ತಿ ತಯಾರಿಕೆಯಲ್ಲಿ ಎತ್ತಿದ ಕೈ. ಅಂತೆಯೇ ಈ ಬಾರಿ ಗಣೇಶೋತ್ಸವಕ್ಕೆ ವಿವಿಧ ಗಾತ್ರ, ಆಕಾರಗಳ ಮೂರ್ತಿಯನ್ನ ಕೆತ್ತಿದ್ದಾರೆ. ಅದ್ರಲ್ಲೂ ಅವರ್ಸಾ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪವರ್ ಸ್ಟಾರ್ ಜೊತೆಗೆ ಗಣೇಶ ಕೂತ ಮೂರ್ತಿಯನ್ನು ಪ್ರತಿಷ್ಠಾಪಿಸಲು ಮುಂದಾಗಿದೆ. ಹಾಗಾಗಿ ಇದನ್ನ ಮೇತ್ರಿ ಕುಟುಂಬವು ಅಷ್ಟೇ ಅಚ್ಚುಕಟ್ಟಾಗಿ ನಿರ್ಮಿಸಿದ್ದು ಪ್ರತಿಷ್ಠಾಪನೆ ಮಾಡುವ ಮುನ್ನವೇ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

    ಇದನ್ನೂ ಓದಿ: Dodda Ganapathi Temple: ಮದುವೆ, ಕಳ್ಳತನ ಎಲ್ಲ ಸಮಸ್ಯೆಗೂ ಪರಿಹಾರ! ಶಿರಸಿ ದೊಡ್ಡ ಗಣಪತಿಯ ಮಹಿಮೆಯೂ ದೊಡ್ಡದು

    ಒಟ್ಟಿನಲ್ಲಿ ಗಣೇಶೋತ್ಸವ ನೆಪದಲ್ಲಾದರೂ ಪುನೀತ್ ರಾಜ್ ಕುಮಾರ್ ನೆನಪು ಸದಾ ಇರುವಂತೆ ಮಾಡಲು ಕನ್ನಡಿಗರು ಈ ರೀತಿಯಲ್ಲಾದ್ರೂ ಗಣೇಶೋತ್ಸವ ಆಚರಿಸಲು ಮುಂದಾಗಿರುವುದು ವಿಶೇಷವೇ ಸರಿ.
    Published by:guruganesh bhat
    First published: